ವರದಿಗಾರ-ಲಖ್ನೋ: ಪ್ರಾಧ್ಯಾಪಕರ ಅಲ್ಪಸಂಖ್ಯಾತ ವಿರೋಧಿ ಮನಸ್ಥಿತಿಯನ್ನು ವಿರೋಧಿಸಿದಕ್ಕೆ ಇಬ್ಬರು ದಲಿತ ವಿದ್ಯಾರ್ಥಿಗಳ ಮೇಲೆ 25 ವಿದ್ಯಾರ್ಥಿಗಳ ತಂಡ ಲಾಠಿಯಿಂದ ಕಳೆದ ಆದಿತ್ಯವಾರ ಹಲ್ಲೆ ನಡೆಸಿದೆ.
ಲಖ್ನೋ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಕ್ಯಾಂಪಸ್ನ ಹೊರವಲಯದಲ್ಲಿ ಘಟನೆ ನಡೆದಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಶ್ರೇಯತ್ ಬೌದ್ಧ್ ಮತ್ತು ಅಶ್ವಿನಿ ರಂಜನ್ ಎಂದು ಗುರುತಿಸಲಾಗಿದೆ.
ಹಲ್ಲೆಗೊಳಗಾದ Phd ವಿದ್ಯಾರ್ಥಿ ಶ್ರೇಯತ್ ಬೌದ್ಧ್ ಮಾಧ್ಯಮದೊಂದಿಗೆ ಮಾತನಾಡುತ್ತಾ, ನಾವು ಕ್ಯಾಂಪಸ್ ನಿಂದ ಹೊರಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭವನ್ನು ಬಳಸಿಳಿಕೊಂಡ ವಿಶ್ವವಿದ್ಯಾಲಯದ ಇತರ ವಿದ್ಯಾರ್ಥಿಗಳು ನಮ್ಮನ್ನು ತಡೆದಿದ್ದು, ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ಅದಲ್ಲದೆ ಪ್ರಾಣಿ ವಿಜ್ಞಾನ ವಿಭಾಗದ ಮುಖ್ಯಸ್ಥ ಕಮಲ್ ಜೈಸ್ವಾಲ್ ವಿರುದ್ಧವಾಗಿ ಎಂದಿಗೂ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ ಎಂದು ಶ್ರೇಯತ್ ಬೌದ್ಧ್ ತಿಳಿಸಿದ್ದಾರೆ.
ಪ್ರಾಧ್ಯಾಪಕರು ದಲಿತ ವಿರೋಧಿ ಮನಸ್ಥಿತಿಯವರು. ತರಗತಿ ವೇಳೆ ಹಾಗೂ ಸಾರ್ವಜನಿಕವಾಗಿ ಅಲ್ಪಸಂಖ್ಯಾತರ ವಿರುದ್ಧವಾಗಿ ಮಾತನಾಡುತ್ತಿದ್ದರು. ನಾವು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೆವು’ ಎಂದು ಬೌದ್ಧ್ ಹೇಳಿಕೆ ನೀಡಿದ್ದಾರೆ.
ಹಲ್ಲೆಕೋರರಿಂದ ತಪ್ಪಿಸಿಕೊಂಡ ವಿದ್ಯಾರ್ಥಿಗಳು ನಂತರ ಅಶಿಯಾನಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಾಧ್ಯಾಪಕ ಕಮಲ್ ಜೈಸ್ವಾಲ್, ಉಪೇಂದ್ರ ಸಿಂಗ್ ಥೆಕೆದಾರ್, ಶಶಾಂಕ್ ತಿವಾರಿ, ರಿಷಿ ಶುಕ್ಲಾ ಸೇರಿದಂತೆ 25 ಮಂದಿಗಳ ವಿರುದ್ಧ ಪ್ರಥಮ ಮಾಹಿತಿ ವರದಿಯಂತೆ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿ
