ರಾಷ್ಟ್ರೀಯ ಸುದ್ದಿ

ಗಾಜಾ ಚಂಡಮಾರುತದ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಲು  ಎಸ್‍ಡಿಪಿಐ ಒತ್ತಾಯ

ಸಂವಿಧಾನದ ರಕ್ಷಣೆಗೆ ಎಲ್ಲಾ  ರಾಜಕೀಯ ಪಕ್ಷಗಳು ತಮ್ಮ ಅಹಂ ಬದಿಗಿಟ್ಟು ಒಟ್ಟಾಗಿ ಪ್ರಯತ್ನಿಸುವಂತೆ ಎಸ್.ಡಿ.ಪಿ.ಐ ಮನವಿ

ವರದಿಗಾರ (ನ.22):  ತಮಿಳುನಾಡಿಗೆ ಅಪ್ಪಳಿಸಿದ ಗಾಜಾ ಚಂಡಮಾರುತದಿಂದ 50 ಮಂದಿ ಸಾವನ್ನಪ್ಪಿರುವುದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ)ದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ, ರಾಜ್ಯ ಸರ್ಕಾರ ಸಕಾಲದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಹಾನಿಯ ಪ್ರಮಾಣವನ್ನು ಕಡಿಮೆ ಮಾಡಿರುವುದಕ್ಕೆ ಅವರು ಸರ್ಕಾರವನ್ನು ಪ್ರಶಂಸಿಸಿದ್ದಾರೆ.

ಗಾಜಾ ಚಂಡಮಾರುತದಿಂದ ಹಾನಿಗೊಳಗಾದವರಿಗೆ ತಮಿಳುನಾಡು ಸರ್ಕಾರ  ನೀಡಿರುವ ಪರಿಹಾರ ಸಮರ್ಪಕವಾಗಿಲ್ಲ. ದುರಂತದ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬದವರಿಗೆ 10 ಲಕ್ಷ ರೂ.ಬದಲು 25 ಲಕ್ಷ ರೂ. ಪರಿಹಾರ  ನೀಡಬೇಕು. ಅದೇ ರೀತಿ ಸಣ್ಣ ತೀವ್ರವಾಗಿ ಗಾಯಗೊಂಡವರಿಗೆ  ಒಂದು ಲಕ್ಷ ರೂ. ಬದಲು 5 ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ 25 ಸಾವಿರ ರೂ. ಬದಲು 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಫೈಝಿ ಆಗ್ರಹಿಸಿದ್ದಾರೆ.

Velankanni: A view of the damage caused by cyclone ‘Gaja’, after it hit Velankanni, in Nagapattinam district of Tamil Nadu, Friday, Nov. 16, 2018. The Centre Friday assured the Tamil Nadu government of all assistance to deal with the situation arising out of this storm, which has so far claimed 11 lives. (PTI Photo)

ಚಂಡಮಾರುತದಿಂದ ಹಾಳಿಗೊಳಗಾದ 7 ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳನ್ನು ಪುನರ್ ಸ್ಥಾಪಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಹಾಯ ಹಸ್ತ ಚಾಚಬೇಕು.  ಇಂತಹ ಸಂಕಷ್ಟ  ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕೇರಳದಲ್ಲಿ  ಈ ವರ್ಷದ ಆರಂಭದಲ್ಲಿ  ಭೀಕರ ಪ್ರವಾಹ  ಉಂಟಾಗಿ ಅಪಾರ  ಸಾವು ನೋವು ಸಂಭವಿಸಿದ ಸಂದರ್ಭದಲ್ಲಿ ಮೋದಿ ಸರ್ಕಾರ ತಳೆದ ದ್ವಂದ್ವ ನಿಲುವಿನಂತೆ ಈ ಸಂದರ್ಭದಲ್ಲಿ ನಡೆದುಕೊಳ್ಳಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಚಂಡಮಾರುತ ಬಾಧಿತ ಜಿಲ್ಲೆಗಳಲ್ಲಿ  ಸಂತ್ರಸ್ತ ಕುಟುಂಬಗಳಿಗೆ ಕಾರ್ಯಪಡೆ ರಚಿಸಿ ಅಗತ್ಯ ಮಾನವೀಯ ನೆರವು ನೀಡಿದ ಎಸ್‍ಡಿಪಿಐ ಕಾರ್ಯಕರ್ತರಿಗೆ ಅವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು. ಮಧುರೈಯಲ್ಲಿ ಏಮ್ಸ್ (ಎಐಐಎಂಎಸ್) ಸಂಸ್ಥೆ ಸ್ಥಾಪಿಸುವುದಾಗಿ ಎನ್‍ಡಿಎ ಸರ್ಕಾರ ಭರವಸೆ ನೀಡಿತ್ತು. ಆದರೆ ಅದರ ಕೆಲಸಗಳು ಇದುವರೆಗೆ ಆರಂಭಗೊಂಡಿಲ್ಲ. ಆದಷ್ಟು ಬೇಗ ಕೇಂದ್ರ ಸರ್ಕಾರ ತನ್ನ ಭರವಸೆಯನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನದ ಜಾಗದಲ್ಲಿ ಮನುಸ್ಮೃತಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವ ಸಂಘಪರಿವಾರದಿಂದ ಸಂವಿಧಾನವನ್ನು ರಕ್ಷಿಸಲು ಅಖಿಲ ಭಾರತ ಮಟ್ಟದ ಅಭಿಯಾನವನ್ನು ಎಸ್‍ಡಿಪಿಐ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ  ಫೈಝಿ ಪ್ರಕಟಿಸಿದರು. ಒಂದು

ವೇಳೆ ಮನುಸ್ಮೃತಿ ನಮ್ಮ ಸಂವಿಧಾನವಾದರೆ ಹಿಂದುಳಿದ ವರ್ಗದ ನರೇಂದ್ರ ಮೋದಿ ಅವರಂತಹವರು ಈ ದೇಶದಲ್ಲಿ ಪ್ರಧಾನಮಂತ್ರಿ ಹುದ್ದೆಗೇರಲು ಸಾಧ್ಯವಾಗುವುದಿಲ್ಲ  ಎಂಬುದನ್ನು ನಾವು ಮರೆಯಬಾರದು ಎಂದು ಅವರು ನೆನಪಿಸಿದ್ದಾರೆ. ಭಾರತೀಯ ರಾಜಕೀಯದ ಮೂಲಾಧಾರವಾಗಿರುವ ಸಂವಿಧಾನದ ರಕ್ಷಣೆಗೆ ಎಲ್ಲಾ  ದೊಡ್ಡ  ಮತ್ತು ಸಣ್ಣ ರಾಜಕೀಯ ಪಕ್ಷಗಳು ತಮ್ಮ ಅಹಂ ಬದಿಗಿಟ್ಟು ಒಟ್ಟಾಗಿ ಪ್ರಯತ್ನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group