ವರದಿಗಾರ(ಅ.16): ಇನ್ನೊಬ್ಬರ ಪ್ರಾರ್ಥನಾ ಮಂದಿರ ದ್ವಂಸಗೈದು ರಾಮಮಂದಿರ ನಿರ್ಮಿಸಬೇಕೆಂದು ಒಳ್ಳೆಯ ಹಿಂದೂ ಹೇಳಲಾರ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಚೆನ್ನೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅದು ರಾಮನ ಜನ್ಮ ಸ್ಥಳ ಎಂದು ಹೆಚ್ಚಿನ ಹಿಂದೂಗಳು ನಂಬಿದ್ದಾರೆ ಎನ್ನುವುದರ ಬಗ್ಗೆ ಓರ್ವ ಹಿಂದೂವಾಗಿ ನನಗೆ ಅರಿವಿದೆ. ಇದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದೂ ಹೆಚ್ಚಿನ ಒಳ್ಳೆಯ ಹಿಂದೂಗಳು ಬಯಸುತ್ತಾರೆ. ಆದರೆ ಮತ್ತೊಬ್ಬರ ಧಾರ್ಮಿಕ ಸ್ಥಳವನ್ನು ದ್ವಂಸಗೈದು ಅದೇ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಯಾವೊಬ್ಬ ಒಳ್ಳೆಯ ಹಿಂದೂ ಬಯಸುವುದಿಲ್ಲ ಎಂದು ನಾನು ಭಾವಿಸಿದ್ದೇನೆ” ಎಂದು ಶಶಿ ತರೂರ್ ಹೇಳಿದ್ದಾರೆ.
ಶಶಿ ತರೂರ್ ಹೇಳಿಕೆಯನ್ನು ಬಿಜೆಪಿಯು ವಿವಾದವಾಗಿ ಮಾಡಿದೆ.
