ರಾಜ್ಯ ಸುದ್ದಿ

ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವಾಗುತ್ತಿದ್ದ ‘ಭೀಮಾಪುತ್ರಿ ಬ್ರಿಗೇಡ್’ ಸದಸ್ಯೆಯರ ಮೇಲೆ ಸಂಘಪರಿವಾರದ ಗೂಂಡಾಗಳಿಂದ ಹಲ್ಲೆ !!

ವರದಿಗಾರ (ಆ 20) :  ಕೊಡಗಿನ ಪ್ರವಾಹ ಪೀಡಿತ ಜನರಿಗೆ ನೆರವಾಗುತ್ತಿದ್ದ ‘ಭೀಮಾ ಪುತ್ರಿ ಬ್ರಿಗೇಡ್’ ಸ್ಥಾಪಕಿ ರೇವತಿ ರಾಜ್ ಸೇರಿದಂತೆ ತಂಡದ ಇತರೆ ಸದಸ್ಯೆಯರ ಮೇಲೆ ಆರೆಸ್ಸೆಸ್ ಸಮವಸ್ತ್ರ ಧರಿಸಿದ್ದ ಸಂಘಪರಿವಾರದ ಗೂಂಡಾಗಳು ದೈಹಿಕ ಹಲ್ಲೆ ನಡೆಸಿದ್ದಲ್ಲದೆ, ಅವರ ವಾಹನಗಳ ಮೇಲೂ ಆಕ್ರಮಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಕುರಿತಂತೆ ದುಷ್ಕರ್ಮಿಯೋರ್ವನನ್ನು ಬಂಧಿಸಲಾಗಿದ್ದು, ಇತರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಕುರಿತು ‘ವರದಿಗಾರ’ ತಂಡ ರೇವತಿ ರಾಜ್ ಅವರನ್ನು ಸಂಪರ್ಕಿಸಿ ಘಟನೆಯ ಕುರಿತಂತೆ ಮಾಹಿತಿ ಕೇಳಿತ್ತು. ರೇವತಿ ರಾಜ್ ಅವರೇ ಹೇಳುವ ಪ್ರಕಾರ, “ಕೊಡಗಿನ ರಾಜರಾಜೇಶ್ವರಿ ಎನ್ನುವ ಪ್ರದೇಶದಲ್ಲಿ ಕುಸಿಯುತ್ತಿದ್ದ ಗುಡ್ಡ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುತ್ತಿದ್ದ ರೇವತಿ ರಾಜ್ ನೇತೃತ್ವದ ‘ಭೀಮಾ ಪುತ್ರಿ ಬ್ರಿಗೇಡ್’ ತಂಡದ ಸದಸ್ಯೆಯರು ಮತ್ತು ಏಳೆಂಟು ಜನರಿದ್ದ ಸಂಘಪರಿವಾರದ ಗೂಂಡಾಗಳ ಮಧ್ಯೆ ಕಾರ್ ಪಾರ್ಕಿಂಗ್ ಮಾಡುವ ಕ್ಷುಲ್ಲಕ ವಿಷಯಕ್ಕೆ ಸಂಬಂಧಪಟ್ಟಂತೆ ವಾಗ್ವಾದಗಳು ನಡೆದಿದೆ. ಈ ಕುರಿತಂತೆ ರೇವತಿ ರಾಜ್ ಖುದ್ದಾಗಿ ಅಲ್ಲಿದ್ದವರ ಕ್ಷಮಾಪಣೆ ಕೇಳಿದ್ದರು. ಆದರೆ ನಂತರ ನಮ್ಮ ಕಾರಿನ ಬೋರ್ಡ್ ನೋಡಿಕೊಂಡು ನಮ್ಮ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕಾರಿನಲ್ಲಿದ್ದ ಅಂಬೇಡ್ಕರ್ ಚಿತ್ರವಿರುವ ಬೋರ್ಡನ್ನು ಕಾಲಿನಿಂದ ಒದ್ದಿದ್ದಾರೆ. ಸಂತ್ರಸ್ತ ಜನರಿಗೆ ನೆರವಾಗುತ್ತಿದ್ದ ನಮ್ಮ ತಂಡದ ಮಹಿಳೆಯರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೆ, ಅವರ ಮೊಬೈಲುಗಳನ್ನು ಕಿತ್ತುಕೊಂಡು ಎಳೆದಾಡಿದ್ದಾರೆ. ಹಲ್ಲೆ ನಡೆಸಿದವರೆಲ್ಲರೂ ಆರೆಸ್ಸೆಸ್ಸಿನ ಸಮವಸ್ತ್ರ ಧರಿಸಿದ್ದರು” ಎಂದು ರೇವತಿ ರಾಜ್ ತಿಳಿಸಿದ್ದಾರೆ.

ಘಟನೆಯ ಕುರಿತು ವೀಡೀಯೋ ಒಂದನ್ನು ಮಾಡಿರುವ ರೇವತಿ ರಾಜ್ ಅವರು, ದಲಿತರಾದ ಮಾತ್ರಕ್ಕೆ ಒಬ್ಬಳು ಹೆಣ್ಣು ಸಂತ್ರಸ್ತರ ರಕ್ಷಣಾ ಕಾರ್ಯ ಮಾಡಬಾರದೆಂದಿದೆಯೇ ಎಂದು ಪ್ರಶ್ನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಉದಯ್ ಎನ್ನುವ ದುಷ್ಕರ್ಮಿಯೊಬ್ಬನನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ. ಇದೀಗ ನಾವು ಪ್ರಯಾಣಿಸುವ ಮಾರ್ಗದಲ್ಲೆಲ್ಲಾ ನಮ್ಮ ವಾಹನಗಳನ್ನು ಹಿಂಬಾಲಿಸುತ್ತಿದ್ದು, ನಮ್ಮ ಫೋಟೋಗಳನ್ನು ತೆಗೆಯುತ್ತಿದ್ದಾರೆ ಎಂದು ಭೀತಿ ವ್ಯಕ್ತಪಡಿಸಿದ್ದಾರೆ.

ದಾಳಿಯ ಲೈವ್ ದೃಶ್ಯಾವಳಿಗಳು

 

ರೇವತಿ ರಾಜ್ ಘಟನೆಯ ಕುರಿತಂತೆ ವಿವರಿಸುತ್ತಿರುವುದು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group