ಪುತ್ತೂರು : ಪುತ್ತೂರು ತಾಲೂಕಿನ ಪ್ರಸೂತಿ ವೈಧ್ಯರ ಮುಷ್ಕರದಿಂದ ತಾಲೂಕಿನ ಜನಸಾಮಾನ್ಯರಿಗೆ ಹಲವು ತೊಂದರೆಗಳು ಎದುರಾಗಿದ್ದು, ತಮ್ಮ ತಪ್ಪನ್ನು ಸಮರ್ಥಿಸಲು ಜನಸಾಮಾನ್ಯರಿಗೆ ತೊಂದರೆಯಾಗುವಂತೆ ಮುಷ್ಕರ ನಡೆಸಿದ್ದನ್ನು ನಾಗರಿಕರು ತೀವ್ರವಾಗಿ ಖಂಡಿಸಿದ್ದಾರೆ. ಕೆಲವು ವೈದ್ಯರ ನಿರ್ಲಕ್ಷ್ಯದಿಂದ ಒಂದೇ ವಾರದಲ್ಲಿ ಎರಡು ತಾಯಂದಿರು ಜೀವ ಕಳೆದುಕೊಂಡರು ಮತ್ತು ಆ ಎರಡು ಶಿಶುಗಳು ಹುಟ್ಟಿದಂದಿನಿಂದಲೇ ಅನಾಥವಾಗಿದ್ದನ್ನು ಮುಂದಿಟ್ಟು ನ್ಯಾಯಕ್ಕಾಗಿ ಪ್ರತಿಭಟಿಸಿರುವುದನ್ನೇ ದೊಡ್ಡ ತಪ್ಪೆಂದು ಬಿಂಬಿಸಲು ಹೊರಟಿರವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.
ಆದರೆ ಜನಸಾಮಾನ್ಯರ ತೊಂದರೆಯನ್ನು ಮನಗಂಡು ಹೆರಿಗೆಯಾಗುವ ಮಹಿಳೆಯರಿಗೆ ಆತ್ಮ ಸ್ಥೈರ್ಯ ನೀಡಿ ನಿರಂತರವಾಗಿ ಎಸ್.ಡಿ.ಪಿ.ಐ ಪಕ್ಷವು ಬ್ರಾಂಚ್ ಮಟ್ಟದಿಂದ ಸ್ವಯಂ ಸೇವಕರನ್ನು, ಆಂಬುಲೆನ್ಸ್ ,ವಾಹನದ ವ್ಯವಸ್ಥೆಯನ್ನು ಮಾಡಿ ಸೇವೆ ಮಾಡಿದ್ದು, ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.
ಎಸ್.ಡಿ.ಪಿ.ಐ ಆಂಬುಲೆನ್ಸ್ – 4 ಹೆರಿಗೆ
ಎಸ್.ಡಿ.ಪಿ.ಐ ಆಂಬುಲೆನ್ಸ್ ವತಿಯಿಂದ ನಾಲ್ಕು ಮಂದಿ ಗರ್ಭಿಣಿಯರಿಗೆ ಸೇವೆ ನೀಡಲಾಗಿದೆ. ಯೆನಪೋಯ , ಬಿ.ಸಿ.ರೋಡ್, ಕೆ.ಎಸ್. ಹೆಗ್ಡೆ ಮತ್ತು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಸಂಭಂದಿಸಿ ಸೇವೆ ನೀಡಲಾಗಿದೆ , ಇತರ ರೋಗಕ್ಕೆ ಸಂಭಂದಿಸಿ ಒಂದು ಆಂಬುಲೆನ್ಸ್ ಸೇವೆ ನೀಡಲಾಗಿದೆ. ಅದೇ ರೀತಿ ತಾಲೂಕಿನ ಜಾತ್ಯಾತೀತ ಪಕ್ಷಗಳು, ಸಂಘಸಂಸ್ಥೆಗಳು ಸೇವಾ ಕಾರ್ಯದಲ್ಲಿ ನಿರತರಾಗಿದ್ದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ. ಸಾರ್ವಜನಿಕರಿಗೆ ಇಂತಹ ತೊಂದರೆಗಳು ಉಂಟಾದಲ್ಲಿ ಜಾತಿಮತವೆಂಬ ತಾರತಮ್ಯವಿಲ್ಲದೆ ಇನ್ನು ಮುಂದೆಯೂ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬುಬಕ್ಕರ್ ಸಿದ್ದೀಕ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
