‘ಹಿಂದುತ್ವವನ್ನು ಹೈಜಾಕ್ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ’: ಸ್ವಾಮಿ ಅಗ್ನಿವೇಶ್

ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ
‘ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶವನ್ನು ಬೆಂಬಲಿಸುತ್ತೇನೆ, ಮಹಿಳೆಯರಿಗೆ ಸಮಾನತೆ ಇರಬೇಕು’
ವರದಿಗಾರ (ಆ.06): ‘ಹಿಂದುತ್ವವನ್ನು ಹೈಜಾಕ್ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ’ ಎಂದು ದೇಶದ ಹಲವು ದಲಿತ ಸಂಘಟನೆಗಳಿಗೆ ಜೀವ ತುಂಬಿದ ಮಾನವ ಹಕ್ಕು ಹೋರಾಟಗಾರ, ಹಿಂದೂ ಸಂತ, ಅಧ್ಯಾತ್ಮಿಕ ಚಿಂತಕ ಸ್ವಾಮಿ ಅಗ್ನಿವೇಶ್ ಹೇಳಿದ್ದು, ಬಿಜೆಪಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಅವರು ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಶಬರಿಮಲೆ ವಿಷಯದಲ್ಲಿ ರಾಜ್ಯಸರಕಾರದ ನಿಲುವನ್ನು ಬೆಂಬಲಿಸುತ್ತೇನೆ. ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶವನ್ನು ಬೆಂಬಲಿಸುತ್ತೇನೆ. ಮಹಿಳೆಯರಿಗೆ ಸಮಾನತೆ ಇರಬೇಕು ಎಂದು ಹೇಳಿದ್ದಾರೆ. ಇತ್ತೀಚೆಗೆ ವೈಚಾರಿಕತೆಯನ್ನು ವೈಚಾರಿಕತೆಯಲ್ಲಿ ಎದುರಿಸಲಾಗದ ಸಂಘಪರಿವಾರದ ಗೂಂಡಾಗಳು ಸ್ವಾಮಿ ಅಗ್ನಿವೇಶ್ ರವರ ಮೇಲೆ ಜಾರ್ಖಂಡ್ ನಲ್ಲಿ ಹಲ್ಲೆ ನಡೆಸಿದ್ದರು.
