ವರದಿಗಾರ : ಕಳೆದ ವರ್ಷ ಜೂನ್ ತಿಂಗಳಲ್ಲಿ ಸಂಘಪರಿವಾರದ ಮತಾಂಧ ಕೊಲೆಗಡುಕರಿಂದ ಕೊಲೆಯಾಗಿದ್ದ ಎಸ್ ಡಿ ಪಿ ಐ ಪಕ್ಷದ ಅಶ್ರಫ್ ಕಲಾಯಿಯ ವಿರುದ್ಧ ಕಪೋಲ ಕಲ್ಪಿತ , ಪೂರ್ವಾಗ್ರಹಗಳಿಂದ ಕೂಡಿದ ಸುಳ್ಳುಗಳಿರುವ ವರದಿ ಮಾಡಿರುವ ‘ಸ್ಪಂದನ’ ಎಂಬ ಖಾಸಗಿ ಸುದ್ದಿ ಚಾನೆಲ್, ಸಂಘಪರಿವಾರದ ರೌಡಿ ಶೀಟರ್ ಕೊಲೆಗಡುಕರ ಪರ ವಹಿಸಿ ವರದಿ ಮಾಡಿದ್ದಲ್ಲದೆ, ತನ್ನೂರಿನ ಸರ್ವ ಧರ್ಮೀಯರಿಗೆ ಬೇಕಾಗಿದ್ದ ಅಮಾಯಕ ರಿಕ್ಷಾ ಚಾಲಕ ಅಶ್ರಫ್ ಕಲಾಯಿಯವರನ್ನು ಓರ್ವ ರೌಡಿಯಂತೆ ಚಿತ್ರಿಸಿದ್ದು ಚಾನೆಲಿನ ವಿಕೃತ ಮನೋಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಇದು ಮಾತ್ರವಲ್ಲ ಅಶ್ರಫ್ ರವರನ್ನು ಕೊಂದ ಸಂಘಪರಿವಾರದ ಸಮಾಜಕಂಟಕ ಕೊಲೆಗಡುಕರನ್ನು ತನ್ನ ಕಾರ್ಯಕ್ರಮದಲ್ಲಿ ಹೀರೋಗಳಂತೆ ಬಿಂಬಿಸಿ ಚಾನೆಲ್ ತನ್ನ ಪತ್ರಿಕಾ ಧರ್ಮವನ್ನು ಮರೆತು ವರ್ತಿಸಿದೆ. ಅಶ್ರಫ್ ಕಲಾಯಿಯ ಹತ್ಯಾ ಆರೋಪಿಗಳು ನ್ಯಾಯಾಲಯದಲ್ಲಿ ಶರ್ತಬದ್ಧ ಜಾಮೀನಿನ ಮೇಲೆ ಹೊರಬಂದಿರುವ ವೇಳೆಯಲ್ಲೇ ‘ಸ್ಪಂದನ’ ಚಾನೆಲ್ ತನ್ನ ಕ್ರೈಂ ಬೀಟ್ ಅನ್ನುವ ಕಾರ್ಯಕ್ರಮದ ಮೂಲಕ ಹತ್ಯೆಯ ನೈಜ ಕಾರಣಗಳನ್ನು ಜನರ ಮತ್ತು ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ , ನ್ಯಾಯಾಲಯದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಅಶ್ರಫ್ ಕಲಾಯಿ ತನ್ನ ಪ್ರತಿನಿತ್ಯದ ಕಾಯಕದಂತೆ ಅನ್ಯ ಧರ್ಮೀಯ ಅಂಗವಿಕಲನೋರ್ವನನ್ನು ತನ್ನ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಅವರ ಕೆಲಸದ ಸ್ಥಳಕ್ಕೆ ಬಿಡುವ ವೇಳೆ ಮತಾಂಧ ಸಂಘಪರಿವಾರಿ ಕೊಲೆಗಡುಕರ ಮಚ್ಚಿನೇಟಿಗೆ ಬಲಿಯಾಗಿದ್ದರೂ, ಅದನ್ನು ಮರೆ ಮಾಚಿ ಅಶ್ರಫ್ ಮರಳು ಮಾಫಿಯಾಕ್ಕೆ ಬಲಿಯಾಗಿದ್ದಾರೆಂಬ ಕಟ್ಟು ಕಥೆಯನ್ನು ತಮ್ಮ ಕಾರ್ಯಕ್ರಮದ ಮೂಲಕ ಬಲವಂತವಾಗಿ ಜನರನ್ನು ನಂಬಿಸುವ ಕೆಲಸಕ್ಕಿಳಿದಿರುವ ಸ್ಪಂದನ ಚಾನೆಲ್, ಈ ಮೂಲಕ ನ್ಯಾಯಾಲಯದಲ್ಲಿರುವ ಪ್ರಕರಣವೊಂದರಲ್ಲಿ ಹಸ್ತಕ್ಷೇಪ ನಡೆಸುವ ದುಸ್ಸಾಹಸಕ್ಕಿಳಿದಿದೆ. ಚಾನೆಲ್ ಮೃತ ಅಶ್ರಫ್ ಕಲಾಯಿಯವರ ವಿರುದ್ಧ ಹರಿಯಬಿಟ್ಟಿರುವ ನಿರಾಧಾರ ಆರೋಪಗಳಿಗೆ ತಮ್ಮದೇ ಚಾನೆಲಿನಲ್ಲಿ ಬೇಷರತ್ ಕ್ಷಮೆ ಯಾಚಿಸದೇ ಇದ್ದಲ್ಲಿ ತಕ್ಕ ಬೆಲೆ ತೆರಬೇಕಾದೀತು ಎಂದು ದಕ್ಷಿಣ ಕನ್ನಡ ಎಸ್ಡಿಪಿಐ ಜಿಲ್ಲಾಧ್ಯಕ್ಷ ಎ ಎಂ ಅಥಾವುಲ್ಲಾ ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಪಕ್ಷವು ಇದೀಗಾಗಲೇ ಚಾನೆಲಿನ ವಿರುದ್ಧ ಕಾನೂನಿನ ಮೊರೆ ಹೋಗಿ ಮೊಕದ್ದಮೆ ದಾಖಲಿಸುವ ಬಗ್ಗೆ ನಿರ್ಧರಿಸಿದ್ದು, ಶೀಘ್ರವೇ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅಥಾವುಲ್ಲಾ ತಿಳಿಸಿದ್ದಾರೆ.
ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿರುವ ವೇಳೆಯಲ್ಲೇ ಕಾರ್ಯಕ್ರಮ ನಡೆಸಿರುವ ಸ್ಪಂದನ ಚಾನೆಲ್ ಮತ್ತು ಸಂಘಪರಿವಾರದ ಸಮಾಜದ್ರೋಹಿ ರೌಡಿಗಳ ನಡುವೆ ಇರುವ ಅನೈತಿಕ ಸಂಬಂಧ ಆ ಮೂಲಕ ಹೊರಬಂದಿದ್ದು, ಈ ಕುರಿತು ಪೊಲೀಸರೂ ಕೂಡಾ ಸೂಕ್ತ ತನಿಖೆ ನಡೆಸಬೇಕೆಂದು ಕೂಡಾ ಎಸ್ಡಿಪಿಐ ಆಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
