ರಾಜ್ಯ ಸುದ್ದಿ

‘ಮೋದಿ ದೇಶವನ್ನು ಆಳುವುದಕ್ಕೆ ನಾಲಾಯಕ್’: ವಿಮಲಾ ಕೆ.ಎಸ್.

‘ಸಂಘಪರಿವಾರ, ಬಿಜೆಪಿಯನ್ನು  ಭೂಟಪದಿಂದಲೇ ಹೊರದಬ್ಬುವ ಜವಾಬ್ದಾರಿ ನಮ್ಮ ಮೇಲಿದೆ’

ಸ್ವಾಮಿ ಅಗ್ನಿವೇಶ್  ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಸಮಾನ ಮನಸ್ಕರಿಂದ ಪ್ರತಿಭಟನೆ

ವರದಿಗಾರ (ಜು.19): ‘ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದಲಿತರ ಮೇಲೆ ದೌರ್ಜನ್ಯ, ಸ್ವಾಮೀಜಿಗಳ ಮೇಲೆ, ಪ್ರಗತಿಪರರ ಮೇಲೆ, ಚಿಂತಕರ ಮೇಲೆ, ಸಾಮಾಜಿಕ ಕಾರ್ಯಕರ್ತರ ಮೇಲೆ, ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ಹಲ್ಲೆಗಳು ಮಿತಿಮೀರುತ್ತಿದ್ದರೂ ಈ ಬಗ್ಗೆ ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿ ಈ ದೇಶವನ್ನು ಆಳುವುದಕ್ಕೆ ನಾಲಾಯಕ್’ . “Shame on you Mr.Modi, You are not fit to Government of India” ಎಂದು ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ವಿಮಲಾ ಕೆ.ಎಸ್ . ಹೇಳಿದ್ದಾರೆ.

ಅವರು ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಜಾರ್ಖಾಂಡ್ ನಲ್ಲಿ 80 ವರ್ಷದ ಸ್ವಾಮಿ ಅಗ್ನಿವೇಶ್  ಮೇಲೆ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ನಡೆಸಿದ  ಹಲ್ಲೆಯನ್ನು ಖಂಡಿಸಿ ಸಮಾನ ಮಾನಸ್ಕರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.

‘ಪ್ರಪಂಚವನ್ನು ಸುತ್ತಿ ಅದ್ಭುತವಾದ ಭಾಷಣವನ್ನು ಮಾಡುತ್ತಿರುವ ಪ್ರಧಾನಿ ಮೋದಿಯು ಸ್ವಾಮೀಜಿಯ ಮೇಲೆ ಹಲ್ಲೆ ನಡೆದು ಮೂರು ದಿನಗಳಾದರೂ ಮಾತನಾಡದೇ ಇರುವುದರ ಬಗ್ಗೆ ಖೇಧ ವ್ಯಕ್ತಪಡಿಸಿದ ಅವರು ದೇಶವನ್ನು ಆಳುತ್ತಿರುವ ಕೇಂದ್ರ ಸರಕಾರದ ಮೇಲೆ ನಮಗೆ ವಿಶ್ವಾಸವಿಲ್ಲ’ ಎಂದು ಹೇಳಿದ್ದಾರೆ.

dav

ಸಂವಿಧಾನಕ್ಕೆ ವಿರುದ್ಧವಾಗಿ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ. ಗುಂಪು ಹತ್ಯೆ ವಿರುದ್ಧ ನೂತನ ಕಾನೂನನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಆದೇಶಿಸುವಂತಹ ಸ್ಥಿತಿಯನ್ನು ದೇಶದಲ್ಲಿ ಮೋದಿ ನೇತೃತ್ವದ ಸರಕಾರ ಮಾಡಿದೆ. ಕೇವಲ ಇಂತಹ ಪ್ರತಿಭಟನೆ ಮಾತ್ರ ನಮ್ಮ ಜವಾಬ್ದಾರಿಯಲ್ಲ. ಬದಲಾಗಿ 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಸರ್ವನಾಶ ಸಂಘವನ್ನು ನಿರ್ನಾಮ ಮಾಡಬೇಕಾಗಿರುವುದು ನಮ್ಮ ಮೇಲಿರುವ ಸವಾಲಾಗಿದೆ. ಭಾರತದ ರಾಜಕೀಯ ಭೂಪಟದಿಂದಲೇ ಇವರನ್ನು ಹೊರದಬ್ಬುವ ಜವಾಬ್ದಾರಿ ನಮ್ಮ ಮೇಲಿದೆ. 2019ರ ಚುನಾವಣೆ ಮತ್ತು ಬಳಿಕ ಭಾರತ ದೇಶದ ಸಾಮರಸ್ಯ, ಸೌಹಾರ್ದ ಪರಂಪರೆ ಉಳಿಯಬೇಕೆಂದರೆ ಎಲ್ಲರೂ ತಮ್ಮ ಜೀವನದ ಕೊನೆ ಉಸಿರುರುವೆರೆಗೂ ಅದಕ್ಕಾಗಿ ಕೆಲಸ ಮಾಡಬೇಕೆಂದು ವಿಮಲಾ ಕೆ.ಎಸ್. ಪ್ರತಿಭಟನಾಕಾರರಿಗೆ ಕರೆ ನೀಡಿದರು.

ಪ್ರೋ. ರವಿವರ್ಮ ಕುಮಾರ್, ಮರುಳ ಸಿದ್ದಪ್ಪ, ಡಾ.ಎಸ್.ಜಿ ಸಿದ್ದರಾಮಯ್ಯ, ವಡ್ಡಗೆರೆ ನಾಗರಾಜ್ ಸಂದರ್ಭೋಚಿತವಾಗಿ ಪ್ರತಿಭಟನೆಯನ್ನುದ್ದೇಶಿ ಮಾತನಾಡಿದರು.

ಪ್ರತಿಭಟನೆಗೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದು, ಪ್ರತಿಭಟನೆಯಲ್ಲಿ  ಹಿರಿಯ ವಕೀಲ, ಹೋರಾಟಗಾರ ಅನಂತ್ ರಾಮ್, ವೆಲ್ಫೇರ್ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹಿರ್ ಕೊಪ್ಪಳ, ಹಿರಿಯ ಹೋರಾಟಗಾರ ನರಸಿಂಹಮೂರ್ತಿ, ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ರಾಜ್ಯ ಕೋಶಾಧಿಕಾರಿ ಜಾವೆದ್ ಆಝಾಂ, ಹಿರಿಯ ಪತ್ರಕರ್ತ, ಚಿಂತಕ ಶಿವಸುಂದರ್, ಪತ್ರಕರ್ತ ನವೀನ್ ಸೂರಿಂಜೆ  ಹಾಗೂ ಇನ್ನಿತರ ಸಾಮಾಜಿಕ ನಾಯಕರು ಉಪಸ್ಥಿತರಿದ್ದರು.

dav

dav

dav

dav

dav

dav

dav

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group