ರಾಜ್ಯ ಸುದ್ದಿ

ನನಗೆ ಮೊದಲೇ ಗೊತ್ತಿರುತ್ತಿದ್ದರೆ ಪೊಲೀಸರೇ ದಯವಿಟ್ಟು ಅವರನ್ನು ಒಳಗೆ ಬಿಡಿ ಎಂದು ಹೇಳುತ್ತಿದ್ದೆ: ಪ್ರಕಾಶ್ ರೈ

‘ಶಬರಿಮಲೆ ವಿವಾದ ನಮಗೊಂದು ಸುವರ್ಣಾವಕಾಶವೆಂದಿದ್ದ ಬಿಜೆಪಿಯದ್ದು ನೀಚ ರಾಜಕೀಯ’

‘ಸುಳ್ಳು ಹೇಳಿಕೊಂಡು ಬದುಕುತ್ತಿದ್ದಾರಲ್ವಾ ಅವರ ಬಗ್ಗೆ ನೀವು ಎಚ್ಚರಿಕೆಯಿಂದಿರಿ’

ವರದಿಗಾರ (ಡಿ.01): ನನಗೆ ಮೊದಲೇ ಗೊತ್ತಿರುತ್ತಿದ್ದರೆ, ಪೊಲೀಸರೇ, ದಯವಿಟ್ಟು ಅವರನ್ನು ಒಳಗೆ ಬಿಡಿ, ಸಂವಾದನಾದರೂ ಮಾಡೋಣ. ಮಾತನಾಡೋಣ ಅಂತಿದ್ದೆ ಎಂದು ಬಹುಭಾಷಾ ನಟ, ಹೋರಾಟಕ್ಕೆ ಧುಮುಕಿದ ಪ್ರಕಾಶ್ ರೈ ಹೇಳಿದ್ದಾರೆ.

ಮಂಗಳೂರಿನಲ್ಲಿ ನಡೆಯುತ್ತಿರುವ ಜನನುಡಿ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಆಗಮಿಸುತ್ತಿದ್ದ ಪ್ರಕಾಶ್ ರೈ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಪ್ರಯತ್ನಿಸಿದ್ದ ಹಿಂದೂ ಜಾಗರಣಾ ವೇದಿಕೆ ಸಂಘಟನೆಗಳ ಕಾರ್ಯಕರ್ತರ ಬಗ್ಗೆ ಅವರು ಉದ್ಘಾಟನಾ ಕಾರ್ಯಕ್ರಮದ ಅತಿಥಿ ಭಾಷಣದಲ್ಲಿ  ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಈಗಲೂ ಕೆಲವು ಜನರು ಹೊರಗಡೆ ಬಂದು ಜಪ ಮಾಡಿದ್ರು. ಪಾಪ, ಹೋದಲ್ಲೆಲ್ಲಾ ಬರೋದು. ಪೊಲೀಸರಿಂದ ಬೈಗುಳ ತಿನ್ನುವುದು. ಜನರಿಂದ ಬೈಗುಳ ತಿನ್ನುವುದು. ಅದೇನು ಸಿಗುತ್ತೆ ಅವರಿಗೆ? ನನಗೆ ಮೊದಲೇ ಗೊತ್ತಿರುತ್ತಿದ್ದರೆ, ಪೊಲೀಸರೇ, ದಯವಿಟ್ಟು ಅವರನ್ನು ಒಳಗೆ ಬಿಡಿ, ಸಂವಾದನಾದರೂ ಮಾಡೋಣ. ಮಾತನಾಡೋಣ ಅಂತ ಹೇಳುತ್ತಿದ್ದೆ. ಯಾಕೆಂದರೆ ನಮಗೆ ಧ್ವೇಷಿಸುವುದು, ಜಗಳವಾಡೋದು ಗೊತ್ತಿಲ್ಲ. ಭಿನ್ನಾಭಿಪ್ರಾಯಗಳಿಗೆ ಸಂವಾದ ಮಾಡೋದು ಗೊತ್ತು’ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಶಬರಿಮಲೆ ವಿವಾದವನ್ನು ಪ್ರಸ್ತಾಪಿಸುತ್ತಾ, ‘ಅದು ಕೆಲವರ ನಂಬಿಕೆ. ಶಬರಿಮಲೆಯಂತಹ ಜನರ ನಂಬಿಕೆಯನ್ನ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಸ್ಥಳೀಯ ಅಧ್ಯಕ್ಷ ಮುಕ್ತವಾಗಿ ಅಲ್ಲಿನ ಸದಸ್ಯರಿಗೆ ‘ಇದು ನಮಗೊಂದು ಸುವರ್ಣಾವಕಾಶ. ಇದನ್ನು ಬಳಸಿಕೊಂಡು ಕೇರಳ ರಾಜ್ಯದಲ್ಲಿ ನಮ್ಮ ರಾಜಕೀಯವನ್ನು ಬೆಳೆಸಬಹುದು’ ಎಂದು ಹೇಳಿದ್ದಾರೆಂದರೆ ಇಷ್ಟೊಂದು ಕೆಟ್ಟ ಮಾತು, ನೀಚ ಆಲೋಚನೆಯನ್ನು ಮಾಡಿದ್ರು ನಾವು ನೋಡ್ತಾನೆ ನಿಂತಿದ್ದೇವೆ’ ಎಂದು ಮತ್ತು ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಅದರಿಂದ ತನ್ನ ರಾಜಕೀಯ ಬೇಳೆಬೇಯಿಸಿಕೊಳ್ಳಲು ಪ್ರಯತ್ನಿಸಿದ ಬಿಜೆಪಿಯ ಬಗ್ಗೆ ಪ್ರಕಾಶ್ ರೈ ಆತಂಕ ವ್ಯಕ್ತಪಡಿಸಿದ್ದಾರೆ.

‘ಧರ್ಮ, ಆಚಾರ, ವಿಚಾರ ಎಂಬುವುದು ಅದು ನಿಮ್ಮ ನಿಮ್ಮ ವೈಯಕ್ತಿಕ ಅಭಿಪ್ರಾಯ ಮತ್ತು ಅದು ನಿಮ್ಮ ಬದುಕು. ಅದು ನಿಮಗೆ ಉದ್ಯೋಗ ಕೊಡುವುದಿಲ್ಲ, ನಿಮ್ಮ ಹಸಿವನ್ನು ನೀಗಿಸೋದಿಲ್ಲ, ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡುವುದಿಲ್ಲ , ಒಂದು ಸಮಾಜ ವೈಜ್ಞಾನಿಕವಾಗಿ ಬೆಳೆಯುವುದಕ್ಕೆ ಬಿಡುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳದೆ ನಿಮ್ಮ ಅತೀ ಪ್ರೀತಿಯನ್ನ ಉಪಯೋಗಿಸಿಕೊಂಡು ಸುಳ್ಳು ಹೇಳಿಕೊಂಡು ಬದುಕುತ್ತಿದ್ದಾರಲ್ವಾ ಅವರ ಬಗ್ಗೆ ನೀವು ಎಚ್ಚರಿಕೆಯಿಂದಿರಬೇಕು’ ಎಂದು ಸಮಾಜವನ್ನು, ದೇಶದ ಸೌಹಾರ್ದತೆಯನ್ನು ಒಡೆಯಲು ಪ್ರಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಜಾಗೃತರಾಗಿ ಎಂದು ಪ್ರಕಾಶ್ ರೈ ನೆರೆದಿದ್ದ ಜನಸ್ತೋಮಕ್ಕೆ ಕರೆ ನೀಡಿದ್ದಾರೆ.

 

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group