ರಾಷ್ಟ್ರೀಯ ಸುದ್ದಿ

28 ವರ್ಷಗಳ ಸಾಮಾಜಿಕ ಬಹಿಷ್ಕಾರ ಎದುರಿಸಿದ ಬಳಿಕ ಇಸ್ಲಾಂ ಸ್ವೀಕರಿಸಿದ ಹಿಂದೂ ಕುಟುಂಬ

ವರದಿಗಾರ- ಛತ್ತರ್ಪುರ್: ಮಧ್ಯಪ್ರದೇಶದ ಛತ್ತರ್ಪುರ್ ಎಂಬಲ್ಲಿ ಒಬ್ಬರು ಹಿಂದೂ, 28 ವರ್ಷಗಳ ಕಾಲ ಸಾಮಾಜಿಕ ಬಹಿಷ್ಕಾರವನ್ನೆದುರಿಸಿದ ಬಳಿಕ ಕುಟುಂಬ ಸಮೇತ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ.

ಮಧ್ಯಪ್ರದೇಶದ ಬುಂದೇಲ್ ಖಂಡದ ರಾಜ್ ನಗರ್ ಎಂಬ ಹಳ್ಳಿಯಲ್ಲಿ ವಾಸವಾಗಿರುವ ವಿನೋದ್ ಪ್ರಕಾಶ್ ಖರೆ(51), 28 ವರ್ಷಗಳ ಹಿಂದೆ ಮುಸ್ಲಿಂ ಧರ್ಮದ ಯುವತಿಯನ್ನು ಮದುವೆಯಾಗಿದ್ದರು. ಮದುವೆಯ ನಂತರ ತನ್ನ ಪತ್ನಿಗೆ ಹಿಂದೂ ಹೆಸರನ್ನೂ ಇಟ್ಟಿದ್ದರು.  ಆದರೆ ಈ ಸಂಬಂಧ ಆತನ ಸಂಬಂಧಿಕರು ಹಾಗೂ ಸಮಾಜಕ್ಕೆ ಅರಗಿಸಲಾರದ ತುತ್ತಾಗಿ ಮಾರ್ಪಟ್ಟಿತ್ತು. ಊರಿನವರು ಅವರನ್ನು ಸಾಮಾಜಿಕ ಬಹಿಷ್ಕಾರಕ್ಕೊಳಪಡಿಸಿದರು.

ವಿನೋದ್ ಪ್ರಕಾಶ್ ಹೇಳುವಂತೆ, ಹಿಂದೂ ಸಮಾಜವು ಆತನನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾರಂಭಿಸಿತು. ಯಾರೂ ಆತನನ್ನು ಮದುವೆ- ಸಮಾರಂಭಗಳಿಗೆ ಆಹ್ವಾನಿಸುತ್ತಿರಲಿಲ್ಲ. ಆತನ ತಂದೆಯ ಅಂತ್ಯ ಸಂಸ್ಕಾರದ ಸಮಯದಲ್ಲಿ ಹೆಗಲು ಕೊಡಲೂ ಆಸ್ಪದ ನೀಡಿರಲಿಲ್ಲ ಎಂದು ದುಃಖಿತರಾಗಿ ಹೇಳುತ್ತಾರೆ. ಈ ಬಹಿಷ್ಕಾರದ ಸಮಯದಲ್ಲಿ ಸ್ಥಳೀಯ ಮುಸ್ಲಿಂ ಭಾಂದವರು ಅವರ ಸಹಾಯಕ್ಕೆ ಬಂದಿದ್ದರಂತೆ. ಅದರಿಂದ ಪ್ರೇರಿತಗೊಂಡು, ಕುಟುಂಬ ಸಮೇತ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ತೀರ್ಮಾನಿಸಿದೆ ಎನ್ನುತ್ತಾರೆ.

ಅಗಸ್ಟ್ 23 ರಂದು ಅವರು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಇಸ್ಲಾಂ ಧರ್ಮವನ್ನು  ಸ್ವೀಕರಿಸಿದ್ದಾರೆ. ಇದೀಗ ತನ್ನ ಹೆಸರನ್ನು ಗುಲಾಂ ಮೊಹಮ್ಮದ್ ಎಂಬ ಹೆಸರಿಗೆ ಬದಲಾಯಿಸಿಕೊಂಡಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಸ್ಥಳೀಯ ವಿಶ್ವ ಹಿಂದೂ ಪರಿಷತ್ ನಾಯಕರು ಮತಾಂತರಗೊಂಡ ಕುಟುಂಬದೊಂದಿಗೆ ಮಾತನಾಡಿ ಆವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
paper writers

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group