ವರದಿಗಾರ-ಬೆಂಗಳೂರು: ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ್ನು ದುರ್ವ್ಯಾಖ್ಯಾನ ಮಾಡುವುದು ಮತ್ತು ಅದನ್ನು ಸಮಾನ ನಾಗರೀಕ ಸಂಹಿತೆಯೊಂದಿಗೆ ಸಂಪರ್ಕಿಸುವುದು ಅಸಂಭದ್ದವಾಗಿದ್ದೂ, ಅದು ಮುಸ್ಲಿಮ್ ಸಮುದಾಯದೊಳಗೆ ಅನಾವಶ್ಯಕ ಸಂಶಯಗಳಿಗೆ ದಾರಿಮಾಡಿ ಕೊಡುತ್ತದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ರಾಷ್ಟ್ರೀಯ ಅಧ್ಯಕ್ಷ ಎ. ಸಯೀದ್ ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ಶರೀಅತ್ ಕಾನೂನಿನ ಜಾರಿಯಲ್ಲಿ ಸುಪ್ರೀಂ ಕೋರ್ಟ್ ಗಮನಿಸಿರುವ ತೊಡಕುಗಳನ್ನು ನಿವಾರಿಸುವ ನಿರ್ಧಾರವೇ ಈ ತೀರ್ಪಾಗಿದೆ. ಮುಸ್ಲಿಂ ಮಹಿಳೆಯರ ರಕ್ಷಣೆಯಾಗಿರುವ ಮುಂದಡಿಯಾಗಿ ಈ ತೀರ್ಪನ್ನು ಎತ್ತಿ ಹಿಡಿಯಲಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರವರು ತಿಳಿಸಿದ್ದು, ಅವರಿಗೆ ಮುಸ್ಲಿಂ ಮಹಿಳೆಯರ ಸಂರಕ್ಷಣಾ ಮನೋಭಾವವು ಎಂದಿನಿಂದ ಅವರಲ್ಲಿ ಉಧ್ಭವಿಸಿದೆ ಎಂದು ಪ್ರಮಾಣಿಕವಾಗಿ ದೇಶದ ಜನತೆಗೆ ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಸಯೀದ್ ಹೇಳಿದ್ದಾರೆ.
ಮುಸ್ಲಿಮ್ ಸಮುದಾಯವನ್ನು ಮೃಗೀಯ ರೀತಿಯಲ್ಲಿ ಕೊಲ್ಲುತ್ತಿರುವ ಮತ್ತು ಭೇಟೆಯಾಡುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ತಮ್ಮ ಸ್ವಂತ ಮಕ್ಕಳು ಮತ್ತು ಕುಟುಂಬವನ್ನು ಸಂರಕ್ಷಿಸುವುದಕ್ಕಾಗಿ ತಮಗೆ ಆಯುಧಗಳನ್ನು ಒದಗಿಸಬೇಕೆಂದು ಮುಸ್ಲಿಮ್ ಮಹಿಳೆಯರು ಆಗ್ರಹಿಸುತ್ತಿರುವಂತಹ ಸನ್ನಿವೇಶವನ್ನು ಆರ್ಎಸ್ಎಸ್ ಮತ್ತು ಬಿಜೆಪಿ ಭಾರತದಲ್ಲಿ ಸೃಷ್ಟಿಸಿದೆ.
ಸುಪ್ರಿಂ ಕೋರ್ಟಿನ ತೀರ್ಪನ್ನು ಪ್ರಸ್ತುತ ಸ್ವಾಗತಿಸುತ್ತಿರುವವರು ವಿಷಯದ ಗಾಂಭೀರ್ಯತೆಯನ್ನು ಪರಿಗಣಿಸಿ ಈ ತರಹದ ಸಮಸ್ಯೆಗಳನ್ನು ಶತ್ರುಗಳ ಕೈಗಳಿಗೆ ನೀಡಿ ತಮ್ಮ ಮೇಲೆಯೇ ಪ್ರಹರಿಸುವಂತಹ ಸನ್ನಿವೇಶಗಳನ್ನುಂಟು ಮಾಡದೆ ಸ್ವತಃ ಪರಿಹರಿಸುವಲ್ಲಿ ಸನ್ನದ್ಧರಾಗಲಿದ್ದಾರೆ ಎಂಬ ನಿರೀಕ್ಷೆ ಹೊಂದಿದ್ದೇನೆ ಎಂದು ಎ.ಸಯೀದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
