ಜೆಎನ್ ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ

‘ಭಯದಿಂದ ಸ್ವಾತಂತ್ರ್ಯ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಸಂದರ್ಭದಲ್ಲೇ ಭಯೋತ್ಪಾದನಾ ಕೃತ್ಯ
ಸಂಸತ್ನ ಅನತಿ ದೂರದಲ್ಲಿ ದಾಳಿ
ವರದಿಗಾರ (ಆ.13): ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯ (ಜೆಎನ್ಯು)ದ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮೇಲೆ ಸೋಮವಾರ ಸಂಸತ್ ಭವನದ ಅನತಿ ದೂರದಲ್ಲಿ ಗುಂಡಿನ ದಾಳಿ ನಡೆದಿದ್ದು ಅದೃಷ್ಠವಶಾತ್ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಪ್ರಾಣ ಹಾನಿಯಿಂದ ಪಾರಾಗಿದ್ದಾರೆ.
ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ ಸಭಾಂಗಣದಲ್ಲಿ ‘ಯುನೈಟೆಡ್ ಅಗೇನ್ಸ್ಟ್ ಹೇಟ್’ ಸಂಘಟನೆ ಹಮ್ಮಿಕೊಂಡಿದ್ದ ಕೌಫ್ ಸೇ ಆಜಾದಿ’(ಭಯದಿಂದ ಸ್ವಾತಂತ್ರ್ಯ) ಕಾರ್ಯಕ್ರಮದಲ್ಲಿ ಭಾಗವಹಿಸಲು ಉಮರ್ ಖಾಲಿದ್ ಆಗಮಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ದೆಹಲಿಯ ರಫಿ ಮಾರ್ಗ ಬಳಿ ಇರುವ ಕಾನ್ಸ್ ಟಿಟ್ಯುಷನ್ ಕ್ಲಬ್ ಆಫ್ ಇಂಡಿಯಾ ಕಟ್ಟಡದ ಎದುರಿನ ರಸ್ತೆ ಬದಿಯ ಚಹದ ಅಂಗಡಿಯಲ್ಲಿ ಖಾಲಿದ್ ಚಹ ಕುಡಿಯುವಾಗ ಮಧ್ಯಾಹ್ನ 2.15ರ ಸುಮಾರಿಗೆ ದಾಳಿ ನಡೆದಿದೆ. ಕೂದಲೆಳೆಯ ಅಂತರದಲ್ಲಿ ಉಮರ್ ಖಾಲಿದ್ ಗುಂಡಿನ ದಾಳಿಯಿಂದ ಪಾರಾಗಿದ್ದಾರೆ.
ದುಷ್ಕರ್ಮಿ ಬಂದೂಕು ಎಸೆದು ಪರಾರಿಯಾಗಿದ್ದಾರೆ. ಗುರಿ ತಪ್ಪಿದಕೂಡಲೇ ದಾಳಿಕೋರ ನಾಡ ಪಿಸ್ತೂಲ್ ಬಿಸಾಕಿ ಓಡಿ ಹೋಗಿದ್ದಾನೆ.
ಉಮರ್ ಖಾಲಿದ್ ಭಾಗವಹಿಸಲಿದ್ದ ಕಾರ್ಯಕ್ರಮ:
ಉಮರ್ ಖಾಲಿದ್ ಹೊಟ್ಟೆಗೆ ಪಿಸ್ತೂಲ್ ಹಿಡಿದಾಗ ಪಕ್ಕದಲ್ಲಿದ್ದ ಸ್ನೇಹಿತ ಒದ್ದ ಕೂಡಲೇ ನಾಲ್ಕು ಹೆಜ್ಜೆ ಹಿಂದೆ ಹೋಗಿ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ. ಮೊದಲ ಬಾರಿ ಗುರಿ ತಪ್ಪಿದಾಗ ಸ್ವಲ್ಪ ದೂರ ಹೋಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ ಎಂದು ಮೂಲಗಳು ವರದಿ ಮಾಡಿವೆ.
ಗೌರಿ ಲಂಕೇಶ್ ಹತ್ಯೆ ಮಾದರಿಯಲ್ಲಿ ಹತ್ಯೆಗೆ ಯತ್ನ ನಡೆದಿದೆ. ಘಟನೆ ಕುರಿತು ಪೊಲೀಸರು ಉಮರ್ ಖಾಲಿದ್ ವಿಚಾರಣೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ಎಷ್ಟು ಜನ ಇದ್ದರು ಎಂಬ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ. ಘಟನೆಯಿಂದಾಗಿ ಈಗ ಅರ್ಧ ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಗಿದೆ.
ಘಟನಾ ಸಂದರ್ಭದಲ್ಲಿ ದೊರೆತ ಪಿಸ್ತೂಲ್:
ಗುಜರಾತ್ ವಡ್ಗಾಂವ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿಯ ಪ್ರತಿಕ್ರಿಯೆ:
My reaction on Umar Khalid pic.twitter.com/wkjOLFyip3
— Jignesh Mevani (@jigneshmevani80) August 13, 2018
