ಸುತ್ತ-ಮುತ್ತ

‘ಮದೀನಾ’ ನನ್ನ ಹಬೀಬ್ ಸ.ಅ. ರ ನಾಡು, ಕನ್ನಡ ಪುಸ್ತಕ ಮದೀನಾದಲ್ಲಿ ಬಿಡುಗಡೆ

ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಸಿಲ್ವರ್ ಜುಬುಲಿ ಅಂಗವಾಗಿ ಪುಸ್ತಕ ಬಿಡುಗಡೆ

ವರದಿಗಾರ- ಸೌದಿ ಅರೇಬಿಯಾ(ನ.22): ಕರ್ನಾಟಕದ ಸಮನ್ವಯ ಶಿಕ್ಷಣ ಸಂಸ್ಥೆ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ  2019 ಫೆಬ್ರವರಿ 1,2,3  ದಿನಾಂಕಗಳಲ್ಲಿ ನಡೆಯಲಿರುವ ಸಿಲ್ವರ್ ಜುಬುಲಿ ಐತಿಹಾಸಿಕ ಮಹಾ ಸಮ್ಮೇಳನದವ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ ಇಪ್ಪತ್ತೈದು ಸಮಾಜಮುಖಿ ಯೋಜನೆಗಳಲ್ಲಿ ಒಂದಾದ ‘ಪುಸ್ತಕ ಬಿಡುಗಡೆ’ ಯೋಜನೆಗೆ  ಸೌದಿ ಅರೇಬಿಯಾದ ಮದೀನಾ ಮುನವ್ವರದಲ್ಲಿ ಚಾಲನೆ ನೀಡಲಾಯಿತು.

ಪ್ರಥಮವಾಗಿ ಅಲ್ ಮದೀನಾ ದಅ್’ವಾ ಕಾಲೇಜು ವಿದ್ಯಾರ್ಥಿ ಅಬ್ದುರ್ರಹ್ಮಾನ್ ಹುಸೈನ್ ವಳಾಲ್ ರಚಿಸಿರುವ ‘ಮದೀನಾ,ನನ್ನ ಹಬೀಬ್ ಸ.ಅ. ರ ನಾಡು ಕೃತಿಯನ್ನು  ಅಲ್ ಮದೀನಾದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಬಿಡುಗಡೆ ಮಾಡಿ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಲ್ ಮದೀನಾ ಅಬೂಧಾಬಿ ಘಟಕದ ಉಪಾಧ್ಯಕ್ಷ ಪುತ್ತು ಮೋರ್ಲ, ದುಬೈ ಕಮಿಟಿಯ ನಝೀರ್ ಹಾಜಿ, ಅಬ್ದುರ್ರವೂಫ್ ಜಾರಿಗೆಬೈಲ್ ಸಹಿತ ಅಲ್ ಮದೀನಾ ದ ಹಿತೈಶಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group