ನಾಕಾಬಂದಿ

2010ರ ಕಾಂಗೋ ತೈಲ ಸ್ಪೋಟದ ಚಿತ್ರವನ್ನು ಗೋಧ್ರಾ ರೈಲು ದಹನದ್ದೆಂದು ಹರಡುತ್ತಿರುವ ಕಿಡಿಗೇಡಿಗಳು!!

2010ರ ಕಾಂಗೋ ತೈಲ ಸ್ಪೋಟದ ಚಿತ್ರವನ್ನು ಗೋಧ್ರಾ ರೈಲು ದಹನದ್ದೆಂದು ಹರಡುತ್ತಿರುವ ಕಿಡಿಗೇಡಿಗಳು!!

ವರದಿಗಾರ: “कांग्रेस को वोट देंने से पहले हिन्दुओ भाई जरा गोधरा कांड भी याद कर लेना जो कांग्रेस के सरकार में कांग्रेस के ही मुस्लिमों ने दो बोगियों से भरा हुआ हिन्दुओ को तेल छिड़क कर आग में जलाया गया था ,अगर थोड़ा सा भी हिन्दुओ के प्रति दया है तो कांग्रेस मुक्त भारत कर दो हमारे प्यारे हिन्दू भाइयो।”
” ಕಾಂಗ್ರೆಸ್ ಗೆ ವೋಟು ನೀಡುವ ಮೊದಲು ಹಿಂದೂ ಸಹೋದರರು ನೆನಪಿಸಿಕೊಳ್ಳಬೇಕು,ಕಾಂಗ್ರೆಸ್ ಸರಕಾರದ ಸಮಯದಲ್ಲಿ ಕಾಂಗ್ರೆಸ್ಸಿನ ಮುಸ್ಲಿಮರು ಎರಡು ಬೋಗಿಗಳಲ್ಲಿ ತುಂಬಿದ್ದ ಹಿಂದೂಗಳನ್ನು ತೈಲ ಸುರಿಸಿ ಅಗ್ನಿಗಾಹುತಿ ಮಾಡಿದ್ದರು. ಹಿಂದೂಗಳಿಗಾಗಿ ಸ್ವಲ್ಪವಾದರೂ ಪ್ರೀತಿಯಿದ್ದಲ್ಲಿ, ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸಿ ಹಿಂದೂ ಸಹೋದರರೇ…” ಈ ರೀತಿಯ ಸಂದೇಶದೊಂದಿಗೆ ದಹಿಸಲ್ಪಟ್ಟ ಶರೀರಗಳ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗುತ್ತಿದೆ. ಈ ಸಂದೇಶದ ಪ್ರಕಾರ,ಆ ಚಿತ್ರವು 2002ರ ಗೋಧ್ರಾ ರೈಲು ದುರಂತದಲ್ಲಿ ದಹಿಸಲ್ಪಟ್ಟ ಹಿಂದೂಗಳದ್ದಾಗಿದೆ.

I Support Yogi ಎಂಬ ಫೇಸ್ಬುಕ್ ಗುಂಪಿನಲ್ಲಿ ಹಾಕಲಾಗಿದ್ದ ಈ ಸಂದೇಶವನ್ನು 1000ಕ್ಕಿಂತಲೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ.

 

ಇದೇ ಚಿತ್ರ ಹಾಗೂ ಸಂದೇಶವನ್ನು ಗೋಧ್ರಾದ ಇತರ ಚಿತ್ರಗಳೊಂದಿಗೆ ಹರಡಲಾಗುತ್ತಿದೆ. ಫೇಸ್ಬುಕ್ ಮಾತ್ರವಲ್ಲದೇ ವಾಟ್ಸಪ್ ನಲ್ಲೂ ಈ ಸಂದೇಶವು ಕಾಡ್ಗಿಚ್ವಿನಂತೆ ಹಬ್ಬುತ್ತಿದೆ.

ಆಲ್ಟ್ ನ್ಯೂಸ್(Alt News) ತಂಡದ ಅನ್ವೇಷಣೆಯಿಂದ ತಿಳಿದದ್ದೇನೆಂದರೆ, ಈ ಚಿತ್ರವು 2010ರಲ್ಲಿ ಸಂಭವಿಸಿದ ಕಾಂಗೋ ತೈಲ ಸ್ಪೋಟದ್ದಾಗಿದೆ.
2017ರಲ್ಲಿ ಇದೇ ಚಿತ್ರವನ್ನು ‘ದಹಿಸಲ್ಪಟ್ಟ ರೋಹಿಂಗ್ಯಾ ಮುಸ್ಲಿಮರು’ ಎಂದು ಬಿಂಬಿಸಿ ಹರಡಲಾಗಿತ್ತು. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿತ್ತು.

2010ರ ಜೂನ್ ತಿಂಗಳಲ್ಲಿ ಕಾಂಗೋ ರಿಪಬ್ಲಿಕ್ ನ ಸೇಂಜ್ ಎಂಬ ಹಳ್ಳಿಯೊಂದರಲ್ಲಿ ತೈಲ ಟ್ಯಾಂಕರ್ ಉರುಳಿದ ಕಾರಣ ಸಂಭವಿಸಿದ ಸ್ಪೋಟದಲ್ಲಿ 230 ಜನರು ಸಾವಿಗೀಡಾಗಿದ್ದರು. ಈ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿದ್ದವು.

 

ಇದೀಗ ಈ ಚಿತ್ರವನ್ನು ಗೋಧ್ರಾ ದುರಂತದ್ದೆಂದು ಬಿಂಬಿಸಿ ಚುನಾವಣೆಯ ರಣರಂಗವಾಗಿರುವ ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಹರಡಲಾಗುತ್ತಿದೆ. ಸಂದೇಶವನ್ನೋದಿದರೆ ಇದು ಯಾವ ಪಕ್ಷದ ಐಟಿ ಸೆಲ್ ನಿಂದ ಹೊರಬಂದದ್ದೆಂದು ತಿಳಿಯುವುದು ಕಷ್ಟವಲ್ಲ. ಒಟ್ಟಿನಲ್ಲಿ, ತಮ್ಮ ರಾಜಕೀಯ ಲಾಭಕ್ಕಾಗಿ ದೂರದ ಆಫ್ರಿಕಾದಲ್ಲಿ ನಡೆದ ದುರಂತದ ಚಿತ್ರವನ್ನು ಭಾರತದಲ್ಲಿ ಹಿಂದೂಗಳ ವಿರುದ್ಧ ನಡೆದ ಆಕ್ರಮವೆಂದು ತೋರಿಸುವ ಕಿಡಿಗೇಡಿಗಳಿಗೆ ಏನೆಂದು ಹೇಳಬಹುದು???

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group