ರಾಷ್ಟ್ರೀಯ ಸುದ್ದಿ

ಆರ್ ಬಿ ಐ ಗವರ್ನರ್ ಕೇಂದ್ರದೊಂದಿಗೆ ಸಹಕರಿಸಲಿ ಇಲ್ಲವೇ ರಾಜೀನಾಮೆ ಕೊಟ್ಟು ಹೊರ ನಡೆಯಲಿ : ಆರೆಸ್ಸೆಸ್

ನವದೆಹಲಿ(1-11-2018): ದೇಶದ ಸ್ವಾಯುತ್ತ ಸಂಸ್ಥೆಗಳ ಕೆಲಸಗಳಲ್ಲಿ ಆರೆಸ್ಸೆಸ್ ಮತ್ತು ಕೇಂದ್ರ ಸರಕಾರ ಮೂಗು ತೂರಿಸುವ ವಿಚಾರ ಬಹಿರಂಗವಾದ ಬೆನ್ನಲ್ಲೇ ಇದೀಗ ಆರೆಸ್ಸೆಸ್ ನ ಆರ್ಥಿಕ ವಿಭಾಗದ ಮುಖ್ಯಸ್ಥ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಉರ್ಜಿತ್ ಪಟೇಲ್ ಅವರು ಕೇಂದ್ರ ಸರಕಾರದೊಂದಿಗೆ ರಾಜಿಮಾಡಿಕೊಂಡು ಕೆಲಸ ಮಾಡಬೇಕು ಅಥವಾ ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಹೇಳಿಕೆ ನೀಡಿದ್ದು ಸ್ವಾಯುತ್ತ ಸಂಸ್ಥೆಗಳನ್ನು ತಮಗೆ ಬೇಕಾದಾಗೆ ನಿಯಂತ್ರಿಸಲು ಆರೆಸ್ಸೆಸ್ ಮುಂದಾಗಿದೆ ಎನ್ನಲಾಗಿದೆ.

ಆರೆಸ್ಸೆಸ್ ಆರ್ಥಿಕ ವಿಭಾಗದ ಮುಖ್ಯಸ್ಥ ಸ್ವದೇಶಿ ಜಾಗರಣ್ ಮಂಚ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೇಶದ ಸ್ವಾಯುತ್ತ ಸಂಸ್ಥೆ ಆರ್ ಬಿಐ ನ್ನು ತರಾಟೆಗೆ ತೆಗೆದುಕೊಂಡಿದ್ದು, ಊರ್ಜಿತ್ ಪಟೇಲ್ ತಮ್ಮ ಅಧೀನ ಅಧಿಕಾರಿಗಳಿಗೆ ಕೇಂದ್ರ ಬ್ಯಾಂಕ್ ಮತ್ತು ಸರ್ಕಾರದ ನಡುವಿನ ಭಿನ್ನಾಭಿಪ್ರಾಯವನ್ನು ಮಾಧ್ಯಮಗಳಿಗೆ ತಿಳಿಸದಂತೆ ಎಚ್ಚರವಹಿಸಬೇಕೆಂದು ಹೇಳಿದ್ದಾರೆ.

ಬ್ಲೂಂಬರ್ಗ್ ಕ್ವಿಂಟ್ ವರದಿಯ ಪ್ರಕಾರ, ಆರ್ ಬಿಐ ಗೆ ಕೇಂದ್ರ ಸರಕಾರ ಪತ್ರವನ್ನು ಬರೆದಿದ್ದು, ಆರ್ ಬಿಐ ಸೆಕ್ಸನ್ 7 ರ ಪ್ರಕಾರ ಸರಕಾರಕ್ಕೆ ಗವರ್ನರ್ ಜೊತೆ ಸಮಾಲೋಚನೆಗೆ ಅವಕಾಶ ಮತ್ತು ನಿರ್ದೇಶನಗಳನ್ನು ನೀಡುವ ಅವಕಾಶವಿದ್ದು, ಇದನ್ನು ಸರಕಾರಕ್ಕೆ ಬಳಸುವ ಎಲ್ಲಾ ರೀತಿಯ ಸ್ವಾತಂತ್ರ್ಯವಿದೆ ಎಂದು ಮಹಾಜನ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆರ್ ಬಿಐ ಉಪ ಗವರ್ನರ್ ವಿರಲ್ ಆಚಾರ್ಯ ಅವರು ಅ.26ರಂದು ಮಾತನಾಡಿ, ಕೇಂದ್ರ ಸರಕಾರ ಯಾವುದೇ ಕಾರಣಕ್ಕೆ ಆರ್ ಬಿಐ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪವನ್ನು ಮಾಡಬಾರದು ಮತ್ತು ಕೇಂದ್ರ ಬ್ಯಾಂಕಿನ ಸ್ವಾತಂತ್ರ್ಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಕೇಂದ್ರ ಸರಕಾರ ಮತ್ತು ಆರ್ ಬಿಐನ ಮುಸುಕಿನ ಗುದ್ದಾಟ ಜಗಜ್ಜಾಹೀರಾಗಿತ್ತು. ನಿನ್ನೆಯಷ್ಟೇ ಊರ್ಜಿತ್ ಪಟೇಲ್ ಅವಧಿ ಪೂರ್ವ ರಾಜೀನಾಮೆಯ ಸಾಧ್ಯತೆಯನ್ನು ಆರ್ ಬಿಐ ಕೆಲ ಅಧಿಕಾರಿಗಳು ತಿಳಿಸಿದ್ದು, ಯಾವುದೇ ಸಂದರ್ಭದಲ್ಲಿ ಬೆಳವಣಿಗೆಗಳು ನಡೆಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲು ನೋಟು ನಿಷೇಧದ ವೇಳೆ ಕೇಂದ್ರ ಸರಕಾರ ತಮ್ಮ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದ ರಿಸರ್ವ್ ಬ್ಯಾಂಕ್, ಕೇಂದ್ರ ಸರಕಾರ ತನ್ನ ಸ್ವಾತಂತ್ರ್ಯ ಕಸಿದುಕೊಂಡಿದ್ದು, ಸ್ವಾಯತ್ತತೆಗೆ ಧಕ್ಕೆ ತಂದಿದೆ, ಹೀಗಾದರೆ ಭಾರತದ ಅರ್ಥ ವ್ಯವಸ್ಥೆಗೆ ಬೆಂಕಿ ಬೀಳಲಿದೆ, ಹಣಕಾಸು ಮಾರುಕಟ್ಟೆ ಅಲ್ಲೋಲಕಲ್ಲೋಲವಾಗಲಿದೆ ಎಂದು ಗವರ್ನರ್ ಊರ್ಜಿತ್ ಪಟೇಲ್ ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group