ರಾಷ್ಟ್ರೀಯ ಸುದ್ದಿ

ಗೋರಖ್ ಪುರ ಮಕ್ಕಳ ಸಾವಿನ ಘಟನೆ: ಹಲವರ ವಿರುದ್ಧ ಪ್ರಕರಣ ದಾಖಲು

ವರದಿಗಾರ-ಲಖ್ನೋ: ಇಲ್ಲಿನ ಗೋರಖ್ ಪುರದಲ್ಲಿ ನಡೆದ ಮಕ್ಕಳ ಸಾವಿನ ಘಟನೆಗೆ ಸಂಬಂಧಿಸಿದಂತೆ BRD ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲರ ಮೇಲೆ ಹಾಗೂ ಇತರ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಒಂದೇ ವಾರದಲ್ಲಿ 90ಕ್ಕಿಂತಲೂ ಅಧಿಕ ಮಕ್ಕಳು ಆಮ್ಲಜನಕದ ಕೊರತೆಯಿಂದ ಸಾವಿಗೀಡಾಗಿರುವುದು ದೇಶದ ಜನತೆಯನ್ನು ನಿಬ್ಬೆರಗಾಗಿಸಿತ್ತು. ಘಟನೆಯ ಬಳಿಕ ಜನರು ಸರಕಾರದ ವಿರುದ್ಧ ಆಕ್ರೋಶಿತಗೊಂಡಿದ್ದರು ಹಾಗೂ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದರು. ಪ್ರಕರಣದ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದ ತನಿಖಾ ಸಮಿತಿ ಬುಧವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರಿಗೆ ವರದಿ ಸಲ್ಲಿಸಿದೆ.

ಈ ಹಿನ್ನೆಲೆಯಲ್ಲಿ ಆಮ್ಲಜನಕ ಸರಬರಾಜು ಕಂಪನಿ ಮೆ. ಪುಷ್ಪಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ. ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ಉತ್ತರ ಪ್ರದೇಶ ಕಾರ್ಯದರ್ಶಿ ಅನಿತಾ ಭಟ್ನಾಗರ್ ಅವರನ್ನು ವರ್ಗಾಯಿಸಲಾಗಿದೆ. BRD ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ. ರಾಜೀವ್ ಮಿಶ್ರಾ, ಆಮ್ಲಜನಕ ಸರಬರಾಜು ವ್ಯವಸ್ಥೆಯ ಉಸ್ತುವಾರಿ ಡಾ. ಸತೀಶ್ , ಡಾ.ಪೂರ್ಣಿಮಾ ಶುಕ್ಲಾ ಹಾಗೂ ಡಾ. ಖಾನ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವಂತೆ ಸರಕಾರ ನೇಮಿಸಿದ್ದ ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಘಟನೆ ನಡೆದಂದಿನಿಂದ ಒಂದಲ್ಲಾ ಒಂದು ರೀತಿಯಿಂದ ನೈಜತೆಯನ್ನು ಜನರಿಂದ ಮರೆಮಾಚುವ ಪ್ರಯತ್ನಪಟ್ಟಿದ್ದ ಉತ್ತರ ಪ್ರದೇಶ ಸರಕಾರ, ಈಗ ಆಮ್ಲಜನಕ ಪೂರೈಕೆದಾರರಾಗಿದ್ದಂತಹಾ ಪುಷ್ಪಾ ಸೇಲ್ಸ್ ಮೇಲೆಯೂ ಪ್ರಕರಣ ದಾಖಲಿಸಿದ್ದು, ಘಟನೆಗೆ ಆಮ್ಲಜನಕದ ಕೊರತೆಯೇ ಮೂಲ ಕಾರಣವೆಂದು ಈಗ ಸರಕಾರವೇ ಒಪ್ಪಿಕೊಂಡಂತಾಗಿದೆ. ಪುಷ್ಪಾ ಸೇಲ್ಸ್ ಕೂಡಾ ಆರಂಭದಿಂದಲೂ ತನ್ನ ಹಣ ಸಂದಾಯವಾಗದಿರುವ ಕುರಿತು ಹಲವು ಬಾರಿ ಸರಕಾರಕ್ಕೆ ಸಂಬಂಧಪಟ್ಟ ಆಸ್ಪತ್ರೆಯ ಅಧಿಕಾರಿಗಳನ್ನು ಎಚ್ಚರಿಸಿದ್ದೇನೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆದರೆ ಯೋಗಿಯ ಸರಕಾರಿ ಅಧಿಕಾರಿಗಳು ಈ ಎಲ್ಲಾ ಆರೋಪಗಳನ್ನು ಅಲ್ಲಗಳೆಯುತ್ತಿದ್ದರು.

 

ಸಾಂದರ್ಭಿಕ ಚಿತ್ರ ಕೆಳಗೆ ನೀಡಲಾಗಿದೆ:

 

 

 

 

 

 

 

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group