ಸುತ್ತ-ಮುತ್ತ

ಮೂರು ದಿನದಲ್ಲಿ 250 ಯುನಿಟ್ ರಕ್ತ ಸಂಗ್ರಹ ; ಬ್ಲಡ್ ಡೋನರ್ಸ್ ತಂಡದಿಂದ ಮತ್ತೊಂದು ದಾಖಲೆ !

ಚೊಂಬುಗುಡ್ಡೆ, ಸಖಲೇಶಪುರ, ಮೈಸೂರಲ್ಲಿ ರಕ್ತದಾನ ಶಿಬಿರ

 

ಸಕಲೇಶಪುರ

ಸಕಲೇಶಪುರ : 72ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಬೃಹತ್ ರಕ್ತ ದಾನ ಶಿಬಿರ ಇದೇ ಬರುವ ಅಗಸ್ಟ್ 15 ರಂದು ಸಮಯ ಬೆಳಗ್ಗೆ 9 ಗಂಟೆಗೆ,ಸಕಲೇಶಪುರ ಪುರಭವನದಲ್ಲಿ ಕರ್ನಾಟಕ ಅನಿವಾಸಿ ಭಾರತೀಯರ ಒಕ್ಕೂಟ ಜಿದ್ದಾ ಇವರ ಪ್ರಾಯೋಜಕತ್ವದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಹಾಗೂ ಯೇನಪೋಯ ಬ್ಲಡ್ ಬ್ಯಾಂಕ್ ದೇರಳಕಟ್ಟೆ ಇದರ.ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ದಿನಾಂಕ 15/ 8 ರಂದು ಪುರಭವನ ಸಕಲೇಶಪುರ ಇದರ ಸಭಾಂಗನದಲ್ಲಿ ಜರುಗಿತು. ಈ ಸಮಾರಂಭಕ್ಕೆ ಗೌರವಾನ್ವಿತ ಅತಿಥಿಯಾಗಿ ಸನ್ಮಾನ್ಯ  HK ಕುಮಾರಸ್ವಾಮಿ  ಶಾಸಕರು,ಆಲೂರು ಕಟ್ಟಾಯ,ಸಕಲೇಶಪುರ ವಿಧಾನಸಭಾ ಕ್ಷೇತ್ರ,ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ, ಜನಾಬ್ ಮೊಹಮ್ಮದ್ ಸೈಫುದ್ದೀನ್ ಸಮಿ.ಅಧ್ಯಕ್ಷರು _KNRI FORUM ಜಿಧ್ಧಾ, ಜನಾಬ್ ಕಲೀಲ್ ಅಬ್ಬಾಸ್,ಸಂಸ್ಥಾಪಕ ಅಧ್ಯಕ್ಷರು ಎಸ್ ಕೆ ಪಿ ಬ್ರದರ್ಸ್ ವೆಲ್ಫೇರ್ ಟ್ರಸ್ಟ್(ರಿ), ಜನಾಬ್ ಸಿದ್ದೀಕ್ ಮಂಜೇಶ್ವರ,ಸಂಸ್ಥಾಪಕ ಅಧ್ಯಕ್ಷರು ಬ್ಲಡ್ ಡೋನರ್ಸ್  ಮಂಗಳೂರು(ರಿ), ಅಧ್ಯಕ್ಷತೆ ಜನಾಬ್ ಜಲಾಲ್ ಬೇಗ್, ಎಸ್ ಕೆ ಪಿ ಬ್ರದರ್ಸ್ ವೆಲ್ಫೇರ್ ಟ್ರಸ್ಟ್ (ರಿ) ಉಪಸ್ಥಿತರಿದ್ದರೆ ,  ನಾಡಿನ ಅನೇಕ ಹಿರಿಯ ಕಿರಿಯ ಉಲೆಮಾಗಳು,ಪತ್ರಕರ್ತರು,ಸಮಾಜಸೇವಕರು,ರಾಜಕಾರಣಿಗಳು,ಜಮಾಅತ್ ಅಧ್ಯಕ್ಷರುಗಳು ಅನೇಕ ಗಣ್ಯರು ಬಾಗವಹಿಸಿದ್ದರು.

 

ಚೊಂಬುಗುಡ್ಡೆ

▶ ಚೊಂಬುಗುಡ್ಡೆಯಲ್ಲಿ ಯಶಸ್ವೀ ರಕ್ತದಾನ ಶಿಬಿರ

▶ ಪೀಪಲ್ ಯುನೈಟ್ ಚೊಂಬುಗುಡ್ಡೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಹಕಾರ

ಪೀಪಲ್ ಯುನೈಟ್ ಚೊಂಬುಗುಡ್ಡೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ರಿ, ಇದರ  ಜಂಟಿ ಆಶ್ರಯದಲ್ಲಿ ಕಣಚೂರು ಆಸ್ಪತ್ರೆ ಮತ್ತು  ಇಂಡಿಯನ್ ರೆಡ್ ಕ್ರಾಸ್ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರವು ದಿನಾಂಕ 12-8-20018 ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ಚೊಂಬುಗುಡ್ಡೆ ಮಸೀದಿ ವಠಾರದಲ್ಲಿ ಬಹಳಾ ಯಶಸ್ವಿಯಾಗಿ ಜರುಗಿತು.

ಪೀಪಲ್ ಯುನೈಟೆಡ್ ಇದರ ಕಛೇರಿಯನ್ನು ಬಹು ಅಬೂಬಕ್ಕರ್ ಸಿದ್ದೀಕ್ ಅಹ್ಸನಿ ಖತೀಬರು ಚೋಂಬುಗುಡ್ಡೆ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೊಹಮ್ಮದ್ ಇಬ್ರಾಹಿಂ ಕತಾರ್, ರಹ್ಮಾನ್ ಕಣಚೂರು ನಿರ್ಧೇಶಕರು ಕಣಚೂರು ಆಸ್ಪತ್ರೆ, ಲತೀಫ್ ಅಧ್ಯಕ್ಷರು ಜೆ ಎಂ  ಚೋಂಬುಗುಡ್ಡೆ, ಜನಾಬ್ ಅಬ್ಬಾಸ್ ಅಧ್ಯಕ್ಷರು, ಖಿಲ್ರ್ ಜುಮಾ ಮಸೀದಿ, ಜನಾಬ್ ರಫಿಕ್ ಮುಂಡೋಳಿ ಅಧ್ಯಕ್ಷರು ಮುಂಡೋಳಿ ಜುಮಾ ಮಸೀದಿ, ಜನಾಬ್ ಶಾಖಿರ್ ಅಧ್ಯಕ್ಷರು ಪೀಪಲ್ ಯುನೈಟೆಡ್, ಖೌಶಿಕ್ ರೆಡ್ ಕ್ರಾಸ್, ಡಾ ಸಂತೋಷ್, ಶ್ರಿ ಸುಆಸಿನಿ ಮೊದಲಾದವರು ಉಪಸ್ಥಿತರಿದ್ದರು.   ಕಾರ್ಯಕ್ರಮದಲ್ಲಿ ಕೊಡುಗೈ ದಾನಿ ಸಮಾಜಸೇವಕರಾದ ಕಣಚೂರು ಮೋನು ಇವರಿಗೆ ಸನ್ಮಾನ ಕಾರ್ಯಕ್ರಮವೂ ಜರುಗಿತು. ಕಾರ್ಯಕ್ರಮದಲ್ಲಿ ಅತಿಥಿಗಳ ಹಿತನುಡಿಯ ನಂತರ ನಡೆದ ರಕ್ತದಾನ ಶಿಭಿರದಲ್ಲಿ 78 ಯುವಕರು ಹಿರಿಯರು ಸೇರಿ ರಕ್ತದಾನ ಮಾಡಿದರು. ಪೀಪಲ್ ಯುನೈಟೇಡ್ ಚೆಂಬುಗುಡ್ಡೆ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಕಾರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟಕರು, ನಾಘರಿಕರು ಹಿತೈಶಿಗಳು ಭಾಗವಹಿಸಿದ್ದರು.

 

ಮೈಸೂರು

ಮೈಸೂರು : ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಊರ ಬಡವರ ಆಶಾಕಿರಣ ಸೇವಾ ಹೃದಯ ದೀವಿಗೆ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಜೀವನಾಧಾರ ರಕ್ತನಿಧಿ ಕೇಂದ್ರ ಕೆ.ಆರ್ ಆಸ್ಪತ್ರೆ ರಸ್ತೆ ಮೈಸೂರು – 21 ಇದರ ಸಹಭಾಗಿತ್ವದಲ್ಲಿ ಆಗಸ್ಟ್ 12/08/2018 ರಂದು ಮೈಸೂರು ಜಿಲ್ಲೆಯ, ಟಿ.ನರಸೀಪುರ ತಾಲ್ಲೂಕು, ಬನ್ನಹಳ್ಳಿಹುಂಡಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಗ್ರಾಮದವರಿಗೆ ವಿವಿದ ಮೂಲಸೌಕರ್ಯ ವಿತರಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಊರಿನ ನೇತಾರರು ಹಿತೈಷಿಗಳು ಹಿರಿಯರು ಭಾಗವಹಿಸಿದ್ದರು. ಮಕ್ಕಳಿಗೆ ಪಠ್ಯ ಪುಸ್ತಕ, ಅನಾಥಶ್ರಮಕ್ಕೆ ದಿನಬಳಕೆ, ನೇತ್ರದಾನ ರಕ್ತದಾನದ ಅರಿವು, ಕಂಪ್ಯೂಟರ್ ತರಗತಿ ಉದ್ಘಾಟಣೆ, ತೆಂಗಿನ ಸಸಿ ವಿತರಣೆ, ಗ್ಯಾಸ್ ವಿತರಣೆ ಮತ್ತು ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಾಜ್ಯದ ವಿವಿದ ಪ್ರದೇಶದ ಸಾಮಾಜಿಕ ಮುಂದಾಳುಗಳಿಗೆ ಸನ್ಮಾನ ಕಾರ್ಯಕ್ರಮವೂ ಜರುಗಿತು.  ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶೃತಿ ಇವರ ಸೇವೆಯನ್ನು ನಾಗರಿಕರು, ಸಭೀಕರು ಮುಕ್ತ ಕಂಠದಲ್ಲಿ ಪ್ರಸಂಶಿಸಿದರು.

 

ವರದಿ : ಬ್ಲಡ್ ಡೋನರ್ಸ್ ಮಂಗಳೂರು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group