ಅನಿವಾಸಿ ಕನ್ನಡಿಗರ ವಿಶೇಷ

ರಿಯಾದ್ -ಶಿವಮೊಗ್ಗ ಮೂಲದ ವ್ಯಕ್ತಿ ನಿಧನ: ಕೆಸಿಎಫ್ ನೇತೃತ್ವದಲ್ಲಿ ಅಂತ್ಯಕ್ರಿಯೆ

ವರದಿಗಾರ-ಸೌದಿ ಅರೇಬಿಯಾ: ಕಳೆದ ಎರಡು ವರ್ಷಗಳಿಂದ ಸೌದಿ ಅರೇಬಿಯಾ ದ ರಿಯಾದ್ ದರಯ್ಯಾ ಪ್ರಾಂತ್ಯದ ಸೌದಿ ನಿವಾಸಿಯೊಬ್ಬರ ಮನೆ ಚಾಲಕನಾಗಿ ಉದ್ಯೋಗದಲ್ಲಿದ್ದ ಶಿವಮೊಗ್ಗದ ಖಾಝಿ ಮೊಹಲ್ಲಾದ ಶೇಕ್  ಮುಹಮ್ಮದ್  ಸಲೀಂ(60) ಹೃದಯಾಘಾತದಿಂದ ನಿಧನರಾಗಿದ್ದು, ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ನ ನೇತೃತ್ವದಲ್ಲಿ ಇವರ ಅಂತ್ಯಕ್ರಿಯೆ (ದಫನ) ಸೋಮವಾರ ನೆರವೇರಿಸಿತು.
 ಆಗಸ್ಟ್‌ 18ರಂದು ಎದೆ ನೋವು ಕಾಣಿಸಿಕೊಂಡಿದ್ದು, ವಾಸ ಸ್ಥಳದಲ್ಲೇ ಮೃತರಾಗಿದ್ದಾರೆ.  ಮೃತ ವ್ಯಕ್ತಿಯ  ಬಗ್ಗೆ ಮಾಹಿತಿ ಪಡೆದುಕೊಂಡ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಘಟಕದ ಸಾಂತ್ವನ ವಿಭಾಗವು ಮೃತರ ಮರಣೋತ್ತರ ಕ್ರಿಯೆಗೆ ಅಗತ್ಯವಾದ ದಾಖಲೆ ಪತ್ರಗಳನ್ನು, ವಿವಿಧ ಇಲಾಖೆಗಳಿಂದ ಸಂಗ್ರಹಿಸಿ ಹಾಗೂ ಊರಿನ ಕುಟುಂಬಸ್ಥರಿಂದ ಅನುಮತಿ ಪತ್ರ ಪಡೆದು ರಿಯಾದ್ ನಲ್ಲಿ ಅಂತ್ಯ ಕ್ರಿಯೆ ನಡೆಸುವಲ್ಲಿ ಯಶಸ್ವಿಯಾಯಿತು.
 ಸೌದಿ ಆರೋಗ್ಯ ಇಲಾಖೆ, ವಲಸಿಗರ ಪ್ರಾಧಿಕಾರ, ಸ್ಥಳೀಯ ಪೋಲೀಸ್ ಠಾಣೆ, ಭಾರತೀಯ ರಾಯಭಾರಿ ಕಛೇರಿ ,ಊರಿನ ಕುಟುಂಬಿಕರು ಸೇರಿದಂತೆ ಅಂತ್ಯ ಸಂಸ್ಕಾರ ನಡೆಸಲು ಬೇಕಾದ ಅಗತ್ಯ   ದಾಖಲೆ ಪತ್ರಗಳನ್ನು ಎರಡೇ ದಿನಗಳಲ್ಲಿ  ಕೆಸಿಎಫ್ ರಿಯಾದ್ ಝೋನಲ್  ಮುಖಂಡರಾದ ಹಂಝ ಮೈಂದಾಳ , ಹಸನ್ ಸಾಗರ್ , ಖಲಂದರ್ ಪಾಣೆ ಮಂಗಳೂರು ಹಾಗೂ ಮಜೀದ್ ನೇತೃತ್ವದಲ್ಲಿ ಸಂಗ್ರಹಿಸಲಾಯಿತು.
ಪತ್ನಿ ಹಾಗೂ ಇಬ್ಬರು ಸಣ್ಣ ಹೆಣ್ಮಕ್ಕಳನ್ನು ಅಗಲಿದ ಮೃತರ ಕುಟುಂಬವು ಇದೀಗ ಸಂಪೂರ್ಣ ಅನಾಥವಾಗಿದ್ದು ದುಃಖತಪ್ತ  ಕುಟುಂಬಕ್ಕೆ ನೆರವಾಗುವಂತೆ  ಕೆಸಿಎಫ್ ಕಾರ್ಯಕರ್ತರು ಮಾಡಿಕೊಂಡ ಮನವಿಗೆ ಮೃತರ  ವೀಸಾ ಪ್ರಯೋಜಕ ಸ್ಪಂದಿಸಿದ್ದು, ಸುಮಾರು  ಎಂಟು ಸಾವಿರ ಸೌದಿ ರಿಯಾಲ್ ( 1,35000 ರೂಪಾಯಿ)ನ್ನು  ಅವರ ಪತ್ನಿಯ ಖಾತೆಗೆ ಕಳುಹಿಸಿ ಕೊಟ್ಟಿದ್ದಾರೆ.
ರಿಯಾದ್ ಸಮೀಪದ exit 15 ರ ಮಸ್ಜಿದ್ ಅಲ್ ರಾಜಿ ಹ್ ನಲ್ಲಿ ನಡೆದ ಜನಾಝ ನಮಾಝ್ ಹಾಗೂ ನಸೀಂ ಸಾರ್ವಜನಿಕ ದಫನ ಭೂಮಿಯಲ್ಲಿ ನಡೆದ ದಫನ ಕಾರ್ಯದಲ್ಲಿ ಕೆಸಿಎಫ್ ಕಾರ್ಯಕರ್ತರಾದ ನವಾಝ್ ಸಖಾಫಿ, ಹಂಝ ಮೈಂದಾಳ, ಉಸ್ಮಾನ್ ಪರಪ್ಪು ಸೇರಿದಂತೆ ಮೃತರ ಬಂಧುಗಳು, ಸ್ನೇಹಿತರು ಹಾಗೂ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.  ದಫನದ ತರುವಾಯ ನಡೆದ ಪ್ರಾರ್ಥನೆಗೆ ಕೆಸಿಎಫ್ ರಿಯಾದ್ ಝೋನಲ್ ಶಿಕ್ಷಣ ವಿಭಾಗದ ಅಧ್ಯಕ್ಷ  ನವಾಝ್ ಸಖಾಫಿ ನೇತೃತ್ವ ನೀಡಿದರು.
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group