ರಾಜ್ಯ ಸುದ್ದಿ

ಬಿಜೆಪಿ ಚುನಾವಣಾ ಪ್ರಚಾರ; ಅನಂತ್ ಕುಮಾರ್ ಹೆಗಡೆ ಕೈಯ್ಯಲ್ಲಿ ಮೈಕ್ ಕೊಡಬೇಡಿ: ಪ್ರಧಾನಿ ಮೋದಿ ಸೂಚನೆ  

ವರದಿಗಾರ (ಅ.24): ನವೆಂಬರ್ 3 ರಂದು ನಡೆಯುವ ರಾಜ್ಯದ ಐದು ಉಪ ಚುನಾವಣೆಯ ಬಿಜೆಪಿಯ ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಕೇಂದ್ರ ಕೌಶಲ್ಯಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಕೈಯ್ಯಲ್ಲಿ ಯಾವುದೇ ಕಾರಣಕ್ಕೂ ಮೈಕ್ ಕೊಡಬೇಡಿ ಹಾಗೂ ಚುನಾವಣಾ  ಪ್ರಚಾರಕ್ಕೆ ಬಳಸಿಕೊಳ್ಳಬೇಡಿ ಎಂದು ರಾಜ್ಯ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಕೇಂದ್ರ ಸಚಿವ ಅನಂತ್​​ಕುಮಾರ್ ಹೆಗಡೆ ಅವರನ್ನು ಚುನಾವಣಾ ಪ್ರಚಾರದಲ್ಲಿ ಬಿಜೆಪಿ ದೂರವಿಟ್ಟದೆ. ಯಾವುದೇ ಕ್ಷೇತ್ರಗಳಿಗೆ ಸುಳಿಯದಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಡ್ಯಾಮೇಜ್  ಆಗಿತ್ತು. ಎಲ್ಲಾ ಕಡೆ ಭಾಷಣ ಮಾಡಿದ್ದರೆ ವಿವಾದ ಗ್ಯಾರೆಂಟಿ ಎನ್ನುವುದು ಬಿಜೆಪಿಗೆ ಪಕ್ಷಕ್ಕೆ ಗೊತ್ತಿದೆ. ‘ಸಂವಿಧಾನವನ್ನೇ ಬದಲಿಸುತ್ತೇವೆ, ಅದಕ್ಕಾಗಿಯೇ ನಾವು ಬಂದಿರುವುದು’ ಎನ್ನುವ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಅನುಭವಿಸಿದೆ. ಈ ಹಿಂದಿನ ಕಹಿ ಅನುಭವದಿಂದ ಬಿಜೆಪಿ ಎಚ್ಚೆತ್ತುಕೊಂಡಿದೆ ಎನ್ನಲಾಗಿದೆ.

ಕಳೆದ ಚುನಾವಣೆಯ ಸಂದರ್ಭದಲ್ಲಿ ಹಲವು ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದು ಇಲ್ಲಿ ಸ್ಮರಿಸಬಹುದು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group