ರಾಷ್ಟ್ರೀಯ ಸುದ್ದಿ

ವಾಜಪೇಯಿ ಚಿತಾಭಸ್ಮ ವಿಸರ್ಜನೆಯಲ್ಲಿ ಬಿಜೆಪಿಯಿಂದ ಕೀಳುಮಟ್ಟದ ರಾಜಕೀಯ: ಶಿವಸೇನಾ

ವರದಿಗಾರ (ಆ.27): ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ವಿಸರ್ಜನೆಗೂ ಬಿಜೆಪಿ ರಾಜಕೀಯ ಬಣ್ಣ ನೀಡುತ್ತಿದ್ದು, ಸಾವಿನ ಬಳಿಕ ನಾಯಕನಿಗೆ ವೇದಿಕೆ ಮೇಲಷ್ಟೇ ಅಭಿಮಾನ ತೋರುತ್ತಿದೆ ಎಂದು ಮಿತ್ರಪಕ್ಷ ಶಿವಸೇನಾ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ಬಿಜೆಪಿಯ ಈ ನಡೆ ಕುರಿತಂತೆ ಶಿವಸೇನಾ ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂ‍ಪಾದಕೀಯದಲ್ಲಿ ಉಲ್ಲೇಖಿಸಲಾಗಿರುವ, ‘ಬದುಕಿದ್ದ ವೇಳೆ ಮಹಾನ್‌ ನಾಯಕನಿಗೆ ಗೌರವ ನೀಡುವ ಬದಲಾಗಿ, ಅವರು ಸತ್ತ ಬಳಿಕ ಅವರ ಚಿತಾಭಸ್ಮಕ್ಕೆ ಪ್ರಾಮುಖ್ಯತೆ ನೀಡುತ್ತಿದೆ. ವ್ಯಕ್ತಿಯ ಚಿಂತನೆಗಳನ್ನು ಅಳವಡಿಸಿಕೊಂಡು ಮುನ್ನಡೆಯುವುದೇ ಅವರಿಗೆ ಕೊಡಬಹುದಾದ ನಿಜವಾದ ಶ್ರದ್ಧಾಂಜಲಿ’.  ‘ಚಿತಾಭಸ್ಮ ವಿಸರ್ಜನೆ ವೇಳೆ ಬಿಜೆಪಿ ನಾಯಕರಲ್ಲಿ ಇರಬೇಕಾದ ಗಂಭೀರತೆ ಕಾಣುತ್ತಿರಲಿಲ್ಲ, ಬಿಜೆಪಿಯ ಕೆಲವು ಸಚಿವರು ಮತ್ತು ನಾಯಕರು ಚಿತಾಭಸ್ಮದ ಕುಂಡವನ್ನು ವಿಶ್ವಕಪ್‌ ಗೆದ್ದಂತೆ ಬಿಂಬಿಸಿದರು. ಕೆಲವರು ಸೆಲ್ಫೀ ತೆಗೆದುಕೊಂಡರು. ಈ ನಡವಳಿಕೆ ಟಿವಿ ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ’ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ದಲ್ಲಿ ಹೇಳಿಕೊಂಡಿದೆ.

ಮಾಜಿ ಪ್ರಧಾನಿ ವಾಜಪೇಯಿ ಅವರು ಆಗಸ್ಟ್ 16ರಂದು ನಿಧನರಾಗಿದ್ದರು. ಇದಾದ ಬಳಿಕ ಅವರ ಚಿತಾಭಸ್ಮವನ್ನು ಪಕ್ಷದ ನಾಯಕರು ದೇಶದ ವಿವಿಧ ನದಿಗಳಲ್ಲಿ ವಿಸರ್ಜಿಸಿದ್ದರು.

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group