ಅನಿವಾಸಿ ಕನ್ನಡಿಗರ ವಿಶೇಷ

ದಮ್ಮಾಮ್ ವುಮೆನ್ಸ್ ಫ್ರೆಟರ್ನಿಟಿ ಫೋರಂ (WFF) ವತಿಯಿಂದ “ಆರೋಗ್ಯಮಯ ಜೀವನ ಆನಂದದಾಯಕ ಜೀವನ” ಅಭಿಯಾನ ಕಾರ್ಯಕ್ರಮ

ದಮ್ಮಾಮ್ : ಬದಲಾವಣೆಯಾಗುತ್ತಿರುವ ಇಂದಿನ ಸಮಾಜದಲ್ಲಿ ಜನರ ಜೀವನ ಕ್ರಮವೂ ಬದಲಾವಣೆಯಾಗುತ್ತಿರುವಾಗ ಜನರು ತಾಂತ್ರಿಕ ಪರಿಸ್ಥಿತಿಗಳಿಗೆ ಒಗ್ಗಿಕೊಂಡು ಬದಲಾಗುತ್ತಿದ್ದು ಇದು ಮನುಷ್ಯನ ಆರೋಗ್ಯಮಯ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತಿದೆ.

ಆದ್ದರಿಂದ ಪ್ರಮುಖವಾಗಿ ಮಹಿಳೆಯರು ತಮ್ಮ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಹಳೆಯ ಕಾಲದ ಜೀವನ ಪದ್ದತಿಯನ್ನು ಜೀವಂತವಾಗಿಸಿದಲ್ಲಿ ಆನಂದದಾಯಕ ಜೀವನ ನಡೆಸಲು ಸಾಧ್ಯವಾಗಬಹುದು ಎಂದು ಬದರ್ ಅಲ್ ಖಲೀಜ್ ಆಸ್ಪತ್ರೆ ಜುಬೈಲ್ ಇದರ ವ್ಯೆದ್ಯಕೀಯ ನಿರ್ದೇಶಕಿ ಡಾ. ರಾಗಿಣಿ ಬೇಕೂರ್ ಹೇಳಿದರು. ಅವರು ದಮ್ಮಾಮಿನಲ್ಲಿ ವುಮೆನ್ಸ್ ಫ್ರೆಟರ್ನಿಟಿ ಫೋರಂ ಕರ್ನಾಟಕ ರಾಜ್ಯ, ಪೂರ್ವ ಪ್ರಾಂತ್ಯ ಆಯೋಜಿಸಿದ್ದ “ಆರೋಗ್ಯಮಯ ಜೀವನವೇ ಆನಂದದಾಯಕ ಜೀವನ” ಎಂಬ ಅಭಿಯಾನದ ಪ್ರಮುಖ ಭಾಷಣ ಮಾಡುತ್ತಾ ಹೇಳಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ವುಮೆನ್ಸ್ ಫ್ರೆಟರ್ನಿಟಿ ಫೋರಂ ದಮ್ಮಾಮ್ ಅಧ್ಯಕ್ಷೆಯಾದ ಶ್ರೀಮತಿ ಸಲೀಕಾ ನಾಸಿರ್ ಮಾತನಾಡಿ ಮಹಿಳೆಯರು ಕೇವಲ ತಮ್ಮ ಕುಟುಂಬದ ಬಗ್ಗೆ ಮಾತ್ರ ಗಮನಹರಿಸದೆ ಸಮಾಜದಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯಗಳ ಬಗ್ಗೆ ಹೋರಾಟ ನಡೆಸಬೇಕಾಗಿದೆ ಈಗಾದಲ್ಲಿ ನಾವು ಜೊತೆ ಜೊತೆಯಾಗಿ ಒಂದು ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ ಇದಕ್ಕಾಗಿಯೇ ವುಮೆನ್ಸ್ ಫ್ರೆಟರ್ನಿಟಿ ಫೋರಂ ಪ್ರವಾಸಿ ಮಹಿಳೆಯರಿಗಾಗಿ ಇಂತಹ ಅಭಿಯಾನವನ್ನು ಮುಂದುವರಿಸುತ್ತಾ ಬರಲಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಆಸರೆ ಫೌಂಡೆಶನ್ ಸಲಹಾ ಸಮಿತಿ ಸದಸ್ಯೆ ಶ್ರೀಮತಿ ಖೈರುನ್ನಿಸಾ ಸಯ್ಯದ್ ಮಾತನಾಡಿ ದಾಂಪತ್ಯ ಜೀವನದಲ್ಲಿ ಪಾಲಿಸಿಕೊಳ್ಳಬೇಕಾದ ಶಿಷ್ಟಾಚಾರಗಳ ಬಗ್ಗೆ ತಿಳಿಸಿಕೊಟ್ಟರು, ನಂತರ ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವುಮೆನ್ಸ್ ಫ್ರೆಟರ್ನಿಟಿ ಫೋರಂ ಜುಬೈಲ್ ಘಟಕದ ಕಾರ್ಯದರ್ಶಿ ಶ್ರೀಮತಿ ಫೈಝಾ ಫಾರೂಕ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀಮತಿ ಝೀನತ್ ಶರೀಫ್ ಕಿರಾಅತ್ ಪಠಿಸುವ ಮೂಲಕ ಚಾಲನೆ ನೀಡಿದರು, ಶ್ರೀಮತಿ ಶಮಿನಾಝ್ ಸಾಜಿದ್ ಸ್ವಾಗತಿಸಿ ನಾಝಿಯಾ ಶರೀಫ್ ಧನ್ಯವಾದಗೈದರು. ಶ್ರೀಮತಿ ಸಮಿನಾ ಸುನೈಫ್ ನಿರೂಪಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group