ರಾಷ್ಟ್ರೀಯ ಸುದ್ದಿ

ನೆಹರು ಪಂಡಿತರಲ್ಲ, ದನ, ಹಂದಿ ಮಾಂಸ ತಿನ್ನುತ್ತಿದ್ದರು: ಬಿಜೆಪಿ ಶಾಸಕ

‘ದನ ಹಾಗೂ ಹಂದಿ ಮಾಂಸ ತಿನ್ನುವವರು ಪಂಡಿತರಾಗಲು ಸಾಧ್ಯವಿಲ್ಲ’

ಸದಾ ವಿವಾದಾತ್ಮಕ ಹೇಳಿಕೆಯಲ್ಲಿರುವ ಬಿಜೆಪಿ ಶಾಸಕ

ವರದಿಗಾರ (ಆ.11): ‘ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಪಂಡಿತರಲ್ಲ. ಅವರು ದನ ಹಾಗೂ ಹಂದಿ ಮಾಂಸ ತಿನ್ನುತ್ತಿದ್ದರು’ ಎಂದು ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುವ ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಬಿಜೆಪಿ ಮುಖ್ಯ ಕಚೇರಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ನೆಹರು ಅವರ ಹೆಸರಿನ ಜತೆ ಸೇರಿಕೊಂಡಿರುವ ಪಂಡಿತ್ ಪದ ಉಲ್ಲೇಖಿಸಿ, ‘ಅವರು ದನ ಹಾಗೂ ಹಂದಿ ಮಾಂಸ ತಿನ್ನುವವರು ಪಂಡಿತರಾಗಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಅಲ್ಲದೇ ಕಾಂಗ್ರೆಸ್ ಪಕ್ಷವು ಜಾತಿಯನ್ನು ಮುಂದಿಟ್ಟುಕೊಂಡು 2019ರ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗುತ್ತಿದೆ ಎಂದೂ ಆರೋಪಿಸಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಚಿನ್ ಪೈಲಟ್ಸ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಅಹುಜಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದಿರಾ ಗಾಂಧಿ ಜತೆ ದೇವಾಲಯಗಳಿಗೆ ಭೇಟಿ ನೀಡುತ್ತಿರಲಿಲ್ಲ. ನನ್ನ ಈ ಮಾತು ತಪ್ಪಾದಲ್ಲಿ ನಾನು ನನ್ನ ಸ್ಥಾನದಿಂದ ಕೆಳಗಿಳಿಯುತ್ತೇನೆ ಹಾಗೂ ಸಚಿನ್ ಅವರು ಸಹ ತಮ್ಮ ಸ್ಥಾನ ತೊರೆಯಬೇಕು ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಇಂದಿರಾ ಗಾಂಧಿ ಜತೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು ಎಂದು ಸಚಿನ್ ಪೈಲಟ್ ಹೇಳಿದ್ದರು.

ಸಂಪ್ರದಾಯ‌ದ ಪ್ರಕಾರ ಯೋಗ್ಯ ಪವಿತ್ರ (yagyopaveet) ಸಂಸ್ಕಾರವಾದ ಮೇಲೆ ಜನಿವಾರ ಹಾಕಬೇಕು. ರಾಹುಲ್ ಗಾಂಧಿ ಅವರಿಗೆ ‘ಯೋಗ್ಯ ಪವಿತ್ರ‘ ಸಂಸ್ಕಾರ ಯಾವಾಗ ಆಗಿತ್ತು? ಎಂದು ಅಹುಜಾ ಅವರು ಸಚಿನ್ ಪೈಲಟ್, ಅಶೋಕ್‌ ಗೆಹ್ಲೋಟ್ ಮತ್ತು ಗುಲಾಮ್ ನಬಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಈ ಮೂವರಲ್ಲಿ ಯಾರಾದರು ಉತ್ತರಿಸಲಿ ಎಂದೂ ಹೇಳಿದ್ದಾರೆ

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group