ರಾಷ್ಟ್ರೀಯ ಸುದ್ದಿ

‘ಮತ್ತೊಬ್ಬನನ್ನು ಕೊಂದವರನ್ನು ಹೇಗೆ ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳಲು ಸಾಧ್ಯ?’: ವೆಂಕಯ್ಯ ನಾಯ್ಡು ಪ್ರಶ್ನೆ

‘ಗುಂಪುಹತ್ಯೆಯಲ್ಲಿ ಪಾಲ್ಗೊಂಡವರು ರಾಷ್ಟ್ರೀಯವಾದಿಗಳಲ್ಲ’

ವರದಿಗಾರ (ಸೆ.09): “ಸಾಮಾಜಿಕ ಪ್ರವೃತ್ತಿ ಬದಲಾಗಬೇಕಾಗಿದೆ. ಮತ್ತೊಬ್ಬನನ್ನು ಕೊಂದ ನೀವು ಹೇಗೆ ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳಲು ಸಾಧ್ಯ? ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶ್ನಿಸಿದ್ದಾರೆ.

ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ಗುಂಪುಹತ್ಯೆಯಲ್ಲಿ ಪಾಲ್ಗೊಂಡವರು ರಾಷ್ಟ್ರೀಯವಾದಿಗಳೆಂದು ಹೇಳಿಕೊಳ್ಳುವಂತಿಲ್ಲ. ಇಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ನಡವಳಿಕೆಯನ್ನು ಬದಲಾಯಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇಂತಹ ಘಟನೆಗಳನ್ನು ರಾಜಕೀಯಗೊಳಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಇಂತಹ ಪ್ರಕರಣಗಳನ್ನು ರಾಜಕೀಯ ಪಕ್ಷಗಳ ಜತೆ ಸಂಬಂಧ ಕಲ್ಪಿಸುವಂತಿಲ್ಲ. ಸಾಮಾಜಿಕ ಬದಲಾವಣೆ ಇಂದಿನ ಅಗತ್ಯ. ಹತ್ಯೆ ಪ್ರಕರಣಗಳು ಈ ಪಕ್ಷ ಅಥವಾ ಆ ಪಕ್ಷದ ಕಾರಣದಿಂದ ನಡೆಯುವಂಥವುಗಳಲ್ಲ. ಈ ಪಕ್ಷಗಳಿಗೆ ನೀವು ಅದನ್ನು ಸಂಬಂಧ ಕಲ್ಪಿಸಿದ ತಕ್ಷಣ ಮೂಲ ಉದ್ದೇಶವೇ ಕಳೆದುಹೋಗುತ್ತದೆ ಎಂದು ಹೇಳಿದ್ದಾರೆ.

ದ್ವೇಷ ಮತ್ತು ಹತ್ಯೆ ಪ್ರಕರಣಗಳ ಬಗ್ಗೆ ಅವರ ಅಭಿಪ್ರಾಯ ಕೇಳಿದಾಗ, ಇದು ಹೊಸ ಪ್ರವೃತ್ತಿ ಅಲ್ಲ. ಹಿಂದೆ ಕೂಡಾ ಇಂತಹ ಘಟನೆಗಳು ನಡೆದಿವೆ ಎಂದು ಸ್ಪಷ್ಟಪಡಿಸಿದರು. “ಸಾಮಾಜಿಕ ಪ್ರವೃತ್ತಿ ಬದಲಾಗಬೇಕಾಗಿದೆ. ಮತ್ತೊಬ್ಬನನ್ನು ಕೊಂದ ನೀವು ಹೇಗೆ ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳಲು ಸಾಧ್ಯ?. ಧರ್ಮ, ಜಾತಿ ಅಥವಾ ಬಣ್ಣ, ಲಿಂಗದ ಆಧಾರದಲ್ಲಿ ತಾರತಮ್ಯ ನಡೆಯುತ್ತಿದೆ. ರಾಷ್ಟ್ರೀಯವಾದ, ಭಾರತ್ ಮಾತಾ ಕಿ ಜೈ ಎನ್ನುವುದಕ್ಕೆ ವಿಸ್ತೃತ ಅರ್ಥವಿದೆ” ಎಂದು ಹೇಳಿದ್ದಾರೆ.

ಇಂತಹ ಕೆಲ ಘಟನೆಗಳನ್ನು ಕಾನೂನಿನಿಂದಷ್ಟೇ ನಿರ್ವಹಿಸಲು ಸಾಧ್ಯವಿಲ್ಲ. ಸಾಮಾಜಿಕ ಬದಲಾವಣೆಯಿಂದಷ್ಟೇ ಇದನ್ನು ತಡೆಯಲು ಸಾಧ್ಯವೆಂದೂ ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group