ಸುತ್ತ-ಮುತ್ತ

SKSSF ವತಿಯಿಂದ ಉಳ್ಳಾಲದಲ್ಲಿ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಕಾರ್ಯಕ್ರಮ

ಉಳ್ಳಾಲ: ಕನ್ನಡ ರಾಜ್ಯೋತ್ಸವ ಪ್ರಯುಕ್ತ SKSSF ದೇರಳಕಟ್ಟೆ ಕ್ಲಸ್ಟರ್ ಇದರ ವತಿಯಿಂದ ಆರೋಗ್ಯ ಕರ್ನಾಟಕಕ್ಕಾಗಿ ಯುವಜನ ಜಾಗ್ರತಿ ಎಂಬ ಘೊಷಣೆಯೊಂದಿಗೆ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಸಭೆ SKSSF ದೇರಳಕಟ್ಟೆ ಕ್ಲಸ್ಟರ್ ಅಧ್ಯಕ್ಷರಾದ ಜನಾಬ್ ಸಯ್ಯದ್ ಅಲಿ ಇವರ ಅಧ್ಯಕ್ಷತೆಯಲ್ಲಿ ಉಳ್ಳಾಲದಲ್ಲಿ ನಡೆಯಿತು .ಉಳ್ಳಾಲ ಪ್ರಿನ್ಸಿಪಾಲರಾದ ಉಸ್ತಾದ್ ಉಸ್ಮಾನ್ ಫೈಝಿ ತೋಡಾರ್ ದುಃಆಗೈದರು .ಎಸ್ ಕೆ ಎಸ್ ಎಸ್ ಎಫ್ ಮಂಗಳೂರು ವಲಯ ಕೌನ್ಸಿಲರ್ ಫಾರೂಖ್ ದಾರಿಮಿ ಗ್ರಾಮಚಾವಡಿ ಸ್ವಾಗತಿಸಿದರು.

ವಲಯ ಪ್ರಧಾನ ಕಾರ್ಯದರ್ಶಿ ಹಾಫಿಲ್ ಝೈನ್ ಸಖಾಫಿ,ಪ್ರತಿಜ್ಞಾ ಭೋದಿಸಿದರು . ಬಹು ಶರೀಫ್ ಅರ್ಶದಿ ದೇರಳಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಮುಸ್ತಫಾ ಅಬ್ದುಲ್ಲಾ.ನಝೀರ್ ಉಳ್ಳಾಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ಯುವ ವಾಗ್ಮಿ, SKSSF ಬೆಳ್ತಂಗಡಿ ವಲಯ ಅಧ್ಯಕ್ಷರಾದ ನಝೀರ್ ಅಝ್ಹರಿ ಪ್ರಮೇಯ ಭಾಷಣಗೈಯುತ್ತಾ ಕನ್ನಡ ನಾಡಿನ ಉಗಮ ಮತ್ತು ಅಭಿವ್ರಧ್ಧಿಯ ಬಗ್ಗೆ ನಾವು ಚಿಂತಿಸಬೇಕಾಗಿದೆ.ಅಪರಾದಗಳ ಹೆಚ್ಚಳ ರಾಜ್ಯದ ಅಭಿವ್ರಧ್ಧಿಗೆ ಮಾರಕ ಮತ್ತು ಮಾದಕ ದ್ರವ್ಯಗಳ ಸೇವನೆಯಿಂದ ಇಂದಿನ ಯುವ ಸಮಾಜದ ಕೌಟುಂಬಿಕ ಮತ್ತು ಸಾಮಾಜಿಕ ಜೀವನವು ಹಾಳಾಗುತ್ತಿರುವುದು ದುಖದ ಸಂಗತಿ.ಆದ್ದರಿಂದ ಇಂತಹ ಚಟಗಳಿಂದ ನಮ್ಮ ವಿಧ್ಯಾರ್ಥಿಗಳು ಮತ್ತು ಯುವಕರನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ನುಡಿದರು.  ಹನೀಫ್ ಉಚ್ಚಿಲ ವೀಕ್ಷಕರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ, ಕ್ಲಸ್ಟರ್ ಕೋಶಾಧಿಕಾರಿ ಮೊಹಮ್ಮದ್ ಮೋನು ಇನೋಳಿ,ಅಬ್ದುಲ್ ಲತೀಫ್ ದಾರಿಮಿ,ಆಸಿಫ್ ಅಬ್ದುಲ್ಲಾ,ಇಬ್ರಾಹಿಂ ತಂಗಳ್ ಉಳ್ಳಾಲ,ಇಬ್ರಾಹಿಂ ಕೊಣಾಜೆ, ಹರ್ಷಾದ್ ಕುದ್ರೋಳಿ,ಮೊಹಮ್ಮದ್ ನಡುಪದವು, ರಹ್ಮಾನ್ ದಾರಿಮಿ ಪರೇಕ್ಕಳ, ಯು.ಟಿ.ಮೊಹಮ್ಮದ್ ಹಾಜಿ,ಅಬ್ದುಲ್ಲಾ ರೆಂಜಾಡಿ, ಮತ್ತಿತ್ತರರು ಉಪಸ್ಥಿತರಿದ್ದರು.

ಕ್ಲಸ್ಟರ್ ಪ್ರದಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ವಂದಿಸಿದರು .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group