- ಆಡಳಿತ ಮಂಡಳಿಗೆ ನೀಡಿದ ಸ್ಪಷ್ಟನೆಯ ಪತ್ರವನ್ನು ಡೆತ್ ನೋಟ್ ಎಂದು ಹರಡಿದ ಸಾಮಾಜಿಕ ತಾಣದ ವೀರರು!
ವರದಿಗಾರ (ಅ.23): ಇತ್ತೀಚೆಗೆ ದಸರಾ ಹಬ್ಬದ ಸಂದರ್ಭ ಅಮೃತಸರದಲ್ಲಿ ನಡೆದ ಭೀಕರ ರೈಲು ದುರಂತ ಪ್ರಕರಣದ ಹೆಸರಿನಲ್ಲಿ ಕೋಮು ಪ್ರಚೋದನೆ ನಡೆಸಿರುವ ಬೆನ್ನಿಗೆ ಅದೇ ಘಟನೆಯ ಮತ್ತೊಂದು ನಕಲಿ ಸುದ್ದಿಯನ್ನು ಹರಡಿರುವ ಬಗ್ಗೆ ವರದಿಯಾಗಿದೆ.
ಅಮೃತಸರ ರೈಲು ದುರಂತದ ರೈಲಿನ ಚಾಲಕನು ರೈಲು ಆಡಳಿತ ಮಂಡಳಿಗೆ ರೈಲು ದುರಂತದ ಬಗ್ಗೆ ಸ್ಪಷ್ಟನೆ ನೀಡಿರುವ ಪತ್ರವನ್ನು ‘ಡೆತ್ ನೋಟ್’ ಎಂದು ಉಲ್ಲೇಖಿಸಿ ರೈಲಿನ ಚಾಲಕ ಆತ್ಮಹತ್ಯೆ ಎಂಬ ನಕಲಿ ಸುದ್ದಿಯ ಸತ್ಯಾಸತ್ಯತೆಯನ್ನು ಆಲ್ಟ್ ನ್ಯೂಸ್ ಬಹಿರಂಗಪಡಿಸಿದೆ.
ಸತ್ಯಾಸತ್ಯೆಯೇನು?
ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿರುವ ಸಂದೇಶದ ಜಾಡು ಹಿಡಿದು ಹೊರಟ ಅಲ್ಟ್ ನ್ಯೂಸ್ ಘಟನೆಯ ಬಗ್ಗೆ ಚಾಟ್ವಿಂಡ್ ಪೊಲೀಸ್ ಠಾಣೆಯ SHO ಗುರ್ವಿಂದರ್ ಸಿಂಗ್ ರನ್ನು ಸಂಪರ್ಕಿಸಿ ಮಾಹಿತಿಯನ್ನು ಕಲೆ ಹಾಕಿದೆ.
ಗುರ್ವಿಂದರ್ ಸಿಂಗ್ ಮಾತನಾಡುತ್ತಾ, ಅಲ್ಲಿ ಟರ್ನ್ ಟಾರ್ನ್ ಪ್ರದೇಶದ ಸಮೀಪ ಆತ್ಮಹತ್ಯೆ ಪ್ರಕರಣವೊಂದು ವರದಿಯಾಗಿದೆ. “ಈ ಆತ್ಮಹತ್ಯೆ ಪ್ರಕರಣಕ್ಕೂ ರೈಲು ದುರಂತದ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ. ಈ ವ್ಯಕ್ತಿ ಕಳೆದ ನಾಲ್ಕು ತಿಂಗಳುಗಳಿಂದ ಖಿನ್ನತೆಗೆ ಒಳಗಾದರು. ” ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 22, 2018 ರಂದು ದೈನಿಕ್ ಜಾಗರನ್ ಪ್ರಕಟಿಸಿದ ಲೇಖನವೊಂದರಲ್ಲಿ, “ವಾಸ್ತವವಾಗಿ, ಬೋಹ್ದು ಗ್ರಾಮದ ಬಳಿ ಬಲೆಗೆ ತೂಗಾಡುತ್ತಿರುವ ದೇಹವು ಪರಮಜೀತ್ ಎಂಬ ಹೆಸರಿನ ಭಿಕ್ವಿಂಡ್, ಟಾರ್ನ್ ಟಾರ್ನ್ನ ನಿವಾಸಿಯದ್ದಾಗಿದೆ. ಪರಮಜೀತ್ ಮಾನಸಿಕವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾನೆ ಮತ್ತು ಈ ಕಾರಣದಿಂದಾಗಿ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತದೆ. ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.” ದೈನಿಕ್ ಜಾಗರನ್ ಹಿಂದಿನ ವರದಿಯು ಇದೇ ವ್ಯಕ್ತಿಯನ್ನು ಹರ್ಪಾಲ್ ಸಾಹಿ ಎಂದು ಉಲ್ಲೇಖಿಸಿದೆ ಎಂದು ಗಮನಿಸಬಹುದು. ಪೋಲಿಸ್ ಮತ್ತು ಮಾಧ್ಯಮ ವರದಿಗಳೊಂದಿಗೆ ನಮ್ಮ ಸಂಭಾಷಣೆಯ ಆಧಾರದ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಅವರ ಫೋಟೋಗಳು ಚಲಾವಣೆಯಲ್ಲಿರುವ ವ್ಯಕ್ತಿಯ ಹೆಸರಿನಲ್ಲಿ ನಮಗೆ ಇನ್ನೂ ಸ್ಪಷ್ಟತೆ ಇರುವುದಿಲ್ಲವಾದ್ದರಿಂದ, ವ್ಯಕ್ತಿಯು ದುರಂತದ ರೈಲು ಚಾಲಕನಲ್ಲ ಎಂದು ಖಚಿತವಾಗಿ ಹೇಳಬಹುದು ಎಂದು ಆಲ್ಟ್ ನ್ಯೂಸ್ ಹೇಳಿದೆ.
ಆತ್ಮಹತ್ಯೆ ಬರಹ ಎಂದು ಹರಡಲಾಗಿರುವ ಈ ಪತ್ರವು ಅಮೃತಸರ ರೈಲು ದುರಂತದ ಚಾಲಕ ಅರವಿಂದ್ ಕುಮಾರ್ ರೈಲ್ವೆ ಆಡಳಿತ ಮಂಡಳಿಗೆ ದುರಂತದ ಬಳಿಕ ನೀಡಿದ ಸ್ಪಷ್ಟನೆಯಾಗಿದೆ.
Saw a crowd of ppl around track. Immediately applied emergency brakes while continuously blowing horn. Still some ppl came under it.Train was about to stop when people started pelting stones & so I started the train for passengers' safety:DMU train's driver.#AmritsarTrainAccident pic.twitter.com/2dihtcO9Ri
— ANI (@ANI) October 21, 2018
