ಅನಿವಾಸಿ ಕನ್ನಡಿಗರ ವಿಶೇಷ

ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕದ ವತಿಯಿಂದ ದೇಶ ಪ್ರೇಮಿ ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್ ರವರ ಸ್ಮರಣೆ ಕಾರ್ಯಕ್ರಮ

ಅನಿವಾಸಿ  ಭಾರತೀಯ ಸಂಘಟನೆಯಾದ ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯದ ವತಿಯಿಂದ ದಿನಾಂಕ  23-11-2018 ರಂದು ದೋಹಾದ ಐಡಿಯಲ್ ಇಂಡಿಯನ್ ಸ್ಕೂಲ್ ಸಭಾಂಗಣದಲ್ಲಿ “ಟಿಪ್ಪು ಸುಲ್ತಾನ್ ಸ್ಮರಣೆ” ಕಾರ್ಯ ಕ್ರಮ ಆಯೋಜಿಸಲಾಯಿತು.

ಈ ಕಾರ್ಯಕ್ರಮವು ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಇದರ ಕೇಂದ್ರ ಸಮಿತಿ ಕಾರ್ಯದರ್ಶಿಯವರಾದ ಲತೀಫ್ ಮಡಿಕೇರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು . ಕೇಂದ್ರ ಸಮಿತಿ ಅಧ್ಯಕ್ಷರಾದ ಸಯೀದ್ ಕೊಮಾಚಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ತನ್ನ ಉದ್ಘಾಟನಾ ಭಾಷಣದಲ್ಲಿ ಟಿಪ್ಪು ಸುಲ್ತಾನ್ ದೇಶಕ್ಕೆ ಕೊಟ್ಟ ಕೊಡುಗೆಗಳು  ಹಾಗೂ ಹಿಂದುಳಿದ ಸಮುದಾಯವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಮೇಲೆತ್ತಲು ಟಿಪ್ಪು ಸುಲ್ತಾನ್ ತನ್ನ ಆಡಳಿತ ಕಾಲದಲ್ಲಿ ಕೈಗೊಂಡ ಕ್ರಾಂತಿಕಾರಿ ಯೋಜನೆಗಳನ್ನು ಆಧುನಿಕ ಜಗತ್ತು ಕೂಡ ಸ್ಮರಿಸಿಕೊಳ್ಳುವುದು ಅವರ ದೂರದೃಷ್ಟಿಯ ಆಡಳಿತವನ್ನು  ಪ್ರತಿಬಿಂಬಿಸುತ್ತದೆ ಎಂದರು . ದಕ್ಷಿಣ ಭಾರತದ ಕೆಲವೊಂದು ರಾಜರುಗಳು ಬ್ರಿಟೀಷರಿಗೆ ಕಪ್ಪ ಕಾಣಿಕೆ ನೀಡಿ ಶರಣಾಗಿದ್ದರೆ  ಇನ್ನು ಕೆಲವರು ಹೆದರಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದೆಲ್ಲಕ್ಕೂ  ವ್ಯತಿರಿಕ್ತವಾಗಿ ಟಿಪ್ಪು ಸುಲ್ತಾನ್ ಶತ್ರುಗಳೊಂದಿಗೆ ರಣಾಂಗಣದಲ್ಲಿ ಹೋರಾಡುತ್ತಲೇ ಹುತಾತ್ಮರಾದ ಜಗತ್ತಿನ ಏಕೈಕ ದೊರೆ ಎಂದು ಬಣ್ಣಿಸಿದರು.

ಇನ್ನೋರ್ವ ಮುಖ್ಯ ಅಥಿತಿಯಾದ ಸೌತ್ ಕರ್ನಾಟಕ ಮುಸ್ಲಿಂ ವೆಲ್ ಫೇರ್ ಅಸೋಷಿಯೇಶನ್ ಇದರ ಉಪಾಧ್ಯಕ್ಷರಾದ ಮುಹಮ್ಮದ್ ಕಾಸಿಂ ರವರು ಟಿಪ್ಪು ಸುಲ್ತಾನರ ಬಗ್ಗೆ ಮಾತನಾಡುತ್ತಾ, ಟಿಪ್ಪು ಎಲ್ಲಾ ಧರ್ಮದವರನ್ನು ಸಮಾನವಾಗಿ ಪ್ರೀತಿಸಿ ನ್ಯಾಯ ಪರಿಪಾಲನೆಗೆ ಒತ್ತುಕೊಟ್ಟು ಆಡಳಿತ ನಡೆಸುತ್ತಿದ್ದರು ಎಂದರು. ಟಿಪ್ಪು ಹಾಗು ಅವರ ತಂದೆ ಹೈದಾರಾಲಿಯ ಜೀವನದ ಇತಿಹಾಸವನ್ನು ಸಭಿಕರ ಮುಂದೆ ತೆರೆದಿಟ್ಟರು.

ಕಾರ್ಯಕ್ರಮದಲ್ಲಿ ಕತಾರ್ ಇಂಡಿಯನ್ ಸೋಶಿಯಲ್ ಫಾರಂ  ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ  ನಝೀರ್ ಪಾಷಾರವರು ಮುಖ್ಯ ಭಾಷಣ ಗೈದರು. ಟಿಪ್ಪುವಿನ ಕೊಡುಗೆಗಳು , ಟಿಪ್ಪುವಿನ ಹೋರಾಟಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ಟಿಪ್ಪು ಕೈಗೊಂಡ ದಿಟ್ಟ ಕ್ರಮಗಳ ಬಗ್ಗೆ ವಿವರಿಸಿದರು. ಟಿಪ್ಪುವಿನಂತಹ ಆಡಳಿತಗಾರನ ಇತಿಹಾಸವು ಇಂದಿನ ತಲೆಮಾರಿಗೆ ಮಾದರಿಯಾಗಿದೆ. ರಾಜ್ಯದ ಹಲವಾರು ದೇವಾಸ್ಥಾನಗಳಿಗೆ ಟಿಪ್ಪು ನೀಡಿದ ನೆರವುಗಳು ಆತನ ಧರ್ಮ ಸಹಿಷ್ಣತೆಗೆ ಹಿಡಿದ ಕೈಗನ್ನಡಿ ಯಾಗಿದೆ ಎಂದರು. ಶಿಕ್ಷಣ , ನೀರಾವರಿ , ಮೂಲಭೂತ ಸೌಕರ್ಯ ಕ್ಷೇತ್ರಗಳಿಗೆ ಟಿಪ್ಪು ಸುಲ್ತಾನ್ ರವರು  ವಿಶೇಷ  ಕೊಡುಗೆಗಳನ್ನು ನೀಡಿದರು , ಭೂ ಮಾಲೀಕರ ಕೈಯಲ್ಲಿದ್ದ ಜಮೀನನ್ನು ಬಡವರಿಗೆ ಹಂಚಿಕೆಮಾಡಿ ಐತಿಹಾಸಿಕ ಭೂಸುಧಾರಣ ಕಾನೂನನ್ನು ಜಾರಿಗೆ ತಂದ ದೇಶದ ಮೊಟ್ಟ ಮೊದಲ ದೊರೆ ಟಿಪ್ಪು ಸುಲ್ತಾನ್ ಎಂದು ತಿಳಿಸಿದರು. ವಸಾಹತುಶಾಹಿ  ಹಾಗೂ ಬ್ರಾಹ್ಮಣಶಾಹಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಂಡಿದ್ದ ಟಿಪ್ಪುವನ್ನು ಇಂದು ಅದೇ ಸಿದ್ಧಾಂತಗಳು ವಿರೋಧಿಸುತ್ತದೆ.  ಟಿಪ್ಪುವಿನ ಇತಿಹಾಸವನ್ನು ದುಷ್ಟ ಶಕ್ತಿಗಳು ಎಷ್ಟೇ ತಿರುಚಲು ಪ್ರಯತ್ನಿಸಿದರೂ ದೇಶ ಪ್ರೇಮಿಗಳಾದ ನಾವುಗಳು ಇಂದಿನ ತಲೆಮಾರಿನ ಸತ್ಯವನ್ನು ತಿಳಿಹೇಳುವ ಕೆಲಸವನ್ನು ಮಾಡಬೇಕು .  ಅದಾಗಿದೆ ಹುತಾತ್ಮರಿಗೆ ನಾವು ಸಲ್ಲಿಸುವ ಗೌರವ ಎಂದು  ನಝೀರ್ ಪಾಷಾ ರವರು ತಮ್ಮ ಭಾಷಣ ದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಇರ್ಷಾದ್ ಕುಳಾಯಿ ಮತ್ತು ತಂಡದವರಿಂದ ಟಿಪ್ಪುವಿನ ಬಗ್ಗೆ ಹಾಡು ಹಾಡಲಾಯಿತು . ಕಾರ್ಯಕ್ರಮದ ಸಂಯೋಜಕರಾದ ಝಕಾರಿಯಾ ಪಾಂಡೇಶ್ವರ , ಝಮೀರ್ ಹಳೆಯಂಗಡಿ , ಅಬ್ದುಲ್ ರಹಿಮಾನ್ ಬಂಟ್ವಾಳ , ಮುಜೀಬ್ ಖಾನ್ , ಉಪಸ್ಥಿತರಿದ್ದರು. ಕತಾರ್ ಇಂಡಿಯನ್ ಸೋಶಿಯಲ್ ಫೋರಂ  ಕರ್ನಾಟಕ ರಾಜ್ಯದ ಪ್ರದಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರ್ ಸ್ವಾಗತಿಸಿ ಕಾರ್ಯದರ್ಶಿ ಫಸೀವುಲ್ಲಾ ತುಮಕೂರ್ ಧನ್ಯವಾದ ಅರ್ಪಿಸಿದರು. ಸಮೀತಿಯ ಸದಸ್ಯರಾದ ಕಲೀಮ್ ಖಾದ್ರಿ ಹಾಗೂ ನಿಯಾಝ್ ತೋಡಾರ್ ಕಾರ್ಯ ಕ್ರಮವನ್ನು ನಿರೂಪಿಸಿದರು.

ವರದಿ : ಅಮ್ಮಿ ಸವಣೂರ್  ದೋಹಾ ಕತಾರ್

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group