ಮೋದಿಯ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಘೋಷಣೆಯ ಅಸಲಿಯತ್ತು ಬಹಿರಂಗ?
ವರದಿಗಾರ (ನ.10): ಟಿವಿ ಚಾನೆಲುಗಳಲ್ಲಿ ವಿಷ ಉಗುಳುವುದರಲ್ಲೇ ಕುಖ್ಯಾತನಾಗಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಇದೀಗ ಹೊಸ ಬೆದರಿಕೆಯೊಂದಿಗೆ ಮತ್ತೆ ಮೋದಿಯ “ಸಬ್ ಕಾ ಸಾಥ್,ಸಬ್ ಕಾ ವಿಕಾಸ್” ಘೋಷಣೆಯ ಮುಖವಾಡವನ್ನು ಕಳಚಿದ್ದಾನೆ.
ಚುನಾವಣೆ ಹತ್ತಿರವಾಗುತ್ತಿರುವಾಗ ಜನರ ಪ್ರಶ್ನೆಗಳನ್ನೆದುರಿಸಲಾಗದೆ, ಜನರ ದಿಕ್ಕು ತಪ್ಪಿಸುವ ಪ್ರಯತ್ನ ಎಂದೇ ಆರೋಪಿಸಲ್ಪಟ್ಟಿರುವ ಬಿಜೆಪಿಯ ‘ಮರುನಾಮಕರಣ ಯಾಗ’ದ ಬಗ್ಗೆ ‘ಆಜ್ ತಕ್’ ಚಾನೆಲಿನಲ್ಲಿ ನಡೆಯುತ್ತಿದ್ದ ಚರ್ಚೆಯೊಂದರಲ್ಲಿ ಭಾಗವಹಿಸಿದ ಸಂಬಿತ್, ಮಸೀದಿಯ ಹೆಸರನ್ನು ವಿಷ್ಣುವಿನ ಹೆಸರಿಗೆ ಬದಲಾಯಿಸುವ ಬೆದರಿಕೆಯನ್ನು ನೀಡಿದ್ದಾನೆ.
ಚರ್ಚೆಯಲ್ಲಿ ಭಾಗವಹಿಸಿದ್ದ ಎಐಎಮ್ ಐಎಮ್ ವಕ್ತಾರನಿಗೆ ” ನೀವು ಅಲ್ಲಾಹನ ಭಕ್ತನೋ ಅಥವಾ ವಿಷ್ಣು ಭಕ್ತನೋ” ಎಂದು ಪ್ರಶ್ನಿಸಿದನು.
ಇದಕ್ಕುತ್ತರವಾಗಿ ಎಐಎಮ್ ಐಎಮ್ ವಕ್ತಾರ ತಾನು ಅಲ್ಲಾಹನ ಭಕ್ತನೆಂದೂ, ಇತರ ಧರ್ಮಗಳನ್ನು ಗೌರವಿಸುತ್ತೇನೆಂದೂ ಹೇಳಿದರು.
ನಂತರ ಸಂಬಿತ್ ಪಾತ್ರ ” ಹಾಗಾದರೆ ಬಾಯಿ ಮುಚ್ಚಿರಬೇಕು, ಇಲ್ಲದಿದ್ದಲ್ಲಿ ಯಾವುದಾದರೂ ಮಸೀದಿಯ ಹೆಸರು ಬದಲಿಸಿ ವಿಷ್ಣುವಿನ ಹೆಸರಿಡುವೆನು” ಎಂದು ಬೆದರಿಸಿದನು.
Sambit to MIM spokesman “Aye Suno Allah ke bhakt ho to baith jao warna kisi masjid ka naam badal kar bhagwan Vishnu ke naam rakh doonga” pic.twitter.com/agM2ClA8SN
— Ravi Ratan (@scribe_it) November 9, 2018
ರಾಜಕೀಯದಲ್ಲಿ ಬಿಜೆಪಿ ನಾಯಕರು ಪ್ರತಿದಿನ ನೀಚ ಮಟ್ಟಕ್ಕಿಳಿಯುವ ಸ್ಪರ್ಧೆಯಲ್ಲಿ ತೊಡಗಿರುವಾಗ, ಪ್ರಧಾನ ಮಂತ್ರಿಯ ಮೌನ ಹಲವು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗುತ್ತಿದೆ. ಮೋದಿಯ ಜಾತ್ಯತೀತತೆ ಕೇವಲ ಮುಖವಾಡವೇ ಅಥವಾ ಪಕ್ಷದಲ್ಲಿ ಮೋದಿಯ ಹಿಡಿತ ಕಡಿಮೆಯಾಗುತ್ತಿದೆಯೇ???
