ರಾಷ್ಟ್ರೀಯ ಸುದ್ದಿ

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯು ಗರಿಷ್ಠ ಪ್ರಮಾಣದ ಪ್ರಗತಿ: ಅಧಿಕೃತ ಅಂಕಿ ಅಂಶಗಳ ವರದಿ

ಯುಪಿಎ ಅಧಿಕಾರಾವಧಿಯ 10 ವರ್ಷಗಳಲ್ಲಿ ಜಿಡಿಪಿ ಪ್ರಗತಿ ದರ ಶೇಕಡ 8.1 ಆಗಿದ್ದರೆ, ಮೋದಿ ಯುಗದಲ್ಲಿ ಇದು ಶೇಕಡ 7.3ರಷ್ಟಿದೆ: ಕಾಂಗ್ರೆಸ್

ವರದಿಗಾರ (ಆ.19): ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ (2006-07ರಲ್ಲಿ) ಭಾರತದ ಆರ್ಥಿಕತೆ ಐತಿಹಾಸಿಕ ಗರಿಷ್ಠ ಪ್ರಮಾಣದ ಪ್ರಗತಿ ದಾಖಲಿಸಿದೆ ಎಂದು ಅಧಿಕೃತ ಅಂಕಿ ಅಂಶಗಳು ದೃಢಪಡಿಸಿವೆ. ಈ ಅವಧಿಯಲ್ಲಿ ಭಾರತ ಶೇಕಡ 10.08ರಷ್ಟು ಪ್ರಗತಿ ದಾಖಲಿಸಿದ್ದು, ಆರ್ಥಿಕ ಉದಾರೀಕರಣದ ಬಳಿಕ ಸಾಧಿಸಿದ ಗರಿಷ್ಠ ಪ್ರಗತಿ ಇದಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.

ಭಾರತದ ಜಿಡಿಪಿ ಬಗೆಗಿನ ಹಿಂದಿನ ಸರಣಿಯ ಅಂಕಿ ಅಂಶಗಳನ್ನು, ರಾಷ್ಟ್ರೀಯ ಅಂಕಿ ಅಂಶಗಳ ಆಯೋಗ ನೇಮಕ ಮಾಡಿದ ವಾಸ್ತವ ವಲಯ ಅಂಕಿ ಅಂಶಗಳ ಸಮಿತಿ ಸಿದ್ಧಪಡಿಸಿದೆ. ಈ ವರದಿಯನ್ನು ಅಂಕಿ ಸಂಖ್ಯೆಗಳ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಯ ತನ್ನ ವೆಬ್‍ಸೈಟ್‍ ನಲ್ಲಿ ಪ್ರಕಟಿಸಿದೆ. ಸ್ವಾತಂತ್ರ್ಯದ ಬಳಿಕ ಗರಿಷ್ಠ ಆರ್ಥಿಕ ಪ್ರಗತಿ ದಾಖಲಾದದ್ದು ರಾಜೀವ್‍ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ. 1988-89ರಲ್ಲಿ ಭಾರತ ಶೇಕಡ 10.2ರಷ್ಟು ಪ್ರಗತಿ ದಾಖಲಿಸಿತ್ತು.

ಈ ವರದಿಯು ಹಳೆಯ ಸರಣಿ (2004-05) ಮತ್ತು ಹೊಸ ಸರಣಿಯ ಪ್ರಗತಿ ದರವನ್ನು 2011-12ರ ಬೆಲೆಗಳ ಆಧಾರದಲ್ಲಿ ತುಲನೆ ಮಾಡುತ್ತದೆ. ಹಳೆ ಸರಣಿಯ ಅನ್ವಯ 2006-07ರಲ್ಲಿ ಅಂದರೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸ್ಥಿರ ಬೆಲೆ ಆಧಾರದಲ್ಲಿ ಜಿಡಿಪಿ ವಿಸ್ತರಣೆ ದರ 9.57 ಆಗಿತ್ತು. ಹೊಸ ಸರಣಿ (2011-12)ಯ ಅನ್ವಯ ಪ್ರಗತಿ ಸಂಖ್ಯೆ ಬದಲಾಗಿದ್ದು, ಇದನ್ನು 10.08 ಎಂದು ಪರಿಷ್ಕರಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಜಿಡಿಪಿ ಬ್ಯಾಕ್‍ ಸೀರಿಸ್ ಡಾಟಾ ಅಂತಿಮವಾಗಿ ಹೊರಬಿದ್ದಿದೆ. ಯುಪಿಎ ಅಧಿಕಾರಾವಧಿಯ 10 ವರ್ಷಗಳಲ್ಲಿ ಜಿಡಿಪಿ ಪ್ರಗತಿ ದರ ಶೇಕಡ 8.1 ಆಗಿದ್ದರೆ, ಮೋದಿ ಯುಗದಲ್ಲಿ ಇದು ಶೇಕಡ 7.3ರಷ್ಟಿದೆ” ಎಂದು ಹೇಳಿದೆ. ಆಧುನಿಕ ಭಾರತದ ಇತಿಹಾಸದಲ್ಲಿ ಎರಡಂಕಿಯ ಪ್ರಗತಿಯನ್ನು ದಾಖಲಿಸಿದ ಏಕೈಕ ವರ್ಷ ಯುಪಿಎ ಆಡಳಿತದ ಅವಧಿಯಲ್ಲಿದೆ ಎಂದು ಪಕ್ಷ ಹೇಳಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group