ರಾಷ್ಟ್ರೀಯ ಸುದ್ದಿ

ಕೇರಳಕ್ಕೆ 5 ಮಿಲಿಯನ್ ಡಾಲರ್ ಸಹಾಯ ಘೋಷಿಸಿದ ಕತಾರ್!!

ವರದಿಗಾರ(19-08-2018): ಶತಮಾನದಲ್ಲೇ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೇರಳಕ್ಕೆ, ಕತಾರ್ ಸರಕಾರವು 5 ಮಿಲಿಯನ್ ಡಾಲರ್ ಸಹಾಯವನ್ನು ಘೋಷಿಸಿದೆ.

ಕತಾರ್’ನ ನಾಯಕ ತಮೀಮ್ ಬಿನ್ ಹಮೀದ್’ರ ನಿರ್ದೇಶನದಂತೆ ಕೇರಳದಲ್ಲಿ ಪ್ರವಾಹಕ್ಕೀಡಾಗಿರುವವರ ಪರಿಹಾರಕ್ಕೆ 5 ಮಿಲಿಯನ್ ಡಾಲರ್’ಗಳ (ಸುಮಾರು 35 ಕೋಟಿ) ಪರಿಹಾರ ಧನವನ್ನು ಘೋಷಿಸಲಾಗಿದೆ ಎಂದು ಕತಾರ್ ಪ್ರಧಾನ ಮಂತ್ರಿ ಅಬ್ದುಲ್ಲಾ ಬಿನ್ ನಾಸಿರ್ ಟ್ವೀಟ್ ಮಾಡಿದ್ದಾರೆ.

ಪ್ರವಾಹಕ್ಕೀಡಾದವರ ಕುಟುಂಬ ಹಾಗೂ ಕತಾರ್ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ ಇತರ ಭಾರತೀಯರಿಗೂ ತಮ್ಮ ಸಂತಾಪ ವ್ಯಕ್ತಪಡಿಸಿದ ಅವರು, ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group