ವರದಿಗಾರ : ದಿನಾಂಕ 22-11-2018 ನೇ ಶುಕ್ರವಾರ ಕತಾರಿನ ಉಮ್ಮು ಜುಬಾರ್ ಎಂಬ ಸ್ಥಳದಲ್ಲಿ ಆಂಧ್ರ ಪ್ರದೇಶದ ಕಡಪ ನಿವಾಸಿಯಾದ ಶೇಕ್ ಮುಹಮ್ಮದ್ ಗೌಸ್ ರವರ ಪುತ್ರ 31 ವರ್ಷದ ಶೇಕ್ ಅಬ್ದುಲ್ ವದೂದ್ ರವರು ತುಂಬಾ ಸಾಲದ ಬಾದೆಯಿಂದ ನೇಣು ಬಿಗಿದು ತೀರಿಕೊಂಡ ದುರ್ದೈವಿ . ಇವರು ಕಳೆದ 10 ವರ್ಷ ದಿಂದ ಒಂದು ಮನೆಯಲ್ಲಿ ಚಾಲಕನಾಗಿ ದುಡಿಯುತ್ತಿದ್ದು ಕೆಲವು ದಿನಗಳ ಮುಂಚೆ ಎಂದಿನಂತೆ ಅವನ ಮನೆಗೆ ಫೋನ್ ಮಾಡಿ ನನಗೆ ಇಲ್ಲಿ ತುಂಬಾ ಸಾಲವಿದೆ ಎಂದು ಮನೆಯವರಲ್ಲಿ ಹೇಳಿಕೊಂಡಿರುವುದಾಗಿ ವಿವರಗಳು ಲಭಿಸಿತ್ತು . ತಾ 5-11-2018 ನೇ ಮಂಗಳವಾರದಂದು ಅವನು ಕೆಲಸ ಮಾಡುತಿದ್ದ ಸ್ವಲ್ಪ ದೂರದ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದು ಕೊಂಡಿರುವ ಸ್ಥಿತಿಯನ್ನು ಸಾರ್ವಜನಿಕರು ಕಂಡು ಕೂಡಲೇ ಪೋಲೀಸರ ಗಮನಕ್ಕೆ ತಂದು ಸಂಪೂರ್ಣ ಮಾಹಿತಿಯನ್ನು ವಿವರಿಸಿದ್ದರು. ಮತ್ತು ಆತ್ಮ ಹತ್ಯೆ ಮಾಡಿಕೊಳ್ಳುವ ಒಂದು ವಾರದ ಮುಂಚೆ ಸಾಲಗಾರರ ಮುಂದೆ ತಪ್ಪಿಸಿ ಕೊಂಡಿದ್ದು ಇವನ ಮೇಲೆ ಕೇಸು ಕೂಡ ದಾಖಲಾಗಿತ್ತು.
ದಿನಾಂಕ 20-11-2018 ನೇ ಮಂಗಳವಾರದಂದು ಸಾಮಾಜಿಕ ತಾಣವಾದ ವಾಟ್ಸಪ್ಪ್ ನಲ್ಲಿ ಇವನ ಮರಣದ ವಾರ್ತೆಯ ಸಂದೇಶವು ಹರಿದಾಡುತ್ತ ಇದ್ದು ಆ ಸಂದೇಶವನ್ನು ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಲತೀಫ್ ಮಡಿಕೇರಿ ಮತ್ತು ಅಬ್ದುಲ್ ಅಝೀಮ್ ಹೈದರಾಬಾದ್ ರವರು ಕೂಡಲೇ ಎಚ್ಚೆತ್ತುಕೊಂಡು ಕಾರ್ಯ ಪ್ರವೃತರಾಗಿ ವಿವರಗಳನ್ನು ಸಂಗ್ರಹಿಸಿ ಪೊಲೀಸ್ ಠಾಣೆ ಮತ್ತು ಶವಾಗೃಹವನ್ನು ಸಂಪರ್ಕಿಸಿದಾಗ ಮೃತದೇಹವು ತುಂಬಾ ಕೊಳೆತ ಸ್ಥಿತಿಯಲ್ಲಿದ್ದು ಊರಿಗೆ ಕೊಂಡುಹೋಗುವ ಸ್ಥಿತಿಯಲ್ಲಿ ಇಲ್ಲ ಎಂಬ ಮಾಹಿತಿ ದೊರೆತಾಗ ಕೂಡಲೇ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ವಿವರಗಳನ್ನು ನೀಡಿ ಅದಕ್ಕೆ ಬೇಕಾದಂತಹ ಎಲ್ಲಾ ಧಾಖಲೆಗಳನ್ನು ಇಲ್ಲಿನ ಪೊಲೀಸ್ ಠಾಣೆಯಿಂದ ಮತ್ತು ಭಾರತೀಯ ರಾಯಬಾರಿ ಕಚೇರಿಯಿಂದ , ಆಸ್ಪತ್ರೆಯಿಂದ ಮತ್ತು ಊರಿನಿಂದ ತರಿಸಿ ಕತಾರಿನ ಅಬೂ ಹಮೂರಿನ ಧಫನ ಭೂಮಿಯಲ್ಲಿ ದಿನಾಂಕ 22-11-2018 ನೇ ಶುಕ್ರವಾರ ಜುಮಾ ನಮಾಝಿನ ಬಳಿಕ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಕಾರ್ಯಕರ್ತರ ನೇತೃತ್ವದಲ್ಲಿ ಜನಾಝ ನಮಾಝನ್ನು ನಿರ್ವಹಿಸಿ ದಫನವನ್ನು ಮಾಡಲಾಯಿತು.
ಮಾಧ್ಯಮದೊಂದಿಗೆ ಮಾತನಾಡಿದ ಲತೀಫ್ ಮಡಿಕೇರಿ ಯವರು ಪ್ರವಾದಿ (ಸ.ಅ )ರವರ ಅನುಯಾಯಿಗಳಾದ ನಾವು ಇಂತಹ ಮನಸ್ಥಿತಿ ಯಿಂದ ದೂರ ಇರಬೇಕು ಮತ್ತು ಯಾವುದೇ ತೊಂದರೆಗಳು ಎದುರಾದಲ್ಲಿ ಆತ್ಮ ಹತ್ಯೆಯು ಪರಿಹಾರ ವಲ್ಲ ಎಂದು ವಿವರಿಸಿದರು . ಅದೇ ರೀತಿ ಈ ದಫನ ಕಾರ್ಯಕ್ಕೆ ಬೇಕಾಗಿ ಸಹಕರಿಸಿದ ನಮ್ಮ ಎಲ್ಲಾ ಸಹೋದರರಿಗೆ ಅಲ್ಲಾಹನು ಉತ್ತಮ ಪ್ರತಿಫಲವನ್ನು ಇಹಪರಗಳಲ್ಲಿ ನೀಡಿ ಅನುಗ್ರಹಿಸಲಿ ಎಂದು ದುವಾ ಆಶೀರ್ವಚನ ಮಾಡಿ ತಮ್ಮ ಬಳಿ ಇದ್ದಂತಹ ಆ ವ್ಯಕ್ತಿಯ ಎಲ್ಲಾ ಧಾಖಲೆಗಳನ್ನು ಮೃತನ ಸಹೋದರನ ಸಂಬಂಧಿಯೊಬ್ಬರಿಗೆ ಹಸ್ತಾ೦ತರಿಸಿದರು.
ವರದಿ : ಅಮ್ಮಿ ಸವಣೂರ್ ದೋಹಾ ಕತಾರ್
