ರಾಜ್ಯ ಸುದ್ದಿ

ಹೆಲ್ಮೇಟ್ ಧರಿಸದೇ ಕಾನೂನು ಉಲ್ಲಂಘಿಸಿ ಬೈಕ್ ರ‍್ಯಾಲಿ ನಡೆಸಿದ ಸಂಸದ ಪ್ರತಾಪಸಿಂಹ

  • ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಜನಪ್ರತಿನಿಧಿಯಿಂದಲೇ ಕಾನೂನು ಉಲ್ಲಂಘನೆ

ವರದಿಗಾರ(ಅ.26): ಉಪ ಚುನಾವಣಾ ಪ್ರಚಾರದ ಸಂದರ್ಭ ಬಿಜೆಪಿಯು ಬೈಕ್ ರ‍್ಯಾಲಿಯನ್ನು ನಡೆಸಿದ್ದು ಈ ಸಂದರ್ಭ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಯಾರೂ ಹೆಲ್ಮೇಟ್ ಧರಿಸದೆ ಕಾನೂನನ್ನು ಗಾಳಿಗೆ ತೂರಿ ಬೈಕ್ ರ‍್ಯಾಲಿಯನ್ನು ನಡೆಸಿರುವುದರ ಬಗ್ಗೆ ವರದಿಯಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರತಾಪ್ ಸಿಂಹ  ಹೆಲ್ಮೆಟ್ ಧರಿಸದೆ ಬೈಕ್ ರ‍್ಯಾಲಿಯನ್ನು ಮುನ್ನಡೆಸಿದ್ದಾರೆ. ಮರೆಗುದ್ದಿ ಗ್ರಾಮದಿಂದ ಕೊಣ್ಣೂರು ಗ್ರಾಮದವರೆಗೆ ಬೈಕ್ ಮೂಲಕ ಪ್ರಯಾಣ ಮಾಡಿರುವ ಸಂಸದ ಪ್ರತಾಪ್ ಸಿಂಹ ಕಾನೂನು ನಿಯಮವನ್ನು ಉಲ್ಲಂಘಿಸಿ ಪ್ರಯಾಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜನಪ್ರತಿನಿಧಿಗಳೇ ಈ ರೀತಿ ಕಾನೂನನ್ನು ದುರುಪಯೋಗ ಮಾಡುತ್ತಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ವೀಡಿಯೋ ವೀಕ್ಷಿಸಿ:

ಹೆಲ್ಮೇಟ್ ಧರಿಸದೇ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡ ಪ್ರತಾಪಸಿಂಹ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group