ವಿವಿ ಪ್ಯಾಟ್ಗಳನ್ನು ಹೊಂದಿದ ಇವಿಎಂಗಳು ನಂಬರ್ಲಹವಲ್ಲ: ಮಾಜಿ ಚುನಾವಣಾ ಆಯುಕ್ತ

ವರದಿಗಾರ (ಆ.06): ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ. ಸಮಸ್ಯೆ ಇರುವುದು ವಿವಿ ಪ್ಯಾಟ್ಗಳಲ್ಲಿ ಹಾಗಾಗಿ ವಿವಿ ಪ್ಯಾಟ್ಗಳನ್ನು ಹೊಂದಿದ ಇವಿಎಂಗಳು ನಂಬರ್ಲಹವಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಹೇಳಿದ್ದಾರೆ.
ಕಳವಳಕ್ಕೆ ಕಾರಣವಾಗಿರುವುದು ಇವಿಎಂಗಳು ಅಲ್ಲ. ಬದಲಾಗಿ ವಿವಿ ಪ್ಯಾಟ್ನಲ್ಲಿ ವರದಿಯಾಗಿರುವ ತಾಂತ್ರಿಕ ದೋಷ ಎಂದು ಅವರು ಹೇಳಿದ್ದಾರೆ. ತಮ್ಮ ಮತ ತಾವು ಆಯ್ಕೆ ಮಾಡಿದ ಅಭ್ಯರ್ಥಿಗೆ ಬಿದ್ದಿದೆಯೇ ಎಂಬುದನ್ನು ಪರಿಶೀಲಿಸಲು ಮತದಾರರಿಗೆ ಅನುಕೂಲವಾಗಲು ಕಳೆದ ವರ್ಷ ಹಿಮಾಚಲ ಪ್ರದೇಶ ಹಾಗೂ ಗುಜರಾತ್ನಲ್ಲಿ ವಿವಿ ಪ್ಯಾಟ್ಗಳನ್ನು ಹೊಂದಿರುವ ಇವಿಎಂಗಳನ್ನು ಬಳಸಲಾಗಿತ್ತು. ಮತದಾನದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಖಾತರಿ ನೀಡುವ ಉದ್ದೇಶವನ್ನು ವಿವಿಪ್ಯಾಟ್ಗಳು ಹೊಂದಿತ್ತು.
2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ಗೆ ಮರಳುವಂತೆ ಗುರುವಾರ 17ಕ್ಕೂ ಅಧಿಕ ಪ್ರತಿಕ್ಷಗಳು ಮತ್ತೆ ಆಗ್ರಹಿಸಿವೆ. ವಿವಿ ಪ್ಯಾಟ್ಗಳನ್ನು ಹೊಂದಿದ ಇವಿಎಂಗಳು ನಂಬರ್ಲಹವಲ್ಲ. ತಮ್ಮ ಬೇಡಿಕೆ ಸಲ್ಲಿಸಲು ಮುಂದಿನ ವಾರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಲಾಗುವುದು ಎಂದು ಪ್ರತಿಪಕ್ಷಗಳ ನಾಯಕರು ಹೇಳಿದ್ದಾರೆ. ಇವಿಎಂಗಳ ಕಾರ್ಯಕ್ಷಮತೆ ಸಂಶಯಾಸ್ಪದ ಅಲ್ಲ ಎಂದು ಚಾವ್ಲಾ ಹೇಳಿದ್ದಾರೆ. ‘‘ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಸಮಗ್ರವಾಗಿ ಬಳಸುವ ಮುನ್ನ ಹಲವು ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಲಾಗಿದೆ. ತರುವಾಯ 2009 ಹಾಗೂ 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕೂಡ ಬಳಸಲಾಗಿದೆ’ ಎಂದು ಚಾವ್ಲಾ ಹೇಳಿದ್ದಾರೆ.
ಉತ್ತರಪ್ರದೇಶದ ಕೈರಾನಾ ಹಾಗೂ ಮಹಾರಾಷ್ಟ್ರದ ಭಂಡಾರಗೊಂಡಿಯಾದಲ್ಲಿ ನಡೆದ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಳಸಲಾಗಿದ್ದ ವಿವಿಪ್ಯಾಟ್ಗಳಲ್ಲಿ ತಾಂತ್ರಿಕ ದೋಷ ವರದಿಯಾಗಿರುವುದನ್ನು ಉಲ್ಲೇಖಿಸಿದ ಚಾವ್ಲಾ, ‘‘ನನ್ನ ಪ್ರಕಾರ ಸಮಸ್ಯೆ ವಿವಿಪ್ಯಾಟ್ಗಳಲ್ಲಿದೆ. ಕೆಲವು ಚುನಾವಣೆಯಲ್ಲಿ ಪ್ರಯೋಗಾರ್ಥವಾಗಿ ಆಯ್ಕೆಯ ಸ್ಥಳಗಳಲ್ಲಿ ಬಳಸಿದ ಬಳಿಕ ಇತ್ತೀಚೆಗೆ ವಿವಿ ಪ್ಯಾಟ್ಗಳನ್ನು ಬಳಸಲು ಆರಂಭಿಸಲಾಯಿತು. ವಿವಿಪ್ಯಾಟ್ಗಳಲ್ಲಿ ದೋಷ ಶೇ. 5 ಹಾಗೂ ಅದಕ್ಕಿಂತಲೂ ಹೆಚ್ಚಿರುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದ್ದಾರೆ. ಸಿಬ್ಬಂದಿ ಸರಿಯಾದ ತರಬೇತಿ ಪಡೆಯದಿರುವುದರಿಂದ ಹಾಗೂ ಅಂತರ್ಗತ ಸಮಸ್ಯೆಯಿಂದ ಈ ದೋಷಗಳು ಕಂಡು ಬರುತ್ತಿವೆ ಎಂದು ನಾನು ಹೇಳಲಾರೆ. ಆದರೆ, ದೋಷಗಳು ರಾಜಕೀಯ ಪಕ್ಷಗಳಲ್ಲಿ ಅನುಮಾನ ಉಂಟು ಮಾಡಿದೆ ಎಂದು ಚಾವ್ಲಾ ಹೇಳಿದ್ದಾರೆ.
