ರಾಜ್ಯ ಸುದ್ದಿ

ಕರ್ನಾಟಕ ಪ್ರಪ್ರಥಮ ಖಾಸಗಿ ಸುದ್ದಿ ವಾಹಿನಿ ಉದಯ ನ್ಯೂಸ್ ಯುಗಾಂತ್ಯ !!

ವರದಿಗಾರ-ಬೆಂಗಳೂರು: ತಮಿಳುನಾಡು ಮೂಲದ ಸನ್ ನೆಟ್’ವರ್ಕ್ ಒಡೆತನದ ರಾಜ್ಯದ ಮೊಟ್ಟ ಮೊದಲ ಖಾಸಗಿ ಸುದ್ದಿ ವಾಹಿನಿ ಉದಯ ನ್ಯೂಸ್ ಇದೇ ಅಕ್ಟೋಬರ್ 24 ರಂದು ಸ್ಥಗಿತಗೊಳ್ಳಲಿದೆ. ಕರ್ನಾಟಕದ ರಾಜ್ಯ ಕಾರ್ಯದರ್ಶಿಗೆ ಮತ್ತು ಕಾರ್ಮಿಕ ಇಲಾಖೆಗೆ ಈ ಕುರಿತು ಪತ್ರ ಬರೆದಿರುವ ಸನ್ ನೆಟ್’ವರ್ಕ್ ನಿರುದ್ಯೋಗಿಗಳಾಗುವ ಅದರ 73 ಉದ್ಯೋಗಿಗಳಿಗೆ ಎರಡು ತಿಂಗಳ ನೋಟೀಸ್ ನೀಡಲಾಗಿದೆ ಎಂದು ಬರೆದಿದ್ದಾರೆ.

ವೀಕ್ಷಕರ ಸಂಖ್ಯೆ ಕಡಿಮೆಯಾಗಿರುವ ಮತ್ತು ಸಂಸ್ಥೆ ನಷ್ಟವನ್ನನುಭವಿಸುತ್ತಿರುವ ಕಾರಣದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 1997ರಲ್ಲಿ ಪ್ರಾರಂಭಗೊಂಡ ಉದಯ ನ್ಯೂಸ್ ಅಂದಿನ ಕಾಲದಲ್ಲಿ ಕರ್ನಾಟಕದ ಮನೆಮಾತಾಗಿತ್ತು. ಅದೆಷ್ಟೋ ಮಂದಿ ಉದಯ ನ್ಯೂಸ್ ಕಾರ್ಯಕ್ರಮಗಳ ಮೂಲಕ ಕಿರುತೆರೆಯೊಂದಿಗೆ ಬೆಳ್ಳಿತೆರೆಗೂ ಕಾಲಿಟ್ಟಿದ್ದನ್ನು ಮರೆಯುವಂತಿಲ್ಲ. “ಕಾಮೆಡಿ ಟೈಂ” ಕಾರ್ಯಕ್ರಮದ ಮೂಲಕ ರಾಜ್ಯದ ಜನರಿಗೆ ಚಿರಪರಿಚಿತರಾಗಿದ್ದ ಮುಂಗಾರು ಮಳೆ ಖ್ಯಾತಿಯ ಗಣೇಶ್ ಇವರಲ್ಲಿ ಪ್ರಮುಖರಾಗಿದ್ದಾರೆ

.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group