ರಾಷ್ಟ್ರೀಯ ಸುದ್ದಿ

ನಿನ್ನ ದೇಶಪ್ರೇಮ ಸಾಕಾಗಲ್ಲ ! NRC ಪಟ್ಟಿಯಿಂದ ‘ಔಟ್’ ಆದ 2017ರ ಈ ಚಿತ್ರದ 9ರ ಬಾಲಕ !!

ಪ್ರಾಣದ ಹಂಗು ತೊರೆದು ತ್ರಿವರ್ಣ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದವ ಭಾರತೀಯನಲ್ಲವಂತೆ !!

ವರದಿಗಾರ (ಆ.16): 2017 ರ ಸ್ವಾತಂತ್ರ್ಯ ದಿನದಂದು ನಮ್ಮೆಲ್ಲರ ಭಾರತೀಯತೆಯನ್ನು ಹಾಗೂ ದೇಶಪ್ರೇಮವನ್ನೇ ಬಡಿದೆಬ್ಬಿಸುವ ರೋಮಾಂಚನಕಾರೀ ಚಿತ್ರವೊಂದು ವೈರಲ್ ಆಗಿತ್ತು. ಅಸ್ಸಾಂನ ನೆರೆಪೀಡಿತ ಧುಬ್ರಿ ಗ್ರಾಮದಲ್ಲಿ ಇಬ್ಬರು ಶಾಲಾ ಅಧ್ಯಾಪಕರು ತಮ್ಮ ನಡು ಮಟ್ಟದ ಹಾಗೂ ಇಬ್ಬರು 9 ರ ಹರೆಯದ ಬಾಲಕರು ತಮ್ಮ ಕೊರಳು ಮಟ್ಟದ ನೀರಿನಲ್ಲಿ ನಿಂತು ಧ್ವಜಾರೋಹಣಗೈಯ್ಯುತ್ತಿರುವ ಮನಮೋಹಕ ದೃಶ್ಯವಾಗಿತ್ತದು. ಆದರೆ ಸರಿಯಾಗಿ ಒಂದು ವರ್ಷದ ನಂತರ ಇಡೀ ದೇಶದ ಜನರ ಅಂತಹಕರಣವನ್ನೇ ಅಣಕಿಸುವಂತಹ ಘಟನೆಯೊಂದರಲ್ಲಿ, 2017 ರ ಚಿತ್ರದಲ್ಲಿದ್ದಂತಹಾ ಇಬ್ಬರು ಬಾಲಕರ ಪೈಕಿಯಲ್ಲಿ ಒಬ್ಬನಾಗಿದ್ದ ಹೈದರ್ ಖಾನ್’ನ ಹೆಸರು ರಾಜ್ಯ ಸರಕಾರ ಬಿಡುಗಡೆಗೊಳಿಸಿರುವ ಎನ್ ಆರ್ ಸಿ ಪಟ್ಟಿಯಲ್ಲಿ ಕಾಣೆಯಾಗಿದೆ !! ಹೌದು, ನಾವಿದನ್ನು ನಂಬಲೇಬೇಕಾಗಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಅಂದು ಹೈದರ್ ಜೊತೆಗಿದ್ದ 10 ರ ಹರೆಯದ ಸಂಬಂಧಿ ಜೈರುಲ್ ಖಾನ್, ಮುಖ್ಯೋಪಾಧ್ಯಾಯ ತಾಝೆನ್ ಸಿಕದರ್ ಹಾಗೂ ಸಹಾಯಕ ಅಧ್ಯಾಪಕ ನೃಪೆನ್ ರಭಾ ಎನ್ ಆರ್ ಐ ಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹೈದರ್ ಖಾನನನ್ನು ಹೊರತುಪಡಿಸಿ ಕುಟುಂಬದ ಇತರೆ ಎಲ್ಲರ ಹೆಸರೂ ಪಟ್ಟಿಯಲ್ಲಿದೆ.

ಈ ಕುರಿತು ಹೈದರನಲ್ಲಿ ಪ್ರಶ್ನಿಸಿದಾಗ, ‘ನನಗೆ ಎನ್ ಆರ್ ಸಿ ಯ ಕುರಿತಾಗಿ ಹೆಚ್ಚೇನೂ ತಿಳಿದಿಲ್ಲ. ಆದರೆ ಗ್ರಾಮದ ಸುಶಿಕ್ಷಿತ ಹಿರಿಯರು ಹೇಳಿದ ಮಾರ್ಗದರ್ಶನದಲ್ಲಿ ನಡೆಯುತ್ತೇನೆ. ಅಂದು ಎಲ್ಲವೂ ನೀರಿನಡಿಯಲ್ಲಿತ್ತು. ಧ್ವಜಾರೋಹಣಗೈಯ್ಯುವ ಸ್ಥಳಕ್ಕೆ ಈಜಿ ಸಾಗಬೇಕಾಗಿತ್ತು. ಉಳಿದ ವಿದ್ಯಾರ್ಥಿಗಳು ಈಜುವ ಸಾಹಸಕ್ಕೆ ಕೈ ಹಾಕಲಿಲ್ಲ. ನಾನು ಮತ್ತು ಜೈಮುರ್ ಖಾನ್ ಈಜಿ ಧ್ವಜಾರೋಹಣದ ಸ್ಥಳಕ್ಕೆ ತಲುಪಿ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಿದ್ದೆವು’ ಎಂದು ಮುಗ್ಧನಾಗಿ ಹೇಳುತ್ತಾನೆ.

ಒಟ್ಟಿನಲ್ಲಿ ಪೂರ್ವಾಗ್ರಹಪೀಡಿತರ ಕೈಗೆ ಸಿಲುಕಿ ಎನ್ ಆರ್ ಸಿ ಪಟ್ಟಿ ಹೈದರ್ ಖಾನನಂತಹಾ ಅದೆಷ್ಟೋ ಭಾರತೀಯ ಸಂಜಾತರ ಭಾವನೆ ಮತ್ತು ಅವರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂಬುವುದಕ್ಕೆ ಹೈದರ್ ಖಾನನ ಈ ಒಂದು ಘಟನೆ ಸಾಕ್ಷಿಯಾಗಿ ನಿಂತಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group