ಅನಿವಾಸಿ ಕನ್ನಡಿಗರ ವಿಶೇಷ

ಅಭಾ : ಬಾಬರಿ ಮಸ್ಚಿದ್ ಧ್ವಂಸವು ಭಾರತದ ಜಾತ್ಯತೀತ ಪರಂಪರೆಯ ಧ್ವಂಸ ; ಸಲೀಂ ಗುರುವಾಯನಕೆರೆ

ಖಮೀಸ್ ಮುಷ್ಯತ್ -ಸೌದಿ ಅರೇಬಿಯಾ : ಜಾತ್ಯತೀತ ಭಾರತ ದೇಶದಲ್ಲಿ ಬಾಬರಿ ಮಸ್ಜಿದ್ ಎಂಬುದು ಕೇವಲ ಮುಸ್ಲಿಮರ ಪ್ರಾರ್ಥನಾಲಯವಾಗಿರದೆ ಪ್ರಜಾತಂತ್ರ ವ್ಯವಸ್ಥೆಯು ಒದಗಿಸಿರುವ ಧಾರ್ಮಿಕ ಸ್ವಾತಂತ್ರ್ಯದ ಸಂಕೇತವೂ ಆಗಿತ್ತು. 467 ವರ್ಷಗಳ ಇತಿಹಾಸವಿರುವ ಮುಸ್ಲಿಮರ ಶ್ರದ್ಧಾ ಕೇಂದ್ರವನ್ನು ಫ್ಯಾಸಿಸ್ಟ್ ಶಕ್ತಿಗಳು ಧ್ವಂಸಗೊಳಿಸುವ ಮೂಲಕ ಸಂವಿಧಾನದ ಮೇಲೆ ದಾಳಿ ನಡೆಸಿದ್ದರು. ಆ ಹೊಡೆತದ ಪರಿಣಾಮವನ್ನು ಇಂದಿಗೂ ಭಾರತದ ಅಲ್ಪಸಂಖ್ಯಾತ ಸಮುದಾಯ, ದಲಿತ ಸಮುದಾಯ ಹಾಗೂ ಇತರ ಹಿಂದುಳಿದ ವರ್ಗಗಳು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂವಿಧಾನವು ನೀಡಿರುವ ಅವಕಾಶ, ಹಕ್ಕುಗಳನ್ನು ಪಡೆಯಲು ಸಂವಿಧಾನದ ಮೇಲಿನ ಭರವಸೆಗಳನ್ನು ಉಳಿಸಿಕೊಳ್ಳುತ್ತಾ ಪ್ರಜಾಸತ್ತಾತ್ಮಕ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಇದರ ಜಿಲ್ಲಾ ಸಮಿತಿ ಸದಸ್ಯರಾದ ಸಲೀಂ ಗುರುವಾಯನಕೆರೆ ಅವರು ತಿಳಿಸಿದರು ಅವರು ಇಂಡಿಯನ್ ಸೋಶಿಯಲ್ ಫಾರಂ, ಕರ್ನಾಟಕ ಚಾಪ್ಟರ್, ಅಭಾ – ಖಮೀಸ್ ಮುಶ್ಯತ್ ಘಟಕದ ವತಿಯಿಂದ ಗುರುವಾರ ರಾತ್ರಿ ಖಮೀಸ್ ಮುಷ್ಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಬಾಬರಿ ಮಸ್ಜಿದ್ ಮರಳಿ ಪಡೆಯೋಣ ಭಾರತವನ್ನು ಮರಳಿ ಗಳಿಸೋಣ ’ ಎಂಬ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿಷಯವನ್ನು ಮಂಡಿಸಿ ಮಾತನಾಡಿದರು

ರಾಜಕೀಯವಾಗಿ ಅಧಿಕಾರ ಪಡೆಯಲು ಬಿಜೆಪಿಯು ಕಂಡುಕೊಂಡ ಸೂತ್ರವಾಗಿದೆ ಬಾಬರಿ ಮಸೀದಿ ಧ್ವಂಸ. ಅದನ್ನು ಪುನರ್ ನಿರ್ಮಿಸುವುದರೊಂದಿಗೆ, ಧ್ವಂಸಗೈದ ಆರೋಪಿಗಳಿಗೆ ಶಿಕ್ಷೆಯಾಗುವವರೆಗೆ ನಮ್ಮ ಸಂವಿಧಾನ ಬದ್ಧವಾದ ಹೋರಾಟವು ನಿರಂತರವಾಗಿರುತ್ತದೆ ಎಂದರು. ಸಂಘಪರಿವಾರವು ಸಹಬಾಳ್ವೆಯನ್ನು ಒಡೆಯುವುದಕ್ಕೊಸ್ಕರ ಬಾಬರಿಯನ್ನು ಬಳಸಲಾಗಿದೆ. ಮತ್ತು ಪ್ರಸಕ್ತ ಸನ್ನಿವೇಶದಲ್ಲಿ ಜೀವಕ್ಕೆ ನೀಡದ ಬೆಲೆ, ದನಗಳಿಗೆ ನೀಡುತ್ತಿರುವುದು ವಿಪರ್ಯಾಸವೆಂದು ಅವರು ಅಭಿಪ್ರಾಯಪಟ್ಟರು

ಇಂಡಿಯನ್ ಸೋಶಿಯಲ್ ಫಾರಂ ಅಭಾ ಘಟಕದ ಕಾರ್ಯದರ್ಶಿ ಸಾದಿಕ್ ಉಳ್ಳಾಲ ಅಧ್ಯಕ್ಷತೆಯನ್ನು ವಹಿಸಿದ್ದರು, ಇಂಡಿಯನ್ ಸೋಶಿಯಲ್ ಫಾರಂ ಅಭಾ ವಲಯದ ಅಧ್ಯಕ್ಷರಾದ ಶರಫುದ್ದೀನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಇಂಡಿಯನ್ ಫ್ರೆಟರ್ನಿಟಿ ಫಾರಂ ಜಿದ್ದಾ ಜಿಲ್ಲ್ಲಾ ಸಮಿತಿ ಸದಸ್ಯರಾದ ಇರ್ಷಾದ್ ಲಕ್ನೋ , ಇಂಡಿಯನ್ ಫ್ರೆಟರ್ನಿಟಿ ಫಾರಂ ಅಭಾ ವಲಯ ಕಾರ್ಯದರ್ಶಿ ಹನೀಫ್ ಜೋಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು ಆರಿಫ್ ಬೆಳಪು ಸ್ವಾಗತಿಸಿ, ಅಶೀರ್ ಪುಂಜಾಲಕಟ್ಟೆ ವಂದಿಸಿದರು. ಬದ್ರುದ್ದೀನ್ ಮೈಂದಾಳ ಕಾರ್ಯಕ್ರಮವನ್ನು ನಿರೂಪಿಸಿದರು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group