ರಾಷ್ಟ್ರೀಯ ಸುದ್ದಿ

ಟ್ವಿಟ್ಟರಿನಲ್ಲಿ ವಾಜಪೇಯಿಯ ಸುಳ್ಳು ನಿಧನ ವಾರ್ತೆಯನ್ನು ಹರಡಿಸಿದ ತ್ರಿಪುರಾದ ರಾಜ್ಯಪಾಲ !!

ವರದಿಗಾರ (ಆ 16) :  ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯನ್ನು ತ್ರಿಪುರಾದ ರಾಜ್ಯಪಾಲ ತಥಾಗತಾ ರಾಯ್ ಟ್ವಿಟ್ಟರಿನಲ್ಲಿ ಕೊಂದೇ ಬಿಟ್ಟಿದ್ದಾರೆ. ವಾಜಪೇಯಿಯವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಜೀವರಕ್ಷಕ ವ್ಯವಸ್ಥೆಯಲ್ಲಿದ್ದರೆ, ಇತ್ತ ತ್ರಿಪುರಾದ ರಾಜ್ಯಪಾಲ ತಥಾಗತ ರಾಯ್ ವಾಜಪೇಯಿಯವರು ಮರಣ ಹೊಂದಿದ್ದಾರೆ ಎಂದು ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ತಥಾಗತ ರಾಯ್ ಒಂದು ರಾಜ್ಯದ ರಾಜ್ಯಪಾಲ ಎನ್ನುವುದಕ್ಕಿಂತ ಬಿಜೆಪಿ ಪಕ್ಷದ ನಾಯಕನಂತೆ ಕಾರ್ಯನಿರ್ವಹಿಸುತ್ತಿರುವುದಕ್ಕೇ ಹೆಚ್ಚು ಕುಖ್ಯಾತಿಗೆ ಒಳಗಾದವರಾಗಿದ್ದಾರೆ. ತನ್ನ ಶೋಕ ವ್ಯಕ್ತಪಡಿಸಿದ ಟ್ವೀಟ್ ನಲ್ಲಿ ರಾಯ್, ವಾಜಪೇಯಿಯವರನ್ನು “ಭಾರತದ ರಾಜಕೀಯದ ಹೊಳಪಿನ ನಕ್ಷತ್ರ” ಎಂದೂ ಕೊಂಡಾಡಿದ್ದಾರೆ. ಕೊನೆಯಲ್ಲಿ ತನ್ನ ಪ್ರಮಾದದ ಕುರಿತು ಅರಿವಾದ ನಂತರ ತನ್ನ ಟ್ವೀಟನ್ನು ಅಳಿಸಿ ಹಾಕಿದ್ದು, ಕ್ಷಮಾಪಣೆ ಕೇಳಿರುವ ಟ್ವೀಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ.

ವಾಜಪೇಯಿಯವರ ನಿಧನದ ಕುರಿತು ರಾಷ್ಟ್ರೀಯ ಮಾಧ್ಯಮಗಳಾಗಲಿ ಅಥವಾ ಬಿಜೆಪಿಯ ಉನ್ನತ ಮೂಲಗಳಾಗಲೀ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೂ ಕೆಲ ಪ್ರಾದೇಶಿಕ ಸುದ್ದಿ ಮಾಧ್ಯಮಗಳು “ತಮ್ಮಲ್ಲೇ ಮೊದಲು” ಎನ್ನುವ ಜಿದ್ದಿಗೆ ಬಿದ್ದು ಹಲವು ಬಾರಿ ವಾಜಪೇಯಿಯವರ ನಿಧನ ವಾರ್ತೆಯನ್ನು ಪ್ರಕಟಿಸಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈ ಎಲ್ಲಾ ಗೊಂದಲಗಳಿಗೆ ಮೂಲ ಕಾರಣ ತ್ರಿಪುರಾದ ರಾಜ್ಯಪಾಲರೆಂದರೂ ತಪ್ಪಾಗಲಿಕ್ಕಿಲ್ಲ.

Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group