ಜಿಲ್ಲಾ ಸುದ್ದಿ

ಮನೆಯಿಂದ ಹೊರಗೆ ಬನ್ನಿ : ಬಜ್ಪೆ ಡಿವಿಷನ್ ವ್ಯಾಪ್ತಿಯಲ್ಲಿ ಮಾನವ ಸರಪಳಿ

ಗೋ ರಕ್ಷಣೆ ಹೆಸರಲ್ಲಿ ‌ನಡೆಯುವ ಗುಂಪು ಹತ್ಯೆಯನ್ನು ವಿರೋಧಿಸಿ ರಾಷ್ಟ್ರಾದ್ಯಂತ ಏಕ ಕಾಲದಲ್ಲಿ ನಡೆದ “ಮನೆಯಿಂದ ಹೊರಗೆ ಬನ್ನಿ” ಮಾನವ ಸರಪಳಿ ಕಾರ್ಯಕ್ರಮವು ಬಜ್ಪೆ ಡಿವಿಷನ್ ವ್ಯಾಪ್ತಿಯಲ್ಲಿ ಮೂರು ಮಸೀದಿಯಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.
ಮಾನವ ಸರಪಳಿಯ ಬಳಿಕ ಬಜ್ಪೆ ಎಂಜೆಎಂ ಮಸೀದಿ ಎದುರುಗಡೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ಇರ್ಷಾದ್ ಬಜ್ಪೆ ನೇರವೇರಿಸಿದರು. ಸಮಾರೋಪ ಭಾಷಣವನ್ನು ಮುಹಮ್ಮದ್ ಇಕ್ಬಾಲ್ ಮಾಡಿದರು. ಸ್ವಾಗತ ಸಮಿತಿ ಸಂಚಾಲಕ ಸನಾವುಲ್ಲಾ ಉಪಸ್ಥಿತರಿದ್ದರು.

ಬಜ್ಪೆಯಲ್ಲಿ ನಡೆದ ಕಾರ್ಯಕ್ರಮದ ದೃಶ್ಯ

ಜೋಕಟ್ಟೆಯಲ್ಲಿ ಮುಹಿಯುದ್ದೀನ್ ಹೊಸ ಜುಮ್ಮಾ ಮಸೀದಿ ಎದುರುಗಡೆ ಮುಖ್ಯ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಕೆ.ಅಶ್ರಫ್ ಸ್ವಾಗತಿಸಿ,ಜಮಾಲ್ ಜೋಕಟ್ಟೆ ಸಮಾರೋಪ ಭಾಷಣ ಮಾಡಿದರು.ಏರಿಯಾ ಅಧ್ಯಕ್ಷ ಮುಹಮ್ಮದ್ ಸಾದಿಕ್ ಕಾರ್ಯದರ್ಶಿ ಇಮ್ತಿಯಾಜ್ ಉಪಸ್ಥಿತರಿದ್ದರು.

ಜೋಕಟ್ಟೆಯ ಕಾರ್ಯಕ್ರಮದ ದೃಶ್ಯ

ಕಾವೂರಿನಲ್ಲಿ ನಡೆದ ಮಾನವ ಸರಪಳಿಯ ದೃಶ್ಯ

ಕಾವೂರಿನ ಎಂ.ಜೆ.ಎಂ.ಜುಮ್ಮಾ ಮಸೀದಿಯ ಎದುರು ಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನವಾಜ್ ಕಾವೂರು ಸಮಾರೋಪ ಭಾಷಣ ಮಾಡಿದರು.ಅಭಿಯಾನದ ಭಾಗವಾಗಿ ಮೂರೂ ಕಡೆಯಲ್ಲಿ ನಡೆದ ಮಾನವ ಸರಪಳಿಯಲ್ಲಿ ಸಾವಿರಾರು ನಾಗರಿಕರು ಭಾಗವಹಿಸಿದರು.

ಮಾನವ ಸರಪಳಿಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು “ಮಾನವೀಯತೆಗಾಗಿ ಒಂದಾಗೋಣ, ಭಾರತ ಲಿಂಚಿಸ್ತಾನ್ ಆಗುವುದನ್ನು ತಡೆಯೋಣ, ಗುಂಪು ಹತ್ಯೆಯನ್ನು ಕೊನೆಗೊಳಿಸೋಣ, ಅಮಾಯಕ ಜೀವಗಳನ್ನು ರಕ್ಷಿಸೋಣ, ಒಗ್ಗೂಡಿ ಪ್ರತಿರೋಧಿಸೋಣ, ನ್ಯಾಯಾಲಯಗಳ ಕಣ್ಣು ತೆರೆಸೋಣ, ಗೋ ರಾಜಕೀಯವನ್ನು ತಡೆಯೋಣ” ಎಂಬ ಭಿತ್ತಿ ಪತ್ರಗಳನ್ನು ಹಿಡಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾನವ ಸರಪಳಿಯಲ್ಲಿ ಭಾಗವಹಿಸಿದವರು ಗುಂಪು ಹತ್ಯೆಯಿಂದ ಹತ್ಯೆಗೈಯ್ಯಲ್ಪಟ್ಟ ಅಮಾಯಕರ ಚಿತ್ರಗಳನ್ನು ಮುಖವಾಡಗಳನ್ನಾಗಿಸಿ ಅವರ ಹತ್ಯೆಗಳನ್ನು ಜನರು ಸ್ಮರಿಸುವಂತೆ ಮಾಡಿದ್ದು ವಿಶೇಷವಾಗಿತ್ತು.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group