ವರದಿಗಾರ-ಮುಂಬೈ: ನಾಳೆಯಿಂದ (ಶುಕ್ರವಾರ) 200ರೂ. ಮುಖಬೆಲೆಯ ಹೊಸ ನೋಟು ಚಲಾವಣೆಯಾಗಲಿದ್ದು, ನಿಮ್ಮ ಕೈ ಸೇರಲಿದೆ.
(RBI) ಭಾರತೀಯ ರಿಸರ್ವ್ ಬ್ಯಾಂಕ್ನ ಆಯ್ದ ಕಚೇರಿಗಳು ಹಾಗೂ ಕೆಲ ಬ್ಯಾಂಕ್ಗಳಲ್ಲಿ ಶುಕ್ರವಾರದಿಂದ ಹೊಸ ನೋಟುಗಳು ಚಲಾವಣೆಗೆ ಬರಲಿದೆ ಎಂದು RBI ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
200 ರೂಪಾಯಿಯ ಹೊಸ ನೋಟು ಗಾಢ ಹಳದಿ ಬಣ್ಣವನ್ನು ಹೊಂದಿದ್ದು, ಅಂಧರು ನೋಟನ್ನು ಸುಲಭದಲ್ಲಿ ಗುರುಸಿಕೊಳ್ಳಲು ಉಪಯೋಗವಾಗುವ ರೀತಿಯಲ್ಲಿ ಮುದ್ರಿಸಲಾಗಿದೆ.
