ರಾಷ್ಟ್ರೀಯ ಸುದ್ದಿ

ಅಮೃತಸರ ರೈಲು ದುರಂತ ಒಂದು ‘ಟ್ರೈನ್ ಜಿಹಾದ್’; ಚಾಲಕನ ಹೆಸರು ಇಮ್ತಿಯಾಝ್ ಖಾನ್ ! ಮತ್ತೊಮ್ಮೆ ಬೆತ್ತಲಾದ ಮನುಷ್ಯ ವಿರೋಧಿ ಕೋಮುವಾದಿಗಳು!!

ವರದಿಗಾರ (ಅ.23): ಒಂದು ಘಟನೆಯನ್ನು ತಮ್ಮ ಮೂಗಿನ ನೇರದಲ್ಲಿ ಚಿತ್ರಿಸಿ ಅದರಿಂದ ತೃಪ್ತಿಪಟ್ಟುಕೊಳ್ಳುವ ವರ್ಗವೊಂದು ಅಮೃತಸರದಲ್ಲಿ ಇತ್ತೀಚೆಗೆ ನಡೆದ ರೈಲು ದುರಂತದಲ್ಲೂ ತನ್ನ ಅದೇ ಸುಳ್ಳಿನ ಚಾಳಿಯನ್ನು ಮುಂದುವರಿಸಿದ್ದು ಸಮಾಜದಲ್ಲಿ ಕೋಮು ಭಾವನೆ ಕೆರಳಿಸಿ ಅದರಿಂದ ರಾಜಕೀಯ ಲಾಭ ಪಡೆಯುವ ಹಿಡನ್ ಅಜೆಂಡಾ ಮತ್ತೊಮ್ಮೆ ಬಯಲಾಗಿದೆ. ಈ ದುರಂತವನ್ನು ಅವುಗಳು “ಟ್ರೈನ್ ಜಿಹಾದ್” ಎಂಬುವುದಾಗಿ ಬಿಂಬಿಸಿತ್ತು.

‘ಅಮೃತಸರದಲ್ಲಿ 100ಕ್ಕಿಂತಲೂ ಹೆಚ್ಚು ಜನರ ಮೇಲೆ ರೈಲು ನುಗ್ಗಿಸಿ ಹತ್ಯೆ ಮಾಡಿದ ರೈಲು ಚಾಲಕನ ಹೆಸರು ಇಮ್ತಿಯಾಜ್ ಅಲಿ ಎಂದಾಗಿತ್ತು!’  ಎಂಬ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹಾರಿದಾಡಿದೆ.

ಇತ್ತೀಚೆಗೆ ದಸರಾ ಹಬ್ಬದ ಸಂದರ್ಭ ಅಮೃತಸರದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಜೀವ ಕಳೆದುಕೊಂಡ ಅದಷ್ಟೂ ಕುಟುಂಬಗಳು ತಮ್ಮ ಆಪ್ತರನ್ನು ಮತ್ತು ಕುಟುಂಬದ ಆಧಾರಸ್ತಂಭವನ್ನು ಕಳೆದುಕೊಂಡು ಕಣ್ಣೀರಿನಿಂದ ಮುಳುಗಿ ಹೋಗಿದೆ. ಆದರೆ ಈ ಕುಟುಂಬದ ದುಃಖವನ್ನು ಮತ್ತು ಭೀಕರ ದುರಂತದ ನೋವನ್ನು ಪಡೆಯದ, ಮಾನವೀಯತೆ ಇಲ್ಲದೆ ಮನಸ್ಸುಗಳು ದುರಂತವನ್ನು ಒಂದು ಸಮುದಾಯದ ಮೇಲೆ ಆರೋಪವನ್ನು ಹೊರಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪಯತ್ನಿಸಿರುವುದನ್ನು ರಾಷ್ಟ್ರೀಯ ಸುದ್ದಿ ಮಾಧ್ಯಮ ‘ಆಲ್ಟ್ ನ್ಯೂಸ್’ ಬಯಲಿಗೆಳೆದಿದೆ.

‘ಆಲ್ಟ್ ನ್ಯೂಸ್’ ಒಂದು ಸಂಘಟಿತ ಕಾರ್ಯಾಚರಣೆಯ ಸಾಕ್ಷ್ಯವನ್ನು ಕಂಡುಕೊಂಡಿದ್ದು, ಅದೇ ಸಂದೇಶವು ಹಲವಾರು ಕೈಗಳಿಂದ ನಕಲಿಸಲ್ಪಟ್ಟಿದೆ ಎಂದು ವರದಿ ಮಾಡಿವೆ. ಅಮೃತಸರ ದುರಂತವು ಮುಸ್ಲಿಂ ರೈಲು ಚಾಲಕನಿಂದ ನಡೆಸಲ್ಪಟ್ಟ “ಟ್ರೈನ್ ಜಿಹಾದ್” ಎಂದು ಆರೋಪಿಸಿ ನೂರಾರು ಸಂದೇಶಗಳನ್ನು ಫೇಸ್ಬುಕ್ ಮತ್ತು ಟ್ವಿಟ್ಟರ್ಗಳ ನಡುವೆ 12.40 p.m ಪ್ರಾರಂಭಿಸಿತ್ತು. ಈ ಪೂರ್ವಯೋಜಿತ ಸಂದೇಶವು ಒಂದು ವಿಭಜನಾ ಕಾರ್ಯಸೂಚಿಯನ್ನು ಹೊಂದಿತ್ತು, ಭಾಷೆ ವಿಷಪೂರಿತವಾಗಿದೆ ಮತ್ತು ಟ್ವೀಟ್ಗಳನ್ನು ಪ್ರಚೋದಿಸಲು ಸ್ಪಷ್ಟ ಉದ್ದೇಶದೊಂದಿಗೆ ರಚಿಸಲಾಯಿತು ಎಂದು ‘ಆಲ್ಟ್ ನ್ಯೂಸ್’ ಹೇಳಿದೆ.

ದುಷ್ಕರ್ಮಿಗಳು ಹರಿದಾಡಿದ ವಿಷಪೂರಿತ ಸಂದೇಶಗಳು : 

ಮುಸ್ಲಿಂ ಚಾಲಕನನ್ನು ದೂಷಿಸಿ, ಅದು ಉದ್ದೇಶಪೂರ್ವಕ ಕಾರ್ಯವೆಂದು ಸೂಚಿಸುವ ಮೂಲಕ ಕೋಮು ಸಂದೇಶ ಕಳುಹಿಸುವ ಮೂಲಕ “ಟ್ರೈನ್ ಜಿಹಾದ್”  ಪ್ರಾರಂಭಿಸಲಾಯಿತು.

“ಯಾರಾದರೂ ರೈಲಿನ ಚಾಲಕನ ಧರ್ಮವನ್ನು ತಿಳಿಯಲು ಪ್ರಯತ್ನಿಸಿದಿರಾ? ಆತನ ಹೆಸರು ಇಮ್ತಿಯಾಜ್ ಅಲಿ. ರೈಲು ಏಕೆ ನಿಲ್ಲಿಸಲಿಲ್ಲ ಮತ್ತು ಏಕೆ ಅಂತಹ ವೇಗದಲ್ಲಿ ರೈಲು ನಡೆಯುತ್ತಿದೆ ಎಂದು ನೀವು ಈಗ ಅರ್ಥಮಾಡಿಕೊಂಡಿದ್ದೀರಿ. ”

https://twitter.com/khaitan48/status/1053634499974582274

ರಸ್ತೆಯಲ್ಲಿದ್ದ ಜನರನ್ನು ರೈಲ್ವೆ ಹಳಿಯಲ್ಲಿ ನಿಲ್ಲಿಸಿದ್ದು ಕಾಂಗ್ರೆಸ್. ನವಜೋತ್ ಕೌರ್ ಅವರ ಬೆಂಬಲಿಗರು ಇದನ್ನೇ ದಿಟ್ಟತನ ಎಂದಿದ್ದರು, ಯಾವುದೇ ಅನುಮತಿ ಇಲ್ಲದೆ ಈ ಜಾಗದಲ್ಲಿ ಇದೇ ಮೊದಲ ಬಾರಿ ಹಬ್ಬ ಮಾಡಿದ್ದು. ಆ ರೈಲು ಚಾಲಕ ಇಮ್ತಿಯಾಜ್ ಅಲಿ. ವಾಹ್, ಹತ್ಯೆ ಮಾಡಿದ್ದು ಕಾಂಗ್ರೆಸ್.

‘ಡಾ. ಆರ್. ತ್ರಿಪತಿ ಬಿಜೆಪಿ’ ಎಂಬ ಹೆಸರಿನವರೊಬ್ಬರು ಪ್ರತಿಕ್ರಿಯಿಸುತ್ತಾ, “250ಕ್ಕಿಂತಲೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ರೈಲಿನ ಚಾಲಕನ ಹೆಸರು ಇಮ್ತಿಯಾಜ್ ಖಾನ್. ಇನ್ನುಳಿದದ್ದು ನಿಮಗೆ ಅರ್ಥವಾಗುತ್ತದೆ. ಇದೊಂದು ಅಪಘಾತ ಅಲ್ಲ ಸಾಮೂಹಿಕ ಹತ್ಯೆ.
“ಇಮ್ತಿಯಾಜ್ ಅಲಿ ರೈಲು ಇಷ್ಟೊಂದು ವೇಗದಲ್ಲಿ ಚಲಿಸಿದ್ದು ಯಾಕೆ ಎಂಬುದು ತಿಳಿಯಿತಾ?”

https://twitter.com/RakeshT73827202/status/1053629806087045121

ಘಟನೆಗೆ ಸಂಬಂಧಿಸಿ ರಾಜಕೀಯ ಲಾಭವನ್ನು ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ನ್ನು ದೂಷಿಸುವ ಪ್ರಯತ್ನ ಮತ್ತು ಮುಸ್ಲಿಂ ಹೆಸರಿರುವ ಚಾಲಕನ ಡ್ರೈವರ್ ನ್ನು ಜೋಡಿಸಲಾಗಿತ್ತು. ಈ ಪೂರ್ವ ನಿಯೋಜಿತ ಹುನ್ನಾರದ ಹಿಂದೆ ಯಾವ ರಾಜಕೀಯ ಪಕ್ಷಗಳು ಮತ್ತು ಬೆಂಬಲಿಗರಿದ್ದಾರೆ ಎಂದು ಸುಳಿವನ್ನು ನೀಡುತ್ತದೆ ಎಂದು ಆಲ್ಟ್ ನ್ಯೂಸ್ ಹೇಳಿದೆ.

ಕೆಳಗೆ ಘಟನೆಗೆ ಸಂಬಂಧಿಸಿದ ಕೆಲವೊಂದು ಸಂದೇಶವನ್ನು ನೀಡಲಾಗಿದೆ:

“ನಮಾಜ್ ಮಾಡುವಾಗ ಯಾಕೆ ರೈಲು ನುಗ್ಗುವುದಿಲ್ಲ” ಎಂಬ ಟ್ವೀಟ್ ಕೂಡಾ ವೈರಲ್ ಆಗಿತ್ತು.

ನಿಜ ಸಂಗತಿ ಏನು
ರೈಲ್ವೆ ಆಡಳಿತ ಮಂಡಳಿಗೆ ರೈಲು ಚಾಲಕ ನೀಡಿದ ಲಿಖಿತ ಪ್ರತಿಕ್ರಿಯೆಯ ಪ್ರಕಾರ ಆತನ ಹೆಸರು ಅರವಿಂದ್ ಕುಮಾರ್ !!

ಚಾಲಕ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ಏನಿದೆ?
ನಾನು ಅರವಿಂದ್ ಕುಮಾರ್
ರೈಲ್ವೆ ಹಳಿಯಲ್ಲಿ ಜನರ ಗುಂಪು ನೋಡಿದೆ, ನಾನು ಎಮೆರ್ಜೆನ್ಸಿ ಬ್ರೇಕ್ ಹಾಕಿ ನಿರಂತರವಾಗಿ ಹಾರ್ನ್ ಹಾಕುತ್ತಾ ಬಂದೆ. ಆದರೂ ಕೆಲವರು ರೈಲಿನಡಿಗೆ ಸಿಲುಕಿದರು. ರೈಲು ಇನ್ನೇನು ನಿಲ್ಲುತ್ತದೆ ಎನ್ನುವಾಗ ಕೆಲವರು ರೈಲಿಗೆ ಕಲ್ಲು ತೂರಾಟ ಮಾಡಿದರು. ಹಾಗಾಗಿ ನಾನು ಪ್ರಯಾಣಿಕರ ಸುರಕ್ಷೆಗಾಗಿ ರೈಲು ಚಲಾಯಿಸಿದೆ  ಎಂದಿದ್ದಾರೆ.

ಒಟ್ಟಿನಲ್ಲಿ ದೇಶದಲ್ಲಿ ಎಲ್ಲಾದರೂ ದುರಂತ ಘಟನೆಯೊಂದನ್ನು ನಡೆಯಲು ಕಾಯುತ್ತಿರುವ ಮನುಷ್ಯ ವಿರೋಧಿ ವರ್ಗವೊಂದು, ಒಂದು ವೇಳೆ ಅಂತಹಾ ಘಟನೆಗಳು ನಡೆದಾಗ ಘಟನೆಯಲ್ಲಿ ಇಲ್ಲದ ಕೋಮು ಧ್ವೇಷದ ವಾತಾವರಣವನ್ನು ಬಲವಂತವಾಗಿ ಸುಳ್ಳುಗಳ ಮೂಲಕ ಸೃಷ್ಟಿಸಿ, ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಆ ಮೂಲಕ ತಮ್ಮ ರಾಜಕೀಯದ ಲಾಭ ಪಡೆಯುವ ಹುನ್ನಾರ ಇದರ ಹಿಂದೆ ಅಡಗಿದೆ ಎನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಅದು ಯಾರೆನ್ನುವುದು ಕೂಡಾ ದುಷ್ಕರ್ಮಿಗಳ ಫೇಸ್ಬುಕ್ ಪೋಸ್ಟ್ ಹಾಗೂ ಟ್ವೀಟ್’ಗಳಲ್ಲೇ ಸ್ಪಷ್ಟವಾಗುತ್ತದೆ.  ತಾವು ಈ ಹಿಂದೆ ಇಂತಹಾ ಕೃತ್ಯಗಳ ಮೂಲಕ ಪಡೆದಿರುವ ರಾಜಕೀಯ ಅಧಿಕಾರಗಳು ಅವುಗಳು ಇಂತಹಾ ದುಷ್ಕೃತ್ಯಗಳನ್ನು ಮತ್ತೂ ಮಾಡಲು ಪ್ರೇರೇಪಣೆಯಾಗಿದೆ ಎಂದರೂ ತಪ್ಪಾಗಲಾರದು. ಆದರೆ ಅಂತಹಾ ದೇಶವಿರೋಧಿ ಶಕ್ತಿಗಳು ಅಷ್ಟೇ ಶೀಘ್ರದಲ್ಲಿ ಬೆತ್ತಲಾಗಿರುವುದು ಕೂಡಾ ಒಂದು ಆಶಾದಾಯಕ ಬೆಳವಣಿಗೆಯಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group