ರಾಷ್ಟ್ರೀಯ ಸುದ್ದಿ

ಸಂಗೀತ ಉತ್ಸವದಲ್ಲಿ ಸ್ಫೋಟ ನಡೆಸಲು ಸನಾತನ ಸಂಸ್ಥೆ ಸಂಚು: ಎಟಿಎಸ್

ಹಿಂದೂ ಸಂಸ್ಕೃತಿಗೆ ವಿರೋಧವಾಗಿದೆ ಎಂದು ಸನಾತನ ಸಂಸ್ಥೆ ಕಾರ್ಯಕರ್ತರು ಸ್ಫೋಟ ನಡೆಸಲು ಸಂಚು ರೂಪಿಸಿದ್ದರು

ಶಸ್ತ್ರಾಸ್ತ ಪ್ರಕರಣದಲ್ಲಿ ಬಂಧಿತರಾಗಿರುವ ಸನಾತನ ಸಂಸ್ಥೆ ಕಾರ್ಯಕರ್ತರಿಂದ ಸ್ಫೋಟಕ ಅಂಶ ಬಯಲಿಗೆ

ವರದಿಗಾರ (ಆ.29): ಇತ್ತೀಚೆಗೆ ಬಂಧಿತರಾಗಿರುವ ಸನಾತನ ಸಂಸ್ಥೆಯ ಐದು ಮಂದಿ ಸದಸ್ಯರು ಪುಣೆಯ ಉಪ ನಗರದಲ್ಲಿ ನಡೆದ ವಾರ್ಷಿಕ ಇಲೆಕ್ಟ್ರೋನಿಕ್ ಸಂಗೀತ ನೃತ್ಯ ಉತ್ಸವದಲ್ಲಿ ಬಾಂಬ್ ಸ್ಫೋಟಿಸುವ ಸಂಚು ನಡೆಸಿದ್ದರು ಎಂದು ಮಹಾರಾಷ್ಟ್ರದ ಎಟಿಎಸ್ ನ್ಯಾಯಾಲಯದಲ್ಲಿ ಹೇಳಿದೆ ಎಂದು ಮೂಲಗಳು ವರದಿ ಮಾಡಿವೆ.

ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ನಲ್ಲಸೋಪಾರ, ಪುಣೆ ಹಾಗೂ ಜಲ್ನಾದಿಂದ ಈ ತಿಂಗಳ ಆರಂಭದಲ್ಲಿ ಎಲ್ಲ ಐವರನ್ನು ಬಂಧಿಸಲಾಗಿತ್ತು ಹಾಗೂ ಎಟಿಎಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ ಪ್ರಕರಣಗಳ ತನಿಖೆ ನಡೆಸಲು ಸ್ಥಾಪಿಸಲಾದ ವಿಶೇಷ ನ್ಯಾಯಾಲಯದ ಮುಂದೆ ಎಟಿಎಸ್ ಪರ ಹಾಜರಾದ ವಕೀಲರು ಈ ಪ್ರತಿಪಾದನೆ ಮಾಡಿದರು.

ಐವರು ಆರೋಪಿಗಳಲ್ಲಿ ವೈಭವ್ ರಾವತ್, ಶರದ್ ಕಲಾಸ್ಕರ್, ಸುಧನ್ವ ಗೋಂಧಲೇಕರ್ ಹಾಗೂ ಶ್ರೀಕಾಂತ್ ಪಂಗಾರ್ಕರ್ ಅವರನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಹಾಗೂ ಕಸ್ಟಡಿ ವಿಸ್ತರಣೆಗೆ ಕೋರಲಾಯಿತು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಮೀರ್ ಅಡ್ಕರ್ ನಾಲ್ವರು ಆರೋಪಿಗಳ ಕಸ್ಟಡಿಯನ್ನು ಏಳು ದಿನಗಳ ಕಾಲ ವಿಸ್ತರಿಸಿದರು. ಐದನೇ ಆರೋಪಿ ಅವಿನಾಶ್ ಪವಾರ್ ಅವರನ್ನು ಆಗಸ್ಟ್ 31ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಹಿಂದೂ ಸಂಸ್ಕೃತಿಗೆ ವಿರೋಧವಾದುದು ಎನ್ನುವ ಕಾರಣಕ್ಕೆ 2017 ಡಿಸೆಂಬರ್‌ನಲ್ಲಿ ಪುಣೆಯಲ್ಲಿ ಆಯೋಜಿಸಲಾಗಿದ್ದ ಸಂಗೀತ ನೃತ್ಯ ಉತ್ಸವದಲ್ಲಿ ಸ್ಫೋಟ ನಡೆಸಲು ಇಬ್ಬರು ಆರೋಪಿಗಳಾದ ಗೊಂಧಲೇಕರ್ ಹಾಗೂ ರಾವತ್ ಯೋಜನೆ ರೂಪಿಸಿದ್ದರು ಎಂದು ಎಟಿಎಸ್ ಅಧಿಕಾರಿಗಳು ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದಾರೆ. ಹಿಂದಿ ಚಲನಚಿತ್ರ ‘ಪದ್ಮಾವತ್’ ಪ್ರದರ್ಶನದ ಸಂದರ್ಭ ಥಾಣೆಯ ಕಲ್ಯಾಣ್‌ನ ಹಾಗೂ ಕರ್ನಾಟಕದ ಬೆಳಗಾವಿಯ ಸಿನೆಮಾ ಮಂದಿರದ ಹೊರಗೆ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ ಕೂಡ ಈ ಐವರು ಭಾಗಿಯಾಗಿದ್ದಾರೆ ಎಂದು ಎಟಿಎಸ್ ನ್ಯಾಯಾಲಯದಲ್ಲಿ ಪ್ರತಿಪಾದಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group