ರಾಷ್ಟ್ರೀಯ ಸುದ್ದಿ

ಮತಯಂತ್ರ ಇಟ್ಟಿದ್ದ ಭದ್ರತೆಯ ಕೋಣೆಯೊಳಗೆ ಲ್ಯಾಪ್ ಟಾಪ್ ನೊಂದಿಗೆ ಸಿಕ್ಕಿ ಬಿದ್ದ ಇಬ್ಬರ ಬಂಧನ

ವರದಿಗಾರ(ಡಿ.07):  ಇವಿಎಂ ಮತಯಂತ್ರಗಳನ್ನು ಇಟ್ಟಿದ್ದ ಭದ್ರತೆಯ ಕೋಣೆಯೊಳಗೆ ಲ್ಯಾಪ್ ಟಾಪ್ ನೊಂದಿಗೆ ಸಿಕ್ಕಿಬಿದ್ದ ಅಘಾತಕಾರಿ ಘಟನೆ ಜಗದಾಲಪುರ ( ಛತ್ತೀಸ್ ಗಢ )ದಿಂದ ವರದಿಯಾಗಿದೆ. ಭದ್ರತೆಯ ಕೋಣೆಯೊಳಗೆ ಅನುಮಾನಾಸ್ಪದವಾಗಿ ಕಂಡು ಬಂದ ಇಬ್ಬರನ್ನು ಧಾರಂಪುರಾ ಜಗದಲ್ಪುರದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭದ್ರತೆಯ ಕೋಣೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಲ್ಯಾಪ್ ಟಾಪ್ ಜೊತೆಗೆ ಇಬ್ಬರು ಅತ್ಯಂತ ಭದ್ರತೆಯ ಕೋಣೆಯೊಳಗೆ ಭದ್ರತೆ ಭೇದಿಸಿ ಹೇಗೆ ಹೋದರು? ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

” ಸೂಕ್ತ ಗುರುತಿನ ಚೀಟಿ ಇಲ್ಲದೆ ಭದ್ರತೆಯ ಕೋಣೆಯೊಳಗೆ ಹೋಗುವಂತಿಲ್ಲ . ಇವರಿಬ್ಬರು ಹೇಗೆ ಹೋದರು ಎಂದು ಗೊತ್ತಾಗುತ್ತಿಲ್ಲ. ಇಬ್ಬರು ತಾವು ರಿಲಯನ್ಸ್ ಜಿಯೋ ಕಂಪೆನಿಯ ಉದ್ಯೋಗಿಗಳು ಎಂದು ಹೇಳುತ್ತಿದ್ದಾರೆ . ಈ ಬಗ್ಗೆ ತನಿಖೆ ನಡೆಯುತ್ತಿದೆ ” ಎಂದು ಪೊಲೀಸರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎ ಎನ್ ಐ ಟ್ವೀಟ್ ಮಾಡಿದೆ. ಸ್ಟ್ರಾಂಗ್ ರೂಮ್ ಭದ್ರತೆಗಾಗಿ ನಿಯೋಜಿತ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಈ ಸಂಬಂಧ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

ಭದ್ರತೆಯ ಕೋಣೆಯೊಳಗೆ  ಬ್ಯಾಗ್ ಜೊತೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿದ ಬಳಿಕ ಇಬ್ಬರನ್ನು ವಶಕ್ಕೆ ಪಡೆಯಲಾಯಿತು ಎಂದು ತಿಳಿದು ಬಂದಿದೆ. 12 ಮತ್ತು 20 ನವೆಂಬರ್ ಗಳಂದು ಎರಡು ಹಂತಗಳಲ್ಲಿ ಈ ರಾಜ್ಯದಲ್ಲಿ ಮತದಾನ ನಡೆದಿತ್ತು ಎಂಬುವುದು ಗಮನಾರ್ಹ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group