ರಾಜ್ಯ ಸುದ್ದಿ

ರಾಮನಗರ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದ ಚಂದ್ರಶೇಖರ್ ವಿರುದ್ಧ ವಿಕೃತಿ ಮೆರೆದ ಬಿಜೆಪಿಗರು !

ವರದಿಗಾರ (ನ 2) : ರಾಮನಗರ ಉಪಚುನಾವಣೆಯ ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯವರಿಗೆ ತನ್ನ ಸಂಪೂರ್ಣ ಬೆಂಬಲ ಘೋಷಿಸಿದ್ದರು. ಇದರಿಂದ ಹತಾಶರಾಗಿರುವ ಬಿಜೆಪಿಯ ಕಾರ್ಯಕರ್ತರು ವಿಕೃತಿ ಮೆರೆದಿದ್ದು, ತಮ್ಮ ಹೀನ ಸಂಸ್ಕೃತಿಯನ್ನು ರಾಜ್ಯದ ಜನತೆಯ ಮುಂದೆ ತೋರಿಸಿದ್ದಾರೆ.

ಚಂದ್ರಶೇಖರ್ ರವರ ಭಾವಚಿತ್ರದ ಫ್ಲೆಕ್ಸ್ ಒಂದನ್ನು ತೂಗು ಹಾಕಿ ಅದರಲ್ಲಿ ‘ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದಿದ್ದು ಮಾತ್ರವಲ್ಲದೆ, ಅದರಲ್ಲಿ ‘ದಿವಂಗತ ಚಂದ್ರಶೇಖರ್’ ಎಂದು ಬರೆದು ಅವರು ಜೀವಂತವಿರುವಾಗಲೇ ಸತ್ತವರ ಸಾಲಿಗೆ ಸೇರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು ತಮ್ಮ ಹತಾಶೆಯ ಪರಮಾವಧಿಯೆಂಬಂತೆ ಆ ಫ್ಲೆಕ್ಸಿನಲ್ಲಿ ‘ಮತ್ತೆ ಹುಟ್ಟಿ ಬರಬೇಡ’ ಎಂದೂ ಕೂಡಾ ಬರೆದಿದ್ದಾರೆ. ಅದೇ ಫ್ಲೆಕ್ಸಿನ ಮತ್ತೊಂದು ಚಿತ್ರದಲ್ಲಿ ಅವರ ಭಾವಚಿತ್ರಕ್ಕೆ ಬಿಜೆಪಿ ಕಾರ್ಯಕರ್ತನೊಬ್ಬ ಮೂತ್ರ ಮಾಡುವ ದೃಶ್ಯವನ್ನು ಸೆರೆ ಹಿಡಿದು ಅದನ್ನು ಸಾಮಾಜಿಕ ತಾಣಗಳಲ್ಲಿ ಹಂಚುತ್ತಾ ತಮ್ಮ ವಿಕೃತಿ ಮೆರೆದಿದ್ದಾರೆ.

ಕಾಂಗ್ರೆಸ್ ಮೇಲ್ಮನೆಯ ಶಾಸಕರಾಗಿರುವ ಸಿ ಎಂ ಲಿಂಗಪ್ಪರ ಪುತ್ರರಾಗಿರುವ ಚಂದ್ರಶೇಖರ್, ರಾಮನಗರ ಉಪಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಮಾತ್ರವಲ್ಲ ಮೈತ್ರಿ ಪಕ್ಷದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯವರ ವಿರುದ್ಧ ಬಿಜೆಪಿಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಈ ಮೂಲಕ ಕಾಂಗ್ರೆಸ್ ಶಾಸಕರಾಗಿರುವ ಲಿಂಗಪ್ಪರವರ ವಿರುದ್ಧವೇ ಸ್ವಂತ ಮಗನನ್ನು ಎತ್ತಿ ಕಟ್ಟುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು. ಲಿಂಗಪ್ಪ ಮಾತ್ರ ಆ ಸಮಯದಲ್ಲಿ ಮೌನದ ಮೊರೆ ಹೋಗಿದ್ದರು. ಆದರೆ ಚುನಾವಣೆಗೆ ಮೂರು ದಿನ ಬಾಕಿಯಿರುವಾಗ ಬಿಜೆಪಿ ರಾಜ್ಯ ನಾಯಕರ ಅಸಹಕಾರ ಮತ್ತು ಪಕ್ಷದೊಳಗಿನ ಒಳಜಗಳದಿಂದ ಬೇಸತ್ತು ಚುನಾವಣಾ ಕಣದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದರು. ಇದರಿಂದ ಬಿಜೆಪಿ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಇದೀಗ ಹತಾಶ ಬಿಜೆಪಿ ಕಾರ್ಯಕರ್ತರ ವಿಕೃತಿಯ ವಿರುದ್ಧ ಸಾಮಾಜಿಕ ತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗುತ್ತಿದೆ.

ಮೋದಿ ಸರಕಾರವು ರೈತ ವಿರೋಧಿಯೇ?

This poll has been finished and no longer available to vote !

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group