ಮಂಗಳೂರು : ಉಲಮಾ ಸಂಘಟನೆಯಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ವಿದ್ಯಾರ್ಥಿ ಸಂಘಟನೆಯಾಗಿದೆ SKSSF. ಇದರ ಕರ್ನಾಟಕ ರಾಜ್ಯ ಸಮಿತಿಯ ಅಧೀನದಲ್ಲಿ ಕಾರ್ಯಚರಿಸುತ್ತಿರುವ ತ್ವಲಬಾವಿಂಗ್ ಕರ್ನಾಟಕ ರಾಜ್ಯ ಸಮಿತಿಯ ನೂತನ ಕಮಿಟಿಯು ದಿನಾಂಕ 20.8.2017 ಅದಿತ್ಯವಾರ ದಂದು SKSSF ಕೇಂದ್ರೀಯ ಸಮಿತಿ ಪ್ರ.ಕಾರ್ಯದರ್ಶಿ ಬಹು.ಸತ್ತಾರ್ ಪಂದಲ್ಲೂರು ಇವರ ಉಪಸ್ಥಿತಿಯಲ್ಲಿ SKSSF ಕರ್ನಾಟಕ ರಾಜ್ಯಾದ್ಯಕ್ಷರಾದ ಬಹು.ಅನೀಸ್ ಕೌಸರಿ ಇವರ ಅದ್ಯಕ್ಷತೆಯಲ್ಲಿ ಮಂಗಳೂರಿನ ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಲ್ ನಲ್ಲಿ ರಚಿಸಲಾಯಿತು..
ಪ್ರಸಕ್ತ ಸಾಲಿನ ರಾಜ್ಯ ಸಮಿತಿಯ ಚೇರ್’ಮ್ಯಾನ್ ಆಗಿ ಅಹ್ಮದ್ ನಈಂ ಮುಕ್ವೆ (ದ.ಕ.),ವೈಸ್ ಚೇರ್’ಮ್ಯಾನ್ ಗಳಾಗಿ ಅಬ್ದುಲ್ ಸಮದ್ ಆನೆಮಹಲ್(ಹಾಸನ) ಹಾಗೂ ಅಬ್ದುಲ್ ನಾಸಿರ್ (ಕೊಡಗು), ಪ್ರಧಾನ ಸಂಚಾಲಕರಾಗಿ ಆಗಿ ನೌಫಲ್ ಚೀಕ್ನಹಳ್ಳಿ (ಚಿಕ್ಕಮಗಳೂರು), ಉಪ ಸಂಚಾಲಕರಾಗಿ ಮುಹಮ್ಮದ್ ಶಪೀಕ್ ಕಕ್ಕಿಂಜೆ(ದ.ಕನ್ನಡ) ಮತ್ತು ಮುಹಮ್ಮದ್ ಝೈದ್ (ಚಿಕ್ಕಮಗಳೂರು), ಕಾರ್ಯಕಾರಿ ಸಂಚಾಲಕರಾಗಿ ಸ್ವಾದಿಕ್ ಬಜೆಗುಂಡಿ (ಕೊಡಗು) ಹಾಗೂ ಮೀಡಿಯಾ ವಿಂಗ್ ಉಸ್ತುವಾರಿಗಳಾಗಿ ಸಪ್ವಾನ್ ಮಾಪಾಲ್ ಹಾಗೂ ಇಕ್ಬಾಲ್ ಮೂಡಿಗೆರೆ ಹಾಗೂ ರಾಜ್ಯ ಪ್ರತಿನಿಧಿಯಾಗಿ ರಿಯಾಝ್ ಫೈಝಿ ಪಟ್ಟೆ ಸವಣೂರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿದ್ದೀಕ್ ನಾವೂರು, ಶಿಹಾಬ್ ಕೊಡಗು, ಬಶೀರ್ ಕೊಡಗು, ಕಮರುದ್ದೀನ್ ಕೂರ್ಗ್, ಸವಾದ್ ಹಾಸನ, ಫಯಾಝ್ ಹಾಸನ ಇವರನ್ನು ಆರಿಸಲಾಯಿತು…
ಕಾರ್ಯಕ್ರಮದಲ್ಲಿ SKSSF ಕರ್ನಾಟಕ ರಾಜ್ಯ ಪ್ರ.ಕಾರ್ಯದರ್ಶಿ ಆರಿಫ್ ಪೈಝಿ ಕೊಡಗು ಸ್ವಾಗತಿಸಿದರು… SKSSF ರಾಜ್ಯ ಸಮಿತಿ ಅದ್ಯಕ್ಷರಾದ ಅನೀಸ್ ಕೌಸರಿ ಉದ್ಘಾನೆಯನ್ನು ನೆರೆವೇರಿಸಿದರು.SKSSF ಕೇಂದ್ರ ಸಮಿತಿ ಪ್ರ.ಕಾರ್ಯದರ್ಶಿ ಬಹು.ಸತ್ತಾರ್ ಪಂದಲ್ಲೂರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು…ರಾಜ್ಯ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಸೇರಿದಂತೆ ಹಲವು ರಾಜ್ಯ ನಾಯಕರು ಉಪಸ್ಥಿತಿ ಇದ್ದರು.. ಕೊನೆಯಲ್ಲಿ 3 ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು
ವರದಿ : ಸಫ್ವಾನ್ ಮಾಪಾಲ್
