ಸುತ್ತ-ಮುತ್ತ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಓಲಾ – ಉಬರ್ ಟ್ಯಾಕ್ಸಿಗೆ ಅನುಮತಿ ನೀಡುವುದರಿಂದ ಸ್ಥಳೀಯ ಜನತೆಯ ಟ್ಯಾಕ್ಸಿ ಬೀದಿ ಪಾಲು : ಎಸ್‌ ಡಿ ಪಿ ಐ

ವರದಿಗಾರ (ನ 15) :  ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ 45 ವರ್ಷಗಳಿಂದ ಟೂರಿಸ್ಟ್ ಟ್ಯಾಕ್ಸಿ ವಾಹನಗಳನ್ನಿಟ್ಟುಕೊಂಡು ಜೀವನ ಸಾಗಿಸುತ್ತಿರುವ  ಸ್ಥಳೀಯರು ಕಳೆದ ಕೆಲವು ದಿನಗಳಿಂದ ವಿಮಾನ ನಿಲ್ದಾಣ ಪ್ರಾಧಿಕಾರದ ಅನುಮತಿಯೊಂದಿಗೆ ಆ್ಯಪ್ ಆಧಾರಿತ (ಓಲಾ – ಉಬರ್) ಎಗ್ರಿಗೇಟರ್‌ಗಳ ಹೆಸರಿನಲ್ಲಿ ಕಿರುಕುಳ ಅನುಭವಿಸುತ್ತಿದ್ದಾರೆ.

ಸುಮಾರು 200 ರಷ್ಟಿರುವ ಸ್ಥಳೀಯ ಟ್ಯಾಕ್ಸಿ ಚಾಲಕರು, ಮಾಲಕರಲ್ಲಿ ಹೆಚ್ಚಿನವರು ಸ್ಥಳೀಯ ವಿಮಾನ ನಿಲ್ದಾಣಕ್ಕೆ ಸ್ವಂತ ಕೃಷಿ ಜಮೀನು ಮತ್ತು ಮನೆಗಳನ್ನು ಕಳಕೊಂಡು ಆರ್ಥಿಕ ಸಂಸ್ಥೆಗಳಿಂದ ಸಾಲಮಾಡಿ  ಹೊಸ ಟ್ಯಾಕ್ಸಿ ವಾಹನಗಳನ್ನು ಹಾಕಿ ದುಡಿಯುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾನದಲ್ಲಿ ದುಡಿಯುತ್ತಿರುವ ಈ ಟ್ಯಾಕ್ಸಿ ಚಾಲಕರು ಸರಕಾರಿ ನಿಗದಿತ ಬಾಡಿಗೆಯನ್ನು ವಸೂಲಿಮಾಡಿ, ಅವರ ಜೀವನೋಪಾಯದೊಂದಿಗೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ರೂಪಾಯಿ 7,00,000 (ಏಳು ಲಕ್ಷ ರುಪಾಯಿ) ಲೈಸನ್ಸ್ ಫೀಸ್ ಅಲ್ಲದೇ ವಾಹನ ಪಾರ್ಕಿಂಗ್ ಗೆ ಬೇರೆಯೇ ಹಣ ಪಾವತಿಸಿ ಬಹಳಷ್ಟು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳೆದ 45 ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣದಲಿ ಟ್ಯಾಕ್ಸಿ ಚಾಲಕ-ಮಾಲಕ ರಾಗಿ ದುಡಿಯುತ್ತಿರುವ ಇವರು ಯಾವುದೇ ವಾಹನಗಳಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂಬ ದೂರು ಇಷ್ಟರ ತನಕ  ದಾಖಲಾಗಿಲ್ಲ. ಇದು ಮಂಗಳೂರು ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕರ ಮಾಲಕರ ಬಗ್ಗೆ ಸ್ಥಳೀಯರಿಗಿರುವ ಹೆಮ್ಮೆಯ ಮಾತಾಗಿದೆ.

ಆ್ಯಪ್ ಆದಾರಿತ ಓಲಾ ಉಬರ್ ಎಗ್ರಿಗೇಟರ್ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳನ್ನು ಅಳವಡಿಸಿದಲ್ಲಿ ಸ್ಥಳೀಯ ಜನತೆಗೆ ತುಂಬಲಾರದ ನಷ್ಟ ಅನುಭವಿಸಲು ಸಾಧ್ಯತೆಯಿದೆ. ಒಂದೆಡೆ ವಿಮಾಣ ನಿಲ್ದಾಣಕ್ಕೆ ಸರ್ವಸ್ವವನ್ನು ತ್ಯಾಗ ಮಾಡಿದ ಇಲ್ಲಿನ ಕೆಲವರು ಟ್ಯಾಕ್ಸಿಗಳನ್ನು ನಡೆಸಿ ತಮ್ಮಕುಟುಂಬದ ನಿರ್ವಹಣೆ ಮಾಡುತ್ತಿದ್ದು, ಎಗ್ರಿಗೇಟರ್ ಅಳವಡಿಸುವುದರಿಂದ ಇವರೆಲ್ಲರನ್ನು ಬೀದಿಪಾಲು ಮಾಡಿದಂತಾಗುವುದು. ಈ ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಪ್ರಾರಂಭದಿಂದಲೇ ಟ್ಯಾಕ್ಸಿಗಳನ್ನು ನಡೆಸುತ್ತಿರುವ ಸ್ಥಳೀಯ ಚಾಲಕ ಮಾಲಕರಿಂದ ಶಾಂತಿ ಸೌಹಾರ್ಧತೆಯ ವಾತಾವರಣ ಇಲ್ಲಿ ಸೃಷ್ಟಿಯಾಗಿದೆಯೇ ಹೊರತು ಯಾವುದೇ ಅಹಿತಕರ ಘಟನೆ ಸಂಭವಿಸಿದ ಇತಿಹಾಸವೇ ಇಲ್ಲ.

ತಮ್ಮ ಜೀವನೋಪಾಯ ಈ ವಿಮಾನ ನಿಲ್ದಾಣದ ಟ್ಯಾಕ್ಸಿಗಳನ್ನು ಓಡಿಸಿಯೇ-ನಡೆಸಿಯೇ ಮುಂದುವರಿಯುತ್ತಿರುವುದನ್ನು ಮನಗಂಡು ಯಾವುದೇ ಆ್ಯಪ್ ಆದಾರಿತ ಓಲಾ ಉಬರ್  ಎಗ್ರಿಗೇಟರ್‌ಗಳಿಗೆ ಅನುಮತಿಯನ್ನು ನೀಡಬಾರದಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೆವೆ. ಇದಕ್ಕೆ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಳೀಯ ಜನತೆಯೊಂದಿಗೆ ಸಹಕರಿಸಬೇಕೇ ಹೊರತು ಬಹುರಾಷ್ಟಿಯ ಕಂಪೆನಿಯ ತರಹದ ಓಲಾ ಉಬರ್ ನಂತಹ ಸಂಸ್ಥೆಗೆ ಸಹಕರಿಸಬಾರದಾಗಿ ಕೇಳಿಕೊಳ್ಳುತ್ತಿದ್ದೆವೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ನೀಗಿಸಬೇಕೆಂದು ಕೇಳಿ ಕೊಳ್ಳುತ್ತಿದ್ದೇವೆ ಎಂದು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ,ವಿಮಾನ ನಿಲ್ದಾಣ ಅಧಿಕಾರಿ ,ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಥಾವುಲ್ಲಾ ಜೋಕಟ್ಟೆ ,ಇಸ್ಮಾಯಿಲ್ ಇಂಜಿನಿಯರ್ ,ಹಮೀದ್ ಬಜ್ಪೆ ,ಜಮಾಲ್ ,ನಿಸಾರ್ ಮರವೂರ್ ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group