ರಾಜ್ಯ ಸುದ್ದಿ

ಮನ್ ಕಿ ಬಾತ್ ಎಂದು ಹೇಳಿ ಜನರನ್ನು ಪ್ರಧಾನಿ ಮೋದಿ ಮಂಗ ಮಾಡಲು ಹೊರಟಿದ್ದಾರೆ: ಅಲ್ಫಾನ್ಸೋ ಫ್ರಾಂಕೋ

ಅಸ್ಸಾಂನ ಜನತೆಯನ್ನು ನಮ್ಮದೇ ಪೌರರಾಗಿ ನೋಡಿ, ಎನ್‍ಆರ್‍ಸಿಯನ್ನು ಮರು ಪರಿಶೀಲನೆ ನಡೆಸಿ: ಎಸ್‍ಡಿಪಿಐ

ಎಸ್‍ಡಿಪಿಐ ಯಿಂದ ಎನ್.ಆರ್.ಸಿ. ವಿರುದ್ಧ ರಾಜ ಭವನ ಮಾರ್ಚ್

ವರದಿಗಾರ (ಅ.15): ಮನ್ ಕಿ ಬಾತ್ ಎಂದು ಹೇಳಿಕೊಳ್ಳುತ್ತ ದೇಶದ ಜನರನ್ನು ಪ್ರಧಾನಿ ನರೇಂದ್ರ ಮೋದಿಯವರು ಮಂಗ ಮಾಡಲು ಹೊರಟಿದ್ದಾರೆ ಎಂದು ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ ಆರೋಪಿಸಿದ್ದಾರೆ.

ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಸಮಿತಿಯು ಎನ್.ಆರ್.ಸಿ (ರಾಷ್ಟ್ರೀಯ ಪೌರತ್ವ ದಾಖಲೆ) ಅಸ್ಸಾಂ ವಿರುದ್ಧ ಹಮ್ಮಿಕೊಂಡಿದ್ದ ‘ರಾಜ ಭವನ ಮಾರ್ಚ್’ ಇದರ ಪ್ರತಿಭಟನೆಯನ್ನುದ್ದೇಶಿ ಮಾತನಾಡುತ್ತಿದ್ದರು.
‘ದೇಶವನ್ನು ದುಸ್ಥಿತಿಗೆ ತಳ್ಳುತ್ತಿರುವ ಪ್ರಧಾನಿಯವರು ಭಾರತದಲ್ಲಿರುವ ನಿವಾಸಿಗಳ ಪೌರತ್ವವನ್ನು ಕಸಿದುಕೊಳ್ಳುತ್ತಿದ್ದಾರೆ. ಎನ್‍ಆರ್‍ಸಿಯನ್ನು ತಕ್ಷಣವಾಗಿ ರದ್ದುಗೊಳಿಸಬೇಕೆಂದು ಅವರು ಬೇಡಿಕೆಯನ್ನಿಟ್ಟಿದ್ದಾರೆ.

ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಮಾತನಾಡಿ, ಅಸ್ಸಾಂನ ಎನ್‍ಆರ್‍ಸಿ ಯಲ್ಲಿ ಸುಮಾರು 40 ಲಕ್ಷ ಜನರನ್ನು ದಾಖಲೆಯಿಂದ ಹೊರಗಿಟ್ಟಿದ್ದು ಆ ರಾಜ್ಯದಲ್ಲಿ ಬಂಗಾಳಿ ಭಾಷೆ ಮಾತನಾಡುವ ಬಡ ಹಾಗೂ ಹಿಂದುಳಿದ ಜನತೆಯ ಪರಿಸ್ಥಿತಿಯು ಅತ್ಯಂತ ದಯನೀಯವಾಗಿರುತ್ತದೆ. ಆಶ್ಚರ್ಯವೇನೆಂದರೆ ಆನ್‍ಆರ್‍ಸಿ ಯಲ್ಲಿ ಸಾವಿರಾರು ಸಂಖ್ಯೆಯ ಜನರ ಹೆಸರುಗಳು ಬಿಟ್ಟು ಹೋಗಿದ್ದು ಅವರ ಹತ್ತಿರದ ಸಂಬಂಧಿಗಳ ಮತ್ತು ಕುಟುಂಬ ಸದಸ್ಯರ ಹೆಸರುಗಳು ದಾಖಲಾಗಿವೆ. ಎನ್‍ಆರ್‍ಸಿ ಯಿಂದ ಹೊರದಬ್ಬಲ್ಪಟ್ಟ ಜನರು ಮುಂದೆ ಸಮಾಜ ಹಾಗೂ ಆಡಳಿತದಿಂದ ಭಾರೀ ಅಪನಂಬಿಕೆ, ಸಂಘರ್ಷ ಹಾಗೂ ಶೋಷಣೆಗೆ ಒಳಗಾಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತವೆ. ಇದು ಅಸ್ಸಾಂ ಮತ್ತು ನೆರೆ ಹೊರೆಯ ರಾಜ್ಯಗಳಲ್ಲಿ ಆಡಳಿತ ನಿರ್ಮಿತ ನಾಗರಿಕ ಸಮಸ್ಯೆಗಳಿಗೆ ದೂಡುವ ಸಾಧ್ಯತೆಯಿದೆ. ಅಸ್ಸಾಂ ರಾಜ್ಯ ಸರಕಾರವು ವಿಭಜಕ ಶಕ್ತಿಗಳ ಅನಗತ್ಯವಾಗಿ ನಿರ್ಮಿಸುವ ಸುಳ್ಳು, ಗದ್ದಲ ಮತ್ತು ಘೋಷಣೆಗಳಿಗೆ ಈಡಾಗದೆ ಬಂಗಾಳಿ ಭಾಷಿಗ ಜನರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಹೇಳಿದ್ದಾರೆ.

ಅಸ್ಸಾಂ ರಾಜ್ಯದ ಎನ್‍ಆರ್‍ಸಿ ಯನ್ನು ರದ್ದುಗೊಳಿಸುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಸರಕಾರಗಳು ಎನ್‍ಆರ್‍ಸಿ ಯ ಬಗ್ಗೆ ಹಠಮಾರಿ ಧೋರಣೆಯನ್ನು ಕೈಗೊಂಡಲ್ಲಿ ಅಸ್ಸಾಂ ರಾಜ್ಯದಲ್ಲಿರುವ ಪ್ರತಿಯೊಬ್ಬ ಜನತೆಯನ್ನು ದಾಖಲೆಯಲ್ಲಿ ಸೇರಿಸಿ ಭಾರತ ದೇಶದ ನಾಗರಿಕರನ್ನಾಗಿ ಪರಿಗಣಿಸಬೇಕೆಂದು ಇಲ್ಯಾಸ್ ಮಹಮ್ಮದ್ ಆಗ್ರಹಿಸಿದ್ದಾರೆ.

‘ರಾಜ ಭವನ ಮಾರ್ಚ್’ ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಿಯಾಝ್ ಫರಂಗಿಪೇಟೆ, ಅಬ್ದುಲ್ ಹನ್ನಾನ್, ಕಾರ್ಯದರ್ಶಿ ಅಶ್ರಫ್ ಮಾಚಾರ್, ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ಅಮೀನ್ ಮೊಹ್ಸಿನ್, ಫಯಾಝ್ ಅಹ್ಮದ್, ಸಯ್ಯದ್ ಸಮಿ ಹಝ್ರತ್, ಬಿಬಿಎಂಪಿ ಬೆಂಗಳೂರು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಶಾ ಮತ್ತು ಬೆಂಗಳೂರು ಜಿಲ್ಲಾ ನಾಯಕರು ಉಪಸ್ಥಿತರಿದ್ದರು.
ಮನವಿಯನ್ನು ರಾಜ್ಯಪಾಲರ ಮುಖಾಂತರ ರಾಷ್ಟ್ರಪತಿಗೆ ಸಲ್ಲಿಸಲಾಯಿತು.

Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group