ಅನಿವಾಸಿ ಕನ್ನಡಿಗರ ವಿಶೇಷ

ವಂಚನೆಗೊಳಗಾಗಿ ಮರು ಭೂಮಿಯಲ್ಲಿ ಕಷ್ಟ ಪಡುತ್ತಿದ್ದ ನಾಗರಾಜ್ ಗೆ ಮುಕ್ತಿ ದೊರಕಿಸಿದ ಇಂಡಿಯನ್ ಸೋಶಿಯಲ್ ಫೋರಮ್

ಸೌದಿ ಅರೇಬಿಯಾ , ಅಲ್  ಜುಬೈಲ್ : ಅದೆಷ್ಟೋ ಕನಸುಗಳನ್ನು ಹೊತ್ತ್ತುಕೊಂಡು ಕಡಲು ದಾಟಿ ಜೀವನವನ್ನು ಕಟ್ಟಿಕೊಳ್ಳಲು ಮರಳುಗಾಡಿಗೆ ಬಂದು ವಂಚನೆಗೊಳಗಾದ ನಾಗರಾಜರ ಕಥೆಯಿದು, ಮೂಡಬಿದಿರೆ ಪುತ್ತಿಗೆ ಗ್ರಾಮದ ನಾಗರಾಜ್ ಮಂಗಳೂರಿನ ರೋಲೆಕ್ಸ್ ಟೂರ್ಸ್ ಅಂಡ್  ಟ್ರಾವೆಲ್ ಏಜನ್ಸಿಯಲ್ಲಿ  ಉದ್ಯೋಗ ಸಂದರ್ಶನ ನಡೆಸಿ ಕೈಗಾರಿಕಾ ಎಲೆಕ್ಟ್ರಿಷಿಯನ್ ನೇಮಕಾತಿ ಪಾತ್ರ ಪಡೆದು ಆ ಏಜನ್ಸಿ ಗೆ ಸಾವಿರಾರು ರೂಪಾಯಿಗಳನ್ನು ಸುರಿದು ಸೌದಿ ಅರೇಬಿಯಾದ ಜುಬೈಲ್ ಕೈಗಾರಿಕಾ ಪ್ರದೇಶಕ್ಕೆ ಬಂದಿಳಿದ ನಾಗರಾಜ್ ರಿಗೆ ಶಾಕ್ ಕಾದಿತ್ತು, ಸಂದರ್ಶನ ನೇಮಕಾತಿ ಎಲ್ಲವೂ ಎಲೆಕ್ಟ್ರಿಷಿಯನ್ ವೃತ್ತಿಗಾದರೆ ಇಲ್ಲಿ ಸ್ವೀಕರಿಸಿದ ಸಂಸ್ಥೆಯು ನೀಡಿದ್ದು ಮರಳುಗಾಡಿನ ತೋಟವೊಂದರಲ್ಲಿ ಸಹಾಯಕನ ಕೆಲಸ, ನಾನು ಬಂದಿರುವುದು ಎಲೆಕ್ಟ್ರಿಷಿಯನ್ ವೃತ್ತಿಗೆಂದು ನಾಗರಾಜ್ ಹೇಳಿದರೆ ಇಲ್ಲ ನಾವು ನೀಡಿರುವ ವೀಸಾ ಇದೆ ವೃತ್ತಿಗೆ ಎಂದು ಕಂಪನಿಯು ಉತ್ತರ ನೀಡುತ್ತದೆ,  ಸರಿಯಾದ ವಸತಿ ಊಟ, ಇಲ್ಲದೆ ಪರದಾಡುತ್ತಿದ್ದ ನಾಗರಾಜ್, ಮನೆಯವರ ಮೂಲಕ ಟ್ರಾವೆಲ್ ಏಜನ್ಸಿ ಗೆ ಮರಳಿ ಕಳುಹಿಸುವಂತೆ ಮನವಿ  ಮಾಡುತ್ತಾರೆ, ಆದರೆ ಮರಳಿ ಕಳುಹಿಸಲೂ ಪುನಃ 9000 ಸೌದಿ ರಿಯಲ್ ಅಂದರೆ ಸುಮಾರು 175000 ರೂಪಾಯಿಗಳ ಬೇಡಿಕೆಯನ್ನು ಟ್ರಾವೆಲ್ ಏಜನ್ಸಿ ಇಡುತ್ತದೆ, ಅವರ ಮಾತಿನ ಪ್ರಕಾರ ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಟ್ರಾವೆಲ್ ಏಜನ್ಸಿ ಗೆ ಪಾವತಿ ಮಾಡಿ ತಿಂಗಳುಗಳಾದರೂ ನಾಗರಾಜ್ ಮರಳಿ ಬರುವ ಪ್ರಯತ್ನ ಫಲ ಕೊಡುವುದಿಲ್ಲ .

ಆಪತ್ಭಾಂದವನಾಗಿ ಬಂದ ಇಂಡಿಯನ್ ಸೋಶಿಯಲ್ ಫೋರಮ್ : ಜುಬೈಲ್ ನಲ್ಲಿ ಕಷ್ಟ ಪಡುತ್ತಿರುವ ನಾಗರಾಜ್ ವಿಚಾರವು ನಾಗರಾಜ್ ಸ್ನೇಹಿತರ ಮೂಲಕ ಐ ಎಸ್ ಎಫ್  ಜುಬೈಲ್ ಇದರ ನಾಯಕರಾದ ಹಸ್ಸನ್ ಕಿನ್ನಿಗೋಳಿ ಯವರಿಗೆ ತಿಳಿಯುತ್ತದೆ ತಕ್ಷಣ ಕಾರ್ಯ ಪ್ರವೃತ್ತರಾದ ಹಸನ್ ಕಿನ್ನಿಗೋಳಿ, ಇಮ್ತಿಯಾಜ್ , ಕೈಝರ್ ಕಣ್ಣಂಗಾರ್ , ಆಶ್ರಪ್ ಉಳ್ಳಾಲ್  ನೌಶಾದ್ ಕಾಟಿಪಳ್ಳ, ನೌಫಲ್ ಬಂದರ್ ರವರ ತಂಡವು ನಾಗರಾಜ್ ಕೆಲಸ ಮಾಡುವ ಕಂಪನಿಯನ್ನು ಭೇಟಿ ಮಾಡಿ ವಾಸ್ತವ ಪರಿಸ್ಥಿತಿಯನ್ನು ತಿಳಿಸಿ, ಸೌದಿ ಅರೇಬಿಯಾದ ಕಾನೂನಿನಂತೆ ಮುಂದುವರೆಯುವ ಬಗ್ಗೆ ತೀರ್ಮಾನ ನಡೆಸುತ್ತದೆ, ಮರುಭೂಮಿಯಲ್ಲಿದ್ದ ನಾಗರಾಜ್ ರವರನ್ನು ನಿರಂತರ ಭೇಟಿ ಮಾಡಿ‌ ತಕ್ಷಣದ ವ್ಯವಸ್ಥೆಯನ್ನೂ ಐ ಎಸ್ ಎಫ್ ಸದಸ್ಯರು ಮಾಡುತ್ತಾರೆ. ನಂತರ ರೋಲೆಕ್ಸ್ ಟೂರ್ಸ್ ಅಂಡ್  ಟ್ರಾವೆಲ್ ಏಜನ್ಸಿ ಯವರಿಗೆ ನೀಡಿದ್ದ ಹಣವನ್ನು ವಾಪಸ್ ಕೊಡಿಸುವಲ್ಲಿ ಸಫಲವಾಗುತ್ತದೆ, ನಾಗರಾಜ್ ರವರು ಕೆಲಸ ಮಾಡಿದ್ದವರೆಗಿನ ವೇತನವನ್ನು ಕಂಪನಿಯಿಂದ ಕೊಡಿಸುವಲ್ಲಿ ಹಾಗೂ ಸೌದಿ ಅರೇಬಿಯಾದಿಂದ ವಾಪಸ್ಸು ಭಾರತಕ್ಕೆ ಮರಳುವ ಎಕ್ಸಿಟ್ ವಿಸಾದ ವ್ಯವಸ್ಥೆಯನ್ನು ಕಂಪನಿಯ ಮುಖಾಂತರ ಮಾಡಿಸುವಲ್ಲಿ ಹಸನ್ ಕಿನ್ನಿಗೋಳಿ ತಂಡವು ಯಶಸ್ವಿಯಾಗುತ್ತದೆ, ಹಾಗೆ ದಿನಾಂಕ 03/11/2018 ರಂದು ಮರಳುಗಾಡಿನ ಜೀತದಂತಹ ಕೆಲಸದಿಂದ ಮುಕ್ತಿ ಪಡೆದ ನಾಗರಾಜ್ ದಮ್ಮಾಮ್ ನಿಂದ ಮುಂಬೈ ಮೂಲಕವಾಗಿ ತಾಯ್ನಾಡಿಗೆ ಮರಳಿರುತ್ತಾರೆ

ನಾಗರಾಜ್ ಕುಟುಂಬದಿಂದ ಐ ಎಸ್ ಎಫ್ ತಂಡಕ್ಕೆ ಕೃತಜ್ಞತೆ : ಸಂಕಷ್ಟಕ್ಕೊಳಗಾಗಿ ದಿಕ್ಕು ತೋಚದಂತಾಗಿದ್ದ ನಾಗರಾಜ್ ಮತ್ತು ಕುಟುಂಬಕ್ಕೆ ಆಸರೆಯಾಗಿ , ನಾಗರಾಜ್ ಮುಕ್ತಿಗಾಗಿ ಸಹಕರಿಸಿದ ಅನಿವಾಸಿಗಳ ಪಾಲಿನ ಆಶಾಕಿರಣ ಐ ಎಸ್ ಎಫ್ ತಂಡಕ್ಕೆ  ನಾಗರಾಜ್ ತಾಯಿ ಗಂಗಾವತಿ  ಹಾಗೂ ಸಹೋದರ ಸುಕುಮಾರ್ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ

ಐ ಎಸ್ ಎಫ್ ವಿಜ್ಞಾಪಣೆ :  ಉದ್ಯೋಗ ಅರಸಿ ವಿದೇಶಕ್ಕೆ ತೆರಳಲು ಬಯಸುವ ಯುವಕರು ಟ್ರಾವೆಲ್ ಏಜೆನ್ಸಿಯವರ ಬಣ್ಣದ ಮಾತುಗಳಿಗೆ ಮರುಳಾಗದೆ ಉದ್ಯೋಗ ಮತ್ತು ಸಂಸ್ಥೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ,  ವಿಚಾರಿಸಿ ನಂತರವೇ ಮುಂದುವರಿಯಬೇಕು ಎಂದು ಇಂಡಿಯನ್ ಸೋಶಿಯಲ್ ಫೋರಂ ವಿನಂತಿಸುತ್ತದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group