ವರದಿಗಾರ(ಅ.26): ದೆಹಲಿಯ ಮಾಳವೀಯ ನಗರದ ಮದ್ರಸಾದ ಬಳಿ ಆಟವಾಡುತ್ತಿದ್ದ 8 ವರ್ಷ ಪ್ರಾಯದ ಅಮಾಯಕ ಮದ್ರಸಾ ವಿದ್ಯಾರ್ಥಿಯನ್ನು ಮತಾಂಧರ ಗುಂಪೊಂದು ಹತ್ಯೆ ನಡೆಸಿರುವ ವರದಿಯಾಗಿದೆ.
ದೇಶದ ರಾಜಧಾನಿಯನ್ನೇ ನಡುಗಿಸುವಂತಹ ಈ ಹತ್ಯೆಗೆ ಸಂಬಂಧಪಟ್ಟು ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ.
ದೆಹಲಿಯ ಮಾಳವೀಯ ನಗರದ ಬೇಗಂಪುರ ಪರಿದರದಲ್ಲಿರುವ ಈ ಮದ್ರಸಾದ ಹಾಸ್ಟೆಲ್ ವ್ಯವಸ್ಥೆಯನ್ನುಪಯೋಗಿಸಿ ಕೆಲವು ವಿದ್ಯಾರ್ಥಿಗಳು ಮದ್ರಸಾದಲ್ಲೇ ವಾಸಿಸುತ್ತಾರೆ. ಗುರುವಾರವು ತಮ್ಮ ಮದ್ರಸಾದ ರಜಾದಿನವಾದ ಕಾರಣ,ಅಲ್ಲೇ ವಾಸಿಸುತ್ತಿದ್ದ ಮದ್ರಸಾ ವಿದ್ಯಾರ್ಥಿಗಳು ಮದ್ರಸಾದ ಹೊರಾಂಗಣದಲ್ಲಿ ಆಟವಾಡುತ್ತಿದ್ದರು. ಸ್ಥಳೀಯ ಮತಾಂಧರ ಗುಂಪೊಂದು ಆಟವಾಡುತ್ತಿದ್ದ ಸಣ್ಣ ಮಕ್ಕಳ ಮೇಲೆ ಆಕ್ರಮವೆಸಗಿತು. ಮತ್ತೆಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾದರೂ, ಮೊಹಮ್ಮದ್ ಅಝೀಮ್ ಎಂಬ 8 ವರ್ಷ ಪ್ರಾಯದ ಬಾಲಕನು ಮತಾಂಧರ ಥಳಿತದ ಕಾರಣ ಮರಣವನ್ನಪ್ಪಿದ್ದಾನೆ. ಆತನನ್ನು ಮತಾಂಧರ ಗುಂಪು,ಎತ್ತಿ ಪಕ್ಕದಲ್ಲಿದ್ದ ಬೈಕ್ ಮೇಲೆ ಎಸೆದ ಕಾರಣ,ಅಲ್ಲೇ ಕುಸಿದು ಬಿದ್ದಿದ್ದನು ಹಾಗೂ ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದನು.
ಮದ್ರಸಾ ವಿದ್ಯಾರ್ಥಿಗಳು ಹಾಗೂ ಅದ್ಯಾಪಕರ ಪ್ರಕಾರ, ಸ್ಥಳೀಯರು ಅವರಿಗೆ ಯಾವಾಗಾಲೂ ತೊಂದರೆ ನೀಡುತ್ತಿದ್ದರು. ಖಾಲಿ ಮಧ್ಯ ಬಾಟಲಿಗಳನ್ನು ಮದ್ರಸಾ-ಮಸೀದಿ ಅವರಣದೊಳಗೆ ಎಸೆಯುವುದೂ ಸಾಮಾನ್ಯವಾಗಿದೆ ಎಂದು ಅವರು ದೂರಿದ್ದಾರೆ.
