ವರದಿಗಾರ-ಹೊಸದಿಲ್ಲಿ: ತ್ರಿವಳಿ ತಲಾಖ್ನ ವಿಷಯದಲ್ಲಿ ಗೌರವಾನ್ವಿತ ಸುಪ್ರಿಂ ಕೋರ್ಟ್ ತೀರ್ಪು ಮುಸ್ಲಿಂ ವೈಯುಕ್ತಿಕ ಕಾನೂನಿನಲ್ಲಿ ಸರಕಾರವು ಮಧ್ಯ ಪ್ರವೇಶಿಸುವುದನ್ನು ತಡೆದಿದೆ. ಆದಾಗ್ಯೂ ಈ ತೀರ್ಪು 6 ತಿಂಗಳುಗಳ ಕಾಲ ತ್ರಿವಳಿ ತಲಾಖ್ನ ಪ್ರಯೋಗ ಮೇಲೆ ನಿಷೇಧ ಹೇರಿದೆ ಎಂದು ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದಾಲಿ ಜಿನ್ನಾ ಹೇಳಿದ್ದಾರೆ.
ಮೂವರು ನ್ಯಾಯಾಧೀಶರ ಬಹುಮತದ ತೀರ್ಪು ಸಂವಿಧಾನದ ಅನುಚ್ಛೇದ 25ರ ಅಡಿಯಲ್ಲಿ ವೈಯುಕ್ತಿಕ ಕಾನೂನುಗಳಿಗೆ ರಕ್ಷಣೆ ನೀಡಿರುವುದು ಗಮನಾರ್ಹವಾಗಿದೆ. ಮುಸ್ಲಿಂ ಪರ್ಸನಲ್ ಲಾ ಬೋರ್ಡ್ನ ಹೇಳಿಕೆಯ ಪ್ರಕಾರ, ಈ ತೀರ್ಪು ದೇಶದ ನಾಗರಿಕ ಮೂಲಭೂತ ಹಕ್ಕುಗಳನ್ನು ಮೂಲ ತತ್ವದಂತೆ ಖಾತರಿ ಪಡಿಸುವ ಮೂಲಕ ಧಾರ್ಮಿಕ ಸ್ವಾತಂತ್ರವನ್ನು ಎತ್ತಿಹಿಡಿದಿದೆ.
ತ್ರಿವಳಿ ತಲಾಖ್ನ ಪ್ರಯೋಗವನ್ನು ಉತ್ತಮ ಪ್ರಯೋಗವೆಂದು ಪರಿಗಣಿಸಲಾಗಿಲ್ಲ ಎಂಬುದು ವಾಸ್ತವವಾಗಿದೆ. ಆದರೂ ಕೆಲವು ಗ್ರಂಥಗಳಲ್ಲಿ ಇದನ್ನು ಅನುಮೋದಿಸಲಾಗಿದೆ. ಮುಸ್ಲಿಮ್ ಸಮುದಾಯದ ಬಹುತೇಕ ವಿಭಾಗಗಳು ಮುಸ್ಲಿಮ್ ಸಮುದಾಯದಲ್ಲಿ ಸುಧಾರಣೆಗಳನ್ನು ತರುವ ಮೂಲಕ ಈ ಪ್ರಯೋಗವನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸುತ್ತಿದೆ.
ಬಹುಮತದ ತೀರ್ಪಿನಿಂದ ಈ ಪ್ರಯೋಗವನ್ನು ಕಾನೂನುಬಾಹಿರ ಎಂದು ಪರಿಗಣಿಸಿ ಇದಕ್ಕೆ ತಡೆ ನೀಡಿದೆ. ಆದ ಕಾರಣ ಉಳಿದಿಬ್ಬರು ನ್ಯಾಯಾಧೀಶರ ದಷ್ಟಿಕೋನವು ಸಂಸತ್ತಿನಲ್ಲಿ ಉಲ್ಲೇಖಿಸುವ ಯಾವುದೇ ಸ್ಥಾನಮಾನ ಹೊಂದಿಲ್ಲ ಎಂದು ತೋರುತ್ತದೆ. ಈ ವಾಸ್ತವಗಳ ಆಧಾರದ ಮೇಲೆ, ಪ್ರಸಕ್ತ ತೀರ್ಪನ್ನು ದುರುಪಯೋಗಪಡಿಸಿ ಮುಸ್ಲಿಮ್ ವೈಯಕ್ತಿಕ ಕಾನೂನಿನೊಂದಿಗೆ ಹಸ್ತಕ್ಷೇಪ ನಡೆಸುತ್ತಾ ಹಿಂಬಾಗಿಲ ಮೂಲಕ ಸಮಾನ ನಾಗರಿಕ ಸಂಹಿತೆಯನ್ನು ತರದಂತೆ ಮುಹಮ್ಮದ್ ಅಲಿ ಜಿನ್ನಾ ಸರಕಾರ ಸೇರಿದಂತೆ ಸಂಸತ್ತನ್ನು ಆಗ್ರಹಿಸಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
