ಅನಿವಾಸಿ ಕನ್ನಡಿಗರ ವಿಶೇಷ

ಮಂಗಳೂರು ಯುವಕನಿಗೆ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಘಟಕದ ನೆರವಿನ ಹಸ್ತ

ರಿಯಾದ್: ಸುಮಾರು ಮೂರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮಂಗಳೂರು ಯುವಕನಿಗೆ ನೆರವು ನೀಡಿ ಎಂಬ ಸಂದೇಶವೊಂದರ ಜಾಡುಹಿಡಿದು ಕಾರ್ಯಪ್ರವೃತ್ತರಾದ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಘಟಕವು ಓರ್ವ ಯುವಕನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸುವಲ್ಲಿ ಸಫಲವಾಗಿದೆ. ಮುಡಿಪು ಬಾಳೆಪುಣಿ ಮೂಲದ ನಿವಾಸಿಯಾದ ಮುಹಮ್ಮದ್ ಶರೀಫ್ ಕಳೆದೊಂದು ವರ್ಷದ ಹಿಂದೆ ಹೌಸ್ ಡ್ರೈವರ್ ವೀಸಾದಲ್ಲಿ ರಿಯಾದ್ ನಗರಕ್ಕೆ ಬಂದಿದ್ದರು. ಆದರೆ ಮನೆಯೊಡತಿ (ಕಫೀಲ್) ವಾಹನ ಪರವಾನಿಗೆ ಮಾಡಿಕೊಡದೆ ವಾಹನದಲ್ಲಿ ರಸ್ತೆಬದಿ ಊಟೋಪಹಾರ ಮಾರುವ ಕೆಲಸವನ್ನು ನೀಡಿದ್ದರು. ಸರಿಯಾಗಿ ಸಂಬಳವನ್ನೂ ನೀಡದೆ ದೈಹಿಕ ಹಿಂಸೆಯನ್ನೂ ನೀಡಿ ದಿನದ ಹದಿನಾರು ಘಂಟೆಗಳ ಕಾಲ ದುಡಿಸುತ್ತಿದ್ದರು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶರೀಫ್ ರವರು ಅನಾರೋಗ್ಯ ಪೀಡಿತರಾಗಿ ಕೆಲಸಕ್ಕೆ ಹೋಗದಿದ್ದಾಗ ಪಲಾಯನ (ಉರೂಬ್) ಕೇಸು ದಾಖಲಿಸಿದ್ದರು.


ಈ ಎಲ್ಲಾ ಘಟನೆಗಳಿಂದ ಅಸಹಾಯಕರಾಗಿದ್ದ ಶರೀಫ್ ರವರು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದರಿಂದ ಇಂಡಿಯನ್ ಸೋಶಿಯಲ್ ಫೋರಂ ಸಹಾಯ ಹಸ್ತವನ್ನು ನೀಡಿ ಕಾರ್ಮಿಕ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿತ್ತು. ಮನೆಯೊಡತಿಯ ನಿರಾಸಕ್ತಿಯಿಂದ ಕಾರ್ಮಿಕ ನ್ಯಾಯಾಲಯ ಮೇಲು ಹಂತದ ಕೋರ್ಟಿಗೆ ಕೇಸನ್ನು ವರ್ಗಾಯಿಸಲಾಗಿತ್ತು. ಆದರೂ ಕೇಸಿನ ದೀರ್ಘಾವಧಿಯ ಮನಗಂಡು ದಾನಿಗಳ ಸಹಾಯದಿಂದ ಭಾರತೀಯ ದೂತವಾಸವನ್ನು ಸಂಪರ್ಕಿಸಿ ಬೇಕಾದ ಎಲ್ಲ ರೀತಿಯ ದಾಖಲೆ ಪತ್ರವನ್ನು ಸಿದ್ದಪಡಿಸಿ ಶರೀಫ್ ರವರನ್ನು ಇಂಡಿಯನ್ ಸೋಶಿಯಲ್ ಫೋರಂ ತವರೂರಿಗೆ ಕಳುಹಿಸಲು ನೆರವಾಗುದರ ಮೂಲಕ ಅನಿವಾಸಿಗಳ ಪ್ರಶಂಸೆಗೆ ಪಾತ್ರವಾಯಿತು.
ಈ ಕಾರ್ಯದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರಾದ ಸಾಬಿತ್ ಹಸನ್ ಬಜ್ಪೆ, ರಹ್ಮಾನ್ ತುಂಬೆ, ಶಬೀರ್ ಮುಡಿಪು, ಅಬ್ದುಲ್ ಸಾಬಿತ್ ಬಜ್ಪೆ ರವರು ಶ್ರಮವಹಿಸಿದ್ದರು. ಶರೀಫ್ ರವರ ಕುಟುಂಬಸ್ಥರು ಸಾಮಾಜಿಕ ಜಾಲತಾಣ ಮುಖಾಂತರ ಇಂಡಿಯನ್ ಸೋಶಿಯಲ್ ಫಾರಂ ಸದಸ್ಯರಿಗೆ ಧನ್ಯವಾದವನ್ನು ತಿಳಿಸಿರುತ್ತಾರೆ.


ಎಸ್ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟೆ, ಜಿಲ್ಲಾ ಸಮಿತಿ ಸದಸ್ಯ ಇಸ್ಮಾಯಿಲ್ ಇಂಜಿನಿಯರ್, ಹಮೀದ್ ಬಜ್ಪೆ, ರಹೀಮ್ ಭಟ್ರಕೆರೆ ರವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು ಎಂದು ಇಂಡಿಯನ್ ಸೋಶಿಯಲ್ ಫೋರಮ್, ಕರ್ನಾಟಕ ರಾಜ್ಯ ಸಮಿತಿ, ರಿಯಾದ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group