ನಾಕಾಬಂದಿ

‘ರಾಯಚೂರಿನಲ್ಲಿ ಮಸೀದಿ ಕೆಡವಿದಾಗ ಪ್ರತ್ಯಕ್ಷವಾದ ದೇವಸ್ಥಾನ ! ಹೀಗೊಂದು ಸುದ್ದಿಯ ಬೆನ್ನು ಹತ್ತಿ…’

ವರದಿಗಾರ (ನ 19) :  ಉಮಾ ಗರ್ಗಿ ಎನ್ನುವ ಟ್ವಿಟ್ಟರ್ ಖಾತೆಯೊಂದು ನವಂಬರ್ 11 ರಂದು ದೇವಸ್ಥಾನವೊಂದರ ಚಿತ್ರವನ್ನು ಪೋಸ್ಟ್ ಮಾಡಿ ‘ರಸ್ತೆ ಅಗಲೀಕರಣಕ್ಕಾಗಿ ಕರ್ನಾಟಕದ ರಾಯಚೂರಿನಲ್ಲಿ ಮಸೀದಿಯೊಂದನ್ನು ಕೆಡವಿದಾಗ ಈ ದೇವಸ್ಥಾನ ಪ್ರತ್ಯಕ್ಷಗೊಂಡಿದೆ. ನಾವು ಎಲ್ಲಾ ಮಸೀದಿಗಳನ್ನು ಕೆಡವಬೇಕಾಗಿದೆ’ ಎಂಬ ಪ್ರಚೋದನಕಾರಿ ಪೋಸ್ಟನ್ನು ಹಾಕಲಾಗಿತ್ತು.

ಹಲವಾರು ಟ್ವಿಟ್ಟರ್ ಖಾತೆಗಳು ಇದನ್ನು ಮರು ಟ್ವೀಟ್ ಮಾಡಿದ್ದವು. ರಮಣಿ ಪರಶುರಾಮ್ ಎಂಬ ಖಾತೆಯಿಂದ ಮೊದಲ ಬಾರಿಗೆ ಫೇಸ್ಬುಕ್ಕಿನಲ್ಲಿ ಇದನ್ನು ಪೋಸ್ಟ್ ಮಾಡಲಾಗಿತ್ತು.

ಚಿತ್ರದ ವಾಸ್ತವವೇನು?

ಈ ಚಿತ್ರವು ಸಾಮಾಜಿಕ ತಾಣಗಳಲ್ಲಿ, “ಮಸೀದಿಯೊಂದನ್ನು ಕೆಡವಿದಾಗ ಈ ದೇವಸ್ಥಾನ ಪ್ರತ್ಯಕ್ಷಗೊಂಡಿದ್ದು” ಎಂಬ ಒಕ್ಕಣೆಯೊಂದಿಗೆ ಶೇರ್ ಆಗುತ್ತಿದ್ದವು. ವಾಸ್ತವದಲ್ಲಿ ಈ ಚಿತ್ರವು ಕಲಾವಿದನೊಬ್ಬನ ರಚನೆಯಾಗಿದ್ದು, ಚಿತ್ರದ ಕೆಳಗಡೆ ಬಲ ಭಾಗದಲ್ಲಿ ‘ಚಂದ್ರ ಕಲರಿಸ್ಟ್’ ಎಂದು ಸ್ಪಷ್ಟವಾಗಿ ಲಾಂಛನ ಹಾಕಲಾಗಿದೆ. ಅದೇ ಹೆಸರಿನ ಫೇಸ್ಬುಕ್ ಖಾತೆಯೊಂದನ್ನು ಪರಿಶೀಲಿಸಿದಾಗ ಆ ಖಾತೆಯು ಮೇ 8, 2016 ರಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದು ಕಂಡು ಬಂದಿದೆ. ಆ ಚಿತ್ರದ ಪೋಸ್ಟಿಗೆ ಮತ್ತೊಬ್ಬ ಫೇಸ್ಬುಕ್ ಬಳಕೆದಾರ, ಇದು ಎಲ್ಲಿಯ ದೇವಸ್ಥಾನ ಎಂಬ ಪ್ರಶ್ನೆಗೆ ಅದನ್ನು ಪೋಸ್ಟ್ ಮಾಡಿದ ವ್ಯಕ್ತಿ ‘ಇದು ನನ್ನದೇ ಡಿಜಿಟಲ್ ಸೃಷ್ಟಿ’ ಎಂದು ಮರು ಕೆಮೆಂಟಿಸಿದ್ದಾನೆ.

ಈ ಚಿತ್ರವನ್ನು ಮತ್ತಷ್ಟು ಗೂಗಲ್ ನಲ್ಲಿ ಪರಿಶೀಲಿಸಿದಾಗ, ಮೆಯ್ಕಿಯಂಬಾನೋ ಎನ್ನುವ ವ್ಯಕ್ತಿ ಎಪ್ರಿಲ್ 12, 2016 ರಲ್ಲಿ ಕ್ಲಿಕ್ಕಿಸಿದ ಫೋಟೊ ಎಂದು ತಿಳಿದು ಬರುತ್ತದೆ. ಇದರ ಆಧಾರದಲ್ಲಿ ಬಹುಶಃ ಚಂದ್ರರವರು ತನ್ನ ಕಲ್ಪನೆಯ ದೇವಸ್ಥಾನದ ಚಿತ್ರವನ್ನು ಡಿಜಿಟಲೀಕರಣಕ್ಕೆ ಒಳಪಡಿಸಿರಬಹುದು. ಚಂದ್ರರವರ ರಚನೆಯ ಚಿತ್ರದಲ್ಲಿ ಮೂಲ ಚಿತ್ರದ ಹಲವಾರು ಅಂಶಗಳು ಪ್ರತಿಫಲನಗೊಂಡಿದೆ.

ಅಮೆರಿಕಾದ ಚಿತ್ರ ಸಂಗ್ರಹ ಏಜೆನ್ಸಿ ‘ಶಟ್ಟರ್ ಸ್ಟಾಕ್’ ನ ಪ್ರಕಾರ ಇದು ಚೀನಾದ ಹೆನಾನ್ ಪ್ರಾಂತ್ಯದ ಫೆಂಗ್ಸಿಯಾಂಗ್ ದೇವಾಲಯದ ಲೊಯಾಂಗ್ ಬುದ್ಧನ ಕಲ್ಲಿನ ಗುಹಾ ಚಿತ್ರವಾಗಿದೆ.  ಮಸೀದಿಯನ್ನು ಕೆಡವಿದಾಗ ದೇವಸ್ಥಾನ ಪ್ರತ್ಯಕ್ಷಗೊಂಡಿತೆಂಬ ಚಿತ್ರವು ಚಿತ್ರ ಕಲಾವಿದನೊಬ್ಬನ ಡಿಜಿಟಲ್ ಕಲ್ಪನೆಯ ದೇವಾಲಯವಾಗಿದೆಯಷ್ಟೆ. ‘ರಾಯಚೂರಿನಲ್ಲಿ ರಸ್ತೆ ಅಗಲೀಕರಣ ನಡೆಸಲು ಮಸೀದಿಯನ್ನು ಕೆಡವಿದಾಗ ದೇವಸ್ಥಾನ ಪ್ರತ್ಯಕ್ಷ’ ಎಂಬ ಒಂದೇ ರೀತಿಯ ವಿವರಣೆಗಳಲ್ಲಿ 2016 ರಿಂದ ಸಾಮಾಜಿಕ ತಾಣಗಳಲ್ಲಿ ಹಲವು ವಿಧದ ಚಿತ್ರಗಳೊಂದಿಗೆ ಶೇರ್ ಆಗುತ್ತಿರುವುದು ಕಂಡು ಬರುತ್ತಿದೆ.

ಸುಳ್ಳು ಸುದ್ದಿಗಳಿಗೆ ಮತ್ತು ಪ್ರಚೋದನಕಾರಿ ಕೋಮುಧ್ವೇಷದ ಬರಹಗಳಿಗೆ ಪ್ರಸಿದ್ಧಿ ಪಡೆದಿರುವ ಅಂತರ್ಜಾಲ ಸುದ್ದಿ ತಾಣವಾಗಿರುವ ‘ಪೋಸ್ಟ್ ಕಾರ್ಡ್’ ನ ಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಹಾಗೂ ಕೆ ಪಿ ಗಣೇಶ್ ಎಂಬ ಮತ್ತೊಬ್ಬ ವ್ಯಕ್ತಿ ಕೂಡಾ ಈ ಚಿತ್ರಗಳನ್ನು 2016 ರ ಎಪ್ರಿಲ್ ನಲ್ಲಿ ಅಂತಹದ್ದೇ ಅಡಿಬರಹದಲ್ಲಿ ಟ್ವೀಟ್ ಮಾಡಿದ್ದಾರೆ. ಈ ಇಬ್ಬರನ್ನೂ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರಿನಲ್ಲಿ ಫಾಲೋ ಮಾಡುತ್ತಿದ್ದಾರೆನ್ನುವುದು ಗಮನಾರ್ಹವಾಗಿದೆ

ಈ ನಕಲಿ ಸುದ್ದಿಯ ಸತ್ಯಾಸತ್ಯತೆಯನ್ನು ಅರಿಯಲು 2016 ರಲ್ಲಿ ರಾಯಚೂರಿನ ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿಯ ಪುರಾತನ ಕಟ್ಟಡಗಳನ್ನು ಕೆಡವಿ ಹಾಕುವ ಆದೇಶ ಹೊರಡಿಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ರವರನ್ನು ‘ಆಲ್ಟ್ ನ್ಯೂಸ್’ ತಂಡ ಸಂಪರ್ಕಿಸಿದಾಗ ಅವರು ‘ 2016 ರಲ್ಲಿ ರಸ್ತೆ ಬದಿಯ ಹಲವಾರು ಹಳೆಯ ಕಟ್ಟಡಗಳನ್ನು ಕೆಡವಲು ಆದೇಶ ಹೊರಡಿಸಲಾಗಿತ್ತು ನಿಜ.  ಆಗ ಅಲ್ಲಿದ್ದ ಒಂದು ಮಿನಾರವನ್ನು ಕೆಡವಿದಾಗ ಅದರ ಕಟ್ಟಡ ರಚನೆಯ ಆಕೃತಿಯು ವೃತ್ತಾಕಾರದಲ್ಲಿತ್ತು. ಆಗ ಅಲ್ಲಿನ ಕೆಲವರು ಅದೊಂದು ದೇವಸ್ಥಾನವಾಗಿತ್ತೆಂಬ ವಾದದೊಂದಿಗೆ ಮುಂದೆ ಬಂದಿದ್ದರು. ಆದರೆ ಇಲಾಖೆಯ ವತಿಯಿಂದ ಸೂಕ್ತ ಉತ್ತರ ಮತ್ತು ದಾಖಲೆ ನೀಡಿದಾಗ ಅವರೆಲ್ಲರೂ ಸುಮ್ಮನಾಗಿದ್ದರು’ ಎಂಬ ಉತ್ತರ ಬಂದಿದೆ.  ಒಟ್ಟಿನಲ್ಲಿ 2016 ರ ಕೆಲವರ ಊಹೆಯ ವಿಷಯವನ್ನು ಇದೀಗ ಯಾವುದೋ ಡಿಜಿಟಲ್ ಚಿತ್ರಕ್ಕೆ ಹೋಲಿಸಿಕೊಂಡು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸಿರುವುದು ಸ್ಪಷ್ಟವಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group